ಪಾಟಲಿಪುತ್ರ (ಪಾಟ್ನಾ) ದಲ್ಲಿ ಭಾಜಪ ನಾಯಕನ ಹತ್ಯೆ

  • ಬಿಹಾರದ ಅಧಿಕಾರದಲ್ಲಿ ಭಾಜಪ ಸಹಭಾಗಿಯಾಗಿದ್ದರೂ ತಮ್ಮ ಆಡಳಿತಾವಧಿಯಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಈ ಹತ್ಯೆಗಳನ್ನು ತಡೆಯಲು ಸರಕಾರ ಏನು ಪ್ರಯತ್ನ ಮಾಡಲಿದೆ ಎಂದು ಹಿಂದೂಗಳಿಗೆ ಹೇಳಬೇಕು !

  • ನಿರಂತರವಾಗಿ ಆಗುತ್ತಿರುವ ಹಿಂದೂ ನಾಯಕರ ಹತ್ಯೆಗಳ ಬಗ್ಗೆ ಪ್ರಗತಿ(ಅಧೋಗತಿ)ಪರರು, ಸಾಮ್ಯವಾದಿಗಳು, ಕಾಂಗ್ರೆಸ್ ಮುಂತಾದವರು ಏಕೆ ಮಾತನಾಡುತ್ತಿಲ್ಲ ?

ರಾಜೇಶಕುಮಾರ್ ಝಾ ಅಲಿಯಾಸ್ ರಾಜು ಬಾಬಾ

ಪಾಟಲಿಪುತ್ರ (ಪಾಟ್ನಾ) – ಇಲ್ಲಿಯ ಭಾಜಪದ ಮುಖಂಡ ರಾಜೇಶಕುಮಾರ್ ಝಾ ಅಲಿಯಾಸ್ ರಾಜು ಬಾಬಾರವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅಕ್ಟೋಬರ್ ೧ ರಂದು ಬೆಳಗ್ಗೆ ೬ ಗಂಟೆಗೆ ಬಿವೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ ನಗರದ ಸೀತಾರಾಮ್ ಉತ್ಸವ್ ಹಾಲ್ ಬಳಿ ಈ ಘಟನೆ ನಡೆದಿದೆ. ಝಾ ಇವರು ಕೇವಲ ಎರಡು ದಿನಗಳ ಹಿಂದೆ ಭಾಜಪಗೆ ಸೇರಿದ್ದರು.
ಝಾ ಇವರು ಬೆಳಿಗ್ಗೆ ವಾಯುವಿಹಾರಕ್ಕಾಗಿ ಹೋಗಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಅಪರಿಚಿತ ದಾಳಿಕೋರರು ಝಾ ಇವರ ಕಿವಿಗೆ ಗುಂಡು ಹಾರಿಸಿದ್ದಾರೆ. ಅವರು ಸ್ಥಳದಲ್ಲೇ ಮೃತಪಟ್ಟರು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ಬಳಸಲಾಗುತ್ತಿದೆ.