ಭಾರತದ ಆಂತರಿಕ ವಿಷಯಗಳಲ್ಲಿ ತುರ್ಕಿಯು ತಲೆಹಾಕಬಾರದು, ಅದು ತನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕಡೆಗೆ ಗಮನಹರಿಸಬೇಕು. ಕಾಶ್ಮೀರದ ಕುರಿತು ಭಾರತದ ವಿರೋಧಿ ನಿಲುವನ್ನು ಸತತವಾಗಿ ತೆಗೆದುಕೊಳ್ಳುವ ತುರ್ಕಿಗೆ ಅರ್ಥವಾಗುವಂತಹ ಭಾಷೆಯನ್ನು ಬಳಸಬೇಕು !
ಅಂಕರಾ (ತುರ್ಕಸ್ತಾನ) – ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಮಾತನಾಡಿದ ತುರ್ಕಸ್ತಾನದ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು, ಜಮ್ಮೂ-ಕಾಶ್ಮೀರದಲ್ಲಿ ನಾಗರಿಕರ ಮೇಲೆ ಹೇರಿದ ನಿರ್ಬಂಧಗಳನ್ನು ಸಡಿಲಿಸಬೇಕು, ಎಂದು ನಾವು ಭಾರತವನ್ನು ಒತ್ತಾಯಿಸುತ್ತೇವೆ. ಸಂಯುಕ್ತ ರಾಷ್ಟ್ರದ ಪ್ರಸ್ತಾವದ ಆಧಾರದ ಮೇರೆಗೆ ಜಮ್ಮೂ-ಕಾಶ್ಮೀರದ ಸಮಸ್ಯೆ ಶಾಂತಿಯುತವಾಗಿ ಮತ್ತು ಅಲ್ಲಿಯ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಪರಿಹರಿಸಬೇಕೆಂದು ನಾವು ಬಯಸುತ್ತೇವೆ, ಎಂದು ಹೇಳಿದ್ದಾರೆ.
"We would advise Turkey to practise what it preaches…"
In a strong message to Turkey, New Delhi reminded Ankara of the UN Security Council resolutions on Cyprus after the latter raked UNSC resolutions on Kashmir at UNHRC.
(Report by @sidhant)https://t.co/cRZoWD1LS3
— WION (@WIONews) February 24, 2021
ಇದಕ್ಕೂ ಮೊದಲು ೨೦೨೦ ರ ಸಪ್ಟೆಂಬರನಲ್ಲಿ ತುರ್ಕಿಯ ಅಧ್ಯಕ್ಷ ತೈಯಪ ಎರ್ದೋಗನ ಇವರೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದರು.