ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣದಲ್ಲಿನ ಫಾರೂಕ್ ಅಬ್ದುಲ್ಲಾ ವಿರುದ್ಧದ ಆನ್‌ಲೈನ್ ಅಭಿಯಾನಕ್ಕೆ ಉತ್ಸಾಹಪೂರ್ಣ ಬೆಂಬಲ

ಫಾರೂಖ ಅಬ್ದುಲ್ಲಾ ‘ಕಾಶ್ಮೀರಿ ಜನರು ಚೀನಾದ ಆಡಳಿತವನ್ನು ಬಯಸುತ್ತಾರೆ’ ಎಂಬ ಹೇಳಿಕೆಯ ಪ್ರಕರಣ

ಮುಂಬಯಿ – ಕಾಶ್ಮೀರಿ ನಾಗರಿಕರು ತಮ್ಮನ್ನು ಭಾರತೀಯರೆಂದು ತಿಳಿದುಕೊಳ್ಳುವುದಿಲ್ಲ ಮತ್ತು ಅವರು ಭಾರತೀಯರಾಗಲು ಬಯಸುವುದಿಲ್ಲ. ಚೀನಾ ತನ್ನ ಮೇಲೆ ಆಳ್ವಿಕೆ ನಡೆಸಬೇಕು ಎಂದು ಅವರು ಬಯಸುತ್ತಾರೆ, ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಫಾರೂಖ ಅಬ್ದುಲ್ಲಾ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ದೇಶದ ಎಲ್ಲೆಡೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹೇಳಿಕೆಯನ್ನು ವಿರೋಧಿಸಲು ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ‘ಆನ್‌ಲೈನ್’ ಅಭಿಯಾನವನ್ನು ಪ್ರಾರಂಭಿಸಿದ್ದು, ಕೇಂದ್ರ ಗೃಹ ಸಚಿವರಿಗೆ ಆನ್‌ಲೈನ್ ಮನವಿಯನ್ನು ಕಳುಹಿಸುವ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಸೆಪ್ಟೆಂಬರ್ ೨೮ ರಂದು ಪ್ರಾರಂಭವಾದ ಈ ಅಭಿಯಾನಕ್ಕೆ ಕೇವಲ ನಾಲ್ಕು ದಿನಗಳಲ್ಲಿ ೧,೧೦೦ ಕ್ಕೂ ಹೆಚ್ಚು ಜನರು ಆನ್‌ಲೈನ್‌ನಲ್ಲಿ ಸಹಿಗಳನ್ನು ಮಾಡಿ ಕಳುಹಿಸಿದ್ದಾರೆ.
ಹೆಚ್ಚೆಚ್ಚು ಜನರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.

ಆನ್‌ಲೈನ್ ಅರ್ಜಿಯ ಲಿಂಕ್: https://www.hindujagruti.org/hindi/anti-india-abdullah