ಫ್ರಾನ್ಸ್‌ ನ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಜಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ

ಭಾರತದಲ್ಲಿ ಇಂತಹ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳಿಗೆ ಎಂದಾದರೂ ಇಂತಹ ಶಿಕ್ಷೆಯಾಗುತ್ತದೆಯೇ ?

ಕಳೆದ ವರ್ಷ ಮುಂಬೈ ವಿದ್ಯುತ್ ಕಡಿತದಲ್ಲಿ ಚೀನಾದ ಕೈವಾಡ !

ಅಕ್ಟೋಬರ್ ೨೦೨೦ ರಲ್ಲಿ, ಚೀನಾದ ಹ್ಯಾಕರ್ಸ್ ಕೇವಲ ಐದು ದಿನಗಳಲ್ಲಿ ಭಾರತದ ಪವರ್ ಗ್ರಿಡ್, ಐಟಿ ಸಂಸ್ಥೆಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಮೇಲೆ ೪೦,೫೦೦ ಬಾರಿ ದಾಳಿ ನಡೆಸಿದರು.

ಅಮೆರಿಕಾದಲ್ಲಿ ಕೊರೋನಾ ಅವಧಿಯಲ್ಲಿ ಚೀನಾ ಮೂಲದ ಜನರ ಮೇಲಿನ ದಾಳಿಯ ಘಟನೆಗಳಲ್ಲಿ ಹೆಚ್ಚಳ !

‘ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ’ ಎಂದು ಹೇಳುತ್ತಿರುವ ಅಮೆರಿಕಾದ ಸಂಘಟನೆಗಳು ಮತ್ತು ರಾಜಕೀಯ ಸಂಘಟನೆಗಳು ಅಮೇರಿಕಾದಲ್ಲಿ ಇಂತಹ ಘಟನೆಗಳ ಬಗ್ಗೆ ಯಾವಾಗಲೂ ಮೌನವಾಗಿರುತ್ತವೆ!

ಭಾರತವು ಕದನವಿರಾಮವನ್ನು ಪಾಲಿಸುತ್ತದೆ ಆದರೆ ಪಾಕಿಸ್ತಾನವೂ ಅದಕ್ಕೆ ಬದ್ಧವಾಗಿರಬೇಕು ! – ಭಾರತೀಯ ಸೇನೆ

ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸದಿದ್ದರೆ, ಉಭಯ ದೇಶಗಳ ನಡುವೆ ಶಾಂತಿ ನೆಲೆಸಬಹುದು. ಭಾರತವು ಕದನವಿರಾಮಕ್ಕೆ ಬದ್ಧವಾಗಿರುತ್ತದೆ; ಆದರೆ ಪಾಕಿಸ್ತಾನ ಕೂಡ ಇದಕ್ಕೆ ಬದ್ಧವಾಗಿರಬೇಕು ಎಂದು ಭಾರತೀಯ ಸೇನೆಯ ೨೮ ನೇ ಇಂನ್ಫೆಂಟ್ರಿ ಡಿವಿಜನ್‌ನ ಜನರಲ್ ಆಫಿಸರ್ ಕಮಾಂಡಿಂಗ್ (ಜಿ.ಓ.ಸಿ.) ಮೇಜರ್ ಜನರಲ್ ವಿ.ಎಮ್.ಬಿ. ಕೃಷ್ಣನ್ ಹೇಳಿದ್ದಾರೆ.

ಚೀನಾ ಉಯಿಘರ್-ಟರ್ಕಿ ಮುಸ್ಲಿಮರೊಂದಿಗೆ ಸರಿಯಾಗಿ ವ್ಯವಹರಿಸಬೇಕು! – ಟರ್ಕಿ ಚೀನಾಕ್ಕೆ ಕಿವಿಮಾತು !

ಚೀನಾದ ಶಿನಜಿಯಾಂಗ್ ಪ್ರಾಂತ್ಯದ ಪರಿಸ್ಥಿತಿಯ ಮೇಲೆ ಟರ್ಕಿ ನಿಗಾ ವಹಿಸಿದೆ ಮತ್ತು ಉಯಿಘರ್- ಟರ್ಕಿ ಮುಸ್ಲಿಮರೊಂದಿಗೆ ಚೀನಾ ನ್ಯಾಯಯುತವಾಗಿ ವ್ಯವಹರಿಸಬೇಕು ಎಂದು ನಮ್ಮ ಸರ್ಕಾರ ನಂಬಿದೆ ಎಂದು ಟರ್ಕಿಯ ಆಡಳಿತಾರೂಢ ಪಕ್ಷ ಜಸ್ಟಿಸ್‌‌ ಆಂಡ್ ಡೆವಲಪ್‌ಮೆಂಟ್ ಪಾರ್ಟಿಯ ವಕ್ತಾರ ಉಮರ್ ಚೆಲಿಕ್ ಹೇಳಿದ್ದಾರೆ.

ಹಿಂದೂ ದೇವತೆಯ ಅವಮಾನಕರ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತ ಪಕ್ಷದ ಸಂಸದನಿಂದ ಕ್ಷಮೆಯಾಚನೆ !

ಹಿಂದೂ ದೇವತೆಗಳನ್ನು ಅವಮಾನಿಸಿದ ಟ್ವೀಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಇ-ಇನ್ಸಾಫ್ ನ ಸಂಸದ ಅಮೀರ್ ಲಿಯಾಕತ್ ಹುಸೇನ್ ಹಿಂದೂಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅವರು ಈ ಟ್ವೀಟ್ ಅನ್ನು ಸಹ ಅಳಿಸಿದ್ದಾರೆ.

‘ಭಾರತವು ಜಮ್ಮೂ-ಕಾಶ್ಮೀರದ ನಾಗರಿಕರ ಮೇಲೆ ಹೇರಿದ ನಿರ್ಬಂಧಗಳನ್ನು ಸಡಿಲಿಸಬೇಕು ! (ಅಂತೆ) -ತುರ್ಕಸ್ತಾನ

ಭಾರತದ ಆಂತರಿಕ ವಿಷಯಗಳಲ್ಲಿ ತುರ್ಕಿಯು ತಲೆಹಾಕಬಾರದು, ಅದು ತನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕಡೆಗೆ ಗಮನಹರಿಸಬೇಕು. ಕಾಶ್ಮೀರದ ಕುರಿತು ಭಾರತದ ವಿರೋಧಿ ನಿಲುವನ್ನು ಸತತವಾಗಿ ತೆಗೆದುಕೊಳ್ಳುವ ತುರ್ಕಿಗೆ ಅರ್ಥವಾಗುವಂತಹ ಭಾಷೆಯನ್ನು ಬಳಸಬೇಕು !

ಇರಾನಿನಲ್ಲಿ ಕೊಲೆ ಆರೋಪ ಹೊತ್ತಿದ್ದ ಮಹಿಳೆಯನ್ನು ಆಕೆಯ ಮರಣದ ನಂತರವೂ ಗಲ್ಲಿಗೇರಿಸಲಾಯಿತು !

ಇಲ್ಲಿನ ಜಾಹರಾ ಇಸ್ಮಾಯಿಲಿ ಎಂಬ ಮಹಿಳೆ ಹೃದಯಾಘಾತದಿಂದ ಮೃತಪಟ್ಟರು. ತನ್ನ ಗಂಡನನ್ನು ಕೊಂದ ಆರೋಪ ಅವರ ಮೇಲಿತ್ತು. ಪರಿಣಾಮವಾಗಿ, ಆಕೆಯ ದೇಹವನ್ನು ಶರಿಯಾ ಕಾನೂನಿನ ಪ್ರಕಾರ ಮೃತ್ಯುವಾದ ನಂತರವೂ ಗಲ್ಲಿಗೇರಿಸಲಾಯಿತು.

ಯುರೋಪ್ ಗೆ ಬರುತ್ತಿದ್ದ ಮುಸ್ಲಿಂ ನಿರಾಶ್ರಿತರ ಬಗ್ಗೆ ಜಾಗೃತಿ ಮೂಡಿಸಿದ ಕಾರ್ಡಿನಲ್‌ನನ್ನು ಹೊರಹಾಕಿದ ಪೋಪ್

ಯುರೋಪಿನಲ್ಲಿ ಮುಸ್ಲಿಂ ನಿರಾಶ್ರಿತರ ಪ್ರವಾಹ ಮುಂದುವರಿದರೆ, ಶೀಘ್ರದಲ್ಲೇ ವಿಶ್ವದಾದ್ಯಂತ ಇಸ್ಲಾಮಿಕ್ ದಾಳಿಗಳು ಪ್ರಾರಂಭವಾಗುತ್ತವೆ. ವ್ಯಾಟಿಕನ್ ಸಿಟಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದ ನಂತರ ಪೋಪ್ ಫ್ರಾನ್ಸಿಸ್ ಇವರು ೭೫ ವರ್ಷದ ಆಫ್ರಿಕನ್ ಕಾರ್ಡಿನಲ್ ರಾಬರ್ಟ್ ಸಾರಾ ಅವರನ್ನು ವಜಾ ಮಾಡಿದ್ದಾರೆ.

ದಕ್ಷಿಣ ಅಮೆರಿಕದಲ್ಲಿ ಹಿಮಪಾತದಿಂದ ವಿದ್ಯುತ್, ನೀರು ಅಥವಾ ಆಹಾರವಿಲ್ಲದೆ ಲಕ್ಷಾಂತರ ಜನರಹಾಹಾಕಾರ

ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತ ಮತ್ತು ಶೀತಗಾಳಿಯಿಂದ ದಕ್ಷಿಣ ಟೆಕ್ಸಾಸ್‌ನಲ್ಲಿ ಜನಜೀವನವು ಅಸ್ತವ್ಯಸ್ತಗೊಂಡಿದೆ. ಈ ಹಿಮಪಾತವು ಅಮೇರಿಕದ ಪವರ್ ಗ್ರಿಡ್‌ಗೆ ಬಹು ದೊಡ್ಡ ಹಾನಿಯನ್ನುಂಟು ಮಾಡಿದೆ. ಅದರ ಪರಿಣಾಮವಾಗಿ, ೫ ಲಕ್ಷ ಮನೆಗಳಿಗೆ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ.