ಇರಾನಿನಲ್ಲಿ ಕೊಲೆ ಆರೋಪ ಹೊತ್ತಿದ್ದ ಮಹಿಳೆಯನ್ನು ಆಕೆಯ ಮರಣದ ನಂತರವೂ ಗಲ್ಲಿಗೇರಿಸಲಾಯಿತು !

ಇದು ಇಸ್ಲಾಮಿಕ್ ದೇಶವಾದ ಇರಾನಿನ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ! ಇಂತಹ ಜನರ ತುಕ್ಕು ಹಿಡಿದ ಮಾನಸಿಕತೆಯನ್ನು ಬದಲಿಸಲು ಯಾವುದೇ ಮಾನವಹಕ್ಕುಗಳ ಸಂಘಟನೆ, ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು ಎಂದು ಕರೆಯಲ್ಪಡುವವರು ಪ್ರಯತ್ನಗಳನ್ನು ಇದುವರೆಗೆ ಕೈಗೊಂಡಿಲ್ಲ ಎಂಬುದನ್ನು ಗಮನಿಸಿ!

ತೆಹ್ರಾನ್ (ಇರಾನ್) – ಇಲ್ಲಿನ ಜಾಹರಾ ಇಸ್ಮಾಯಿಲಿ ಎಂಬ ಮಹಿಳೆ ಹೃದಯಾಘಾತದಿಂದ ಮೃತಪಟ್ಟರು. ತನ್ನ ಗಂಡನನ್ನು ಕೊಂದ ಆರೋಪ ಅವರ ಮೇಲಿತ್ತು. ಪರಿಣಾಮವಾಗಿ, ಆಕೆಯ ದೇಹವನ್ನು ಶರಿಯಾ ಕಾನೂನಿನ ಪ್ರಕಾರ ಮೃತ್ಯುವಾದ ನಂತರವೂ ಗಲ್ಲಿಗೇರಿಸಲಾಯಿತು. ಮಗನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಶಿಕ್ಷೆಯಾಗಬೇಕೆಂದು ಆಕೆಯ ಅತ್ತೆ ಬಯಸಿದ್ದರಿಂದ ಇದನ್ನು ಮಾಡಲಾಗಿದೆ.

ಇರಾನ್‌ದಲ್ಲಿ ಮುಯ್ಯಿಗೆ ಮುಯ್ಯಿ ತೀರಿಸುವ ನಿಯಮವಿದೆ. ಅದರಂತೆ, ತನ್ನ ಮಗನ ಸಾವಿಗೆ ಪ್ರತೀಕಾರ ತೀರಿಸುವ ಹಕ್ಕು ಅತ್ತೆಗೆ ಇದೆ. ಜಾಹರಾ ಇಸ್ಮಾಯಿಲಿಯ ಮೃತದೇಹದ ಕೈಕಾಲುಗಳನ್ನು ಕಟ್ಟಿ ಕುರ್ಚಿಯಲ್ಲಿ ಕೂರಿಸಿ ಕುತ್ತಿಗೆಗೆ ನೇಣು ಬಿಗಿಯಲಾಯಿತು. ಆಗ ಅತ್ತೆ ಕುರ್ಚಿಯನ್ನು ಒದ್ದಳು. ಮೃತದೇಹವನ್ನು ನೇತುಹಾಕುವ ಮೂಲಕ ಜಾಹರಾ ಇಸ್ಮಾಯಿಲಿಯನ್ನು ‘ಗಲ್ಲಿಗೇರಿಸಲಾಯಿತು’.