ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೋನಾದ ಸೋಂಕು : ಹೆಂಡತಿಯೊಂದಿಗೆ ಪ್ರತ್ಯೇಕಿಕರಣ

ಟ್ರಂಪ್‌ರವರ ಸಲಹೆಗಾರನಿಗೂ ಕೊರೋನಾದ ಸೋಂಕು

ಡೊನಾಲ್ಡ್ ಟ್ರಂಪ್‌ ಮತ್ತು ಪತ್ನಿ ಮೆಲೆನಿಯಾ ಟ್ರಂಪ್

ವಾಷಿಂಗ್‌ಟನ್ – ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೋನಾದ ಸೋಂಕು ತಗಲಿದೆ. ಆದ್ದರಿಂದ ಅವರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಪ್ರತ್ಯೇಕಿಕರಣವಾಗಿದ್ದಾರೆ. ಟ್ರಂಪ್ ಅವರ ಸಲಹೆಗಾರ ಹೋಪ್ ಹಿಕ್ಸ್ ಅವರಿಗೆ ಕರೋನಾದ ಸೋಂಕು ತಗಲಿರುವುದು ಪತ್ತೆಯಾದಾಗ ಟ್ರಂಪ್‌ಗೂ ಕೊರೋನಾದ ಪರೀಕ್ಷಣೆ ಮಾಡಲಾಯಿತು ಈ ಪರೀಕ್ಷಣೆಯ ಫಲಿತಾಂಶ ಬರುವ ಮೊದಲೇ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಪ್ರತ್ಯೇಕಿಕರಣವಾಗಿದ್ದರು. ಈ ಮಾಹಿತಿಯನ್ನು ಸ್ವತಃ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಪ್ರತ್ಯೇಕಿಕರಣದಿಂದಾಗಿ ಟ್ರಂಪ್‌ಗೆ ಚುನಾವಣಾ ಪ್ರಚಾರದಲ್ಲಿ ನೇರ ಭಾಗವಹಿಸಲು ಅವಕಾಶ ಸಿಗುವುದಿಲ್ಲ. ಟ್ರಂಪ್ ಇವರಿಗೆ ಆಗಿರುವ ಕೊರೋನಾ ಸೋಂಕು ಕಳೆದ ಅನೇಕ ದಶಕಗಳಲ್ಲಿ ಅಮೆರಿಕದ ಅಧ್ಯಕ್ಷರಿಗೆ ಅತ್ಯಂತ ಗಂಭೀರ ಆರೋಗ್ಯದ ದೃಷ್ಟಿಯಿಂದ ಎಲ್ಲಕ್ಕಿಂತ ಅಪಾಯಕರ ಎಂದು ಹೇಳಲಾಗುತ್ತದೆ.

ಕರೋನಾ ಪರೀಕ್ಷಾ ವರದಿ ಸಕಾರಾತ್ಮಕ ಬಂದನಂತರ ಟ್ರಂಪ್‌ರವರು ಟ್ವೀಟ್ ಮಾಡಿ ‘ನಾನು ಮತ್ತು ಮೆಲಾನಿಯಾ, ನಮ್ಮ ಕರೋನಾ ಪರೀಕ್ಷೆ ಸಕಾರಾತ್ಮಕವಾಗಿ ಬಂದಿದೆ. ನಾವು ಪ್ರತ್ಯೇಕಿಕರಣದಲ್ಲಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇವೆ, ಅದೇರೀತಿ ನಾವು ಒಟ್ಟಿಗೆ ಇದರಿಂದ ಹೊರಬರುತ್ತೇವೆ.’ ಎಂದು ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಟ್ರಂಪ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಕೆ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುತ್ತಾ, ‘ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಶೀಘ್ರವಾಗಿ ಚೇತರಿಸಿಕೊಳ್ಳಬೇಕು ಮತ್ತು ಉತ್ತಮ ಆರೋಗ್ಯವನ್ನು ಲಭಿಸಲಿ’, ಎಂದು ಹಾರೈಸಿದ್ದಾರೆ.

ಅದೇ ರೀತಿ ಮೆಲೆನಿಯಾ ಟ್ರಂಪ್ ಇವರೂ ಕೂಡಾ ಟ್ವೀಟ್ ಮಾಡಿ, ‘ಅಮೇರಿಕಾದ ನಾಗರಿಕರಿಗೆ, ‘ನಮಗಿಬ್ಬರಿಗೂ ಕೋರೋನಾದ ಸೋಂಕಿಗೆ ಒಳಗಾಗಿದ್ದೇವೆ ಮತ್ತು ನನ್ನ ಮುಂಬರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿದ್ದೇನೆ’ ನೀವೂ ಸುರಕ್ಷಿತವಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಒಟ್ಟಾಗಿ ಇದರಿಂದ ಹೊರಬರೋಣ’, ಎಂದು ಹೇಳಿದ್ದಾರೆ.

ಹೋಪ್ ಹಿಕ್ಸ್‌

ಟ್ರಂಪ್ ಅವರು ಟ್ವೀಟ್‌ನಲ್ಲಿ, ‘ವಿಶ್ರಾಂತಿ ಪಡೆಯದೇ ಸತತವಾಗಿ ಕೆಲಸ ಮಾಡುತ್ತಿರುವ ಹೋಪ್ ಹಿಕ್ಸ್‌ನ ಕೊರೋನಾ ಪರೀಕ್ಷಾ ವರದಿಯಲ್ಲಿ ಸಕಾರಾತ್ಮಕ(ಪಾಸಿಟಿವ್) ಬಂದಿದೆ. ಇದು ಆಘಾತಕಾರಿಯಾಗಿದೆ. ‘ಪ್ರಥಮ ಮಹಿಳೆ’ ಮತ್ತು ನಾನು ನಮ್ಮ ಕರೋನಾ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ. ನಾವು ‘ಕ್ವಾರನ್‌ಟೈನ್’ನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ’ ಎಂದು ಹೇಳಿದ್ದಾರೆ.