ಚೀನಾ ಉಯಿಘರ್-ಟರ್ಕಿ ಮುಸ್ಲಿಮರೊಂದಿಗೆ ಸರಿಯಾಗಿ ವ್ಯವಹರಿಸಬೇಕು! – ಟರ್ಕಿ ಚೀನಾಕ್ಕೆ ಕಿವಿಮಾತು !

ಟರ್ಕಿ ಬುದ್ಧಿ ಹೇಳಿತು, ಚೀನಾ ಕೇಳಿತು ! ಚೀನಾ ತನ್ನ ನಿಲುವು ಬದಲಾಯಿಸಲು ಸಾಧ್ಯವೇ ? ಚೀನಾ ಅಮೇರಿಕಾಗೆ ಸೊಪ್ಪು ಹಾಕುವುದಿಲ್ಲ, ಅಲ್ಲಿ ಟರ್ಕಿಗೆ ಯಾವ ಬೆಲೆಯಿದೆ? ‘ನಾವು ಮುಸ್ಲಿಮರಿಗಾಗಿ ಏನಾದರೂ ಮಾಡುತ್ತಿದ್ದೇವೆ’ ಎಂದು ವಿಶ್ವದಾದ್ಯಂತ ಮುಸ್ಲಿಮರಿಗೆ ತೋರಿಸಲು ಟರ್ಕಿ ಪ್ರಯತ್ನಿಸುತ್ತಿದೆ, ಅಷ್ಟೇ!

ಜಸ್ಟಿಸ್‌‌ ಆಂಡ್ ಡೆವಲಪ್‌ಮೆಂಟ್ ಪಾರ್ಟಿಯ ವಕ್ತಾರ ಉಮರ್ ಚೆಲಿಕ್

ನವ ದೆಹಲಿ : ಚೀನಾದ ಶಿನಜಿಯಾಂಗ್ ಪ್ರಾಂತ್ಯದ ಪರಿಸ್ಥಿತಿಯ ಮೇಲೆ ಟರ್ಕಿ ನಿಗಾ ವಹಿಸಿದೆ ಮತ್ತು ಉಯಿಘರ್- ಟರ್ಕಿ ಮುಸ್ಲಿಮರೊಂದಿಗೆ ಚೀನಾ ನ್ಯಾಯಯುತವಾಗಿ ವ್ಯವಹರಿಸಬೇಕು ಎಂದು ನಮ್ಮ ಸರ್ಕಾರ ನಂಬಿದೆ ಎಂದು ಟರ್ಕಿಯ ಆಡಳಿತಾರೂಢ ಪಕ್ಷ ಜಸ್ಟಿಸ್‌‌ ಆಂಡ್ ಡೆವಲಪ್‌ಮೆಂಟ್ ಪಾರ್ಟಿಯ ವಕ್ತಾರ ಉಮರ್ ಚೆಲಿಕ್ ಹೇಳಿದ್ದಾರೆ. ಚೀನಾದ ಶಿನಜಿಯಾಂಗ್‌ದಲ್ಲಿ ೧ ಕೋಟಿ ಉಯಿಘರ್ ಮುಸ್ಲಿಮರು ನೆಲೆಸಿದ್ದಾರೆ. ಅದರಲ್ಲಿ ಟರ್ಕಿ ಮುಸ್ಲಿಮರ ಸಂಖ್ಯೆ ಶೇ. ೪೫ ರಷ್ಟಿದೆ.

೧. ಪ್ರಾಂತ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಚೆಲಿಕ್, ‘ಈ ಚಿಂತೆಯನ್ನು ಬಗೆಹರಿಸಲು ಏಕೈಕ ಮಾರ್ಗವೆಂದರೆ ಚೀನಾ ಉಯಿಘರ್-ಟರ್ಕಿ ಮುಸ್ಲಿಮರೊಂದಿಗೆ ವ್ಯವಹಾರವನ್ನು ಸುಧಾರಿಸುವುದು’, ಎಂದಿದ್ದಾರೆ. ಕಳೆದ ವರ್ಷ ತನ್ನ ನೀತಿಗಳನ್ನು ಸುಧಾರಿಸುವಂತೆ ಚೀನಾಕ್ಕೆ ಚೆಲಿಕ್ ಕರೆ ನೀಡಿದರು. ಚೀನಾ ಭಯೋತ್ಪಾದಕರು ಮತ್ತು ಅಮಾಯಕ ಜನರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

೨. ಚೀನಾದ ಶಿನಜಿಯಾಂಗ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಕಥಿತ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಟರ್ಕಿ ಕಳವಳ ವ್ಯಕ್ತಪಡಿಸಿದೆ ಎಂದು ಟರ್ಕಿ ವಿದೇಶಾಂಗ ಸಚಿವಾಲಯ ಹೇಳಿದೆ. ಚೀನಾ ಉಯಿಘರ್ ಮುಸ್ಲಿಮರನ್ನು ನಾಗರಿಕರೆಂಬ ದೃಷ್ಟಿಯಿಂದ ನೋಡಬೇಕು ಎಂದು ನಾವು ಬಯಸುತ್ತೇವೆ ಎಂದಿದೆ.

೩. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ೭೫ ನೇ ಸಭೆಯಲ್ಲಿ ಟರ್ಕಿ ಒಂದು ಸಮಿತಿಯು ಉಯಿಘರ್ ಮುಸ್ಲಿಮರ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.