ಯುರೋಪ್ ಗೆ ಬರುತ್ತಿದ್ದ ಮುಸ್ಲಿಂ ನಿರಾಶ್ರಿತರ ಬಗ್ಗೆ ಜಾಗೃತಿ ಮೂಡಿಸಿದ ಕಾರ್ಡಿನಲ್‌ನನ್ನು ಹೊರಹಾಕಿದ ಪೋಪ್

ಒಬ್ಬ ಪಾದ್ರಿ ಈಗಾಗಲೇ ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಜಾಗರೂಕತೆ ಮೂಡಿಸುತ್ತಿರುವಾಗ ಅವನ ವಿರುದ್ಧ ಅಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರೆ ಯುರೋಪಿನ ಜನರ ಸುರಕ್ಷತೆಯು ಅಪಾಯದಲ್ಲಿದೆ ಎನ್ನಬಹುದು!

* ಕ್ರೈಸ್ತರು ತಮ್ಮನ್ನು ಪ್ರೇಮ ಮತ್ತು ಶಾಂತಿಯ ಪುರಸ್ಕೃತರು ಎಂಬ ಪ್ರತಿಷ್ಠೆಯನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ಬಹಿರಂಗವಾಗಿ ಮಸಿ ಬಳಿಯಲು ಕ್ರೈಸ್ತರ ಧರ್ಮಗುರುಗಳೊಂದಿಗೆ ಈ ರೀತಿಯ ವರ್ತನೆಯಾಗುತ್ತದೆ ಎಂದು ತಿಳಿದುಕೊಳ್ಳಬೇಕೇನು ? ಇದರಿಂದ ವೆಟಿಕನ್ ಚರ್ಚನ ನಿಜಸ್ವರೂಪವು ಗಮನಕ್ಕೆ ಬರುತ್ತದೆ

ಕಾರ್ಡಿನಲ್ ರಾಬರ್ಟ್ ಸಾರಾ

ವ್ಯಾಟಿಕನ್ ಸಿಟಿ – ಯುರೋಪಿನಲ್ಲಿ ಮುಸ್ಲಿಂ ನಿರಾಶ್ರಿತರ ಪ್ರವಾಹ ಮುಂದುವರಿದರೆ, ಶೀಘ್ರದಲ್ಲೇ ವಿಶ್ವದಾದ್ಯಂತ ಇಸ್ಲಾಮಿಕ್ ದಾಳಿಗಳು ಪ್ರಾರಂಭವಾಗುತ್ತವೆ. ವ್ಯಾಟಿಕನ್ ಸಿಟಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದ ನಂತರ ಪೋಪ್ ಫ್ರಾನ್ಸಿಸ್ ಇವರು ೭೫ ವರ್ಷದ ಆಫ್ರಿಕನ್ ಕಾರ್ಡಿನಲ್ ರಾಬರ್ಟ್ ಸಾರಾ ಅವರನ್ನು ವಜಾ ಮಾಡಿದ್ದಾರೆ.

ಅವರು ೨೦೧೯ ರಲ್ಲಿ ಈ ಬೇಡಿಕೆ ಸಲ್ಲಿಸಿದ್ದರು. ರಾಬರ್ಟ್ ಸಾರಾ ಆಫ್ರಿಕಾದ ಗಿನಿಯಾ ಮೂಲದವರು. ಕಳೆದ ೨೦ ವರ್ಷಗಳಿಂದ ಅವರು ವ್ಯಾಟಿಕನ್ ಸಿಟಿಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಪ್ರಸ್ತುತ ಸ್ಥಳೀಯ ಪೂಜೆ ಮತ್ತು ಧಾರ್ಮಿಕ ವಿಧಿಗಳ ಉಸ್ತುವಾರಿ ವಹಿಸಿದ್ದರು. ವಿಶೇಷವೆಂದರೆ ಚರ್ಚ್ ಕಾನೂನಿನ ಪ್ರಕಾರ, ೭೫ ವರ್ಷಗಳ ನಂತರ ಯಾವುದೇ ಪಾದ್ರಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ.

ಆದಾಗ್ಯೂ, ಪೋಪಡಿ ಅನುಮತಿಯೊಂದಿಗೆ, ಕೆಲವು ಪಾದ್ರಿಗಳು ೭೫ ವರ್ಷಗಳ ನಂತರವೂ ಅಧಿಕಾರದಲ್ಲಿದ್ದರು; ಆದಾಗ್ಯೂ, ರಾಬರ್ಟ್ ಸಾರಾ ಅವರಿಗೆ ಹಾಗೆ ಮಾಡಲು ಅನುಮತಿ ನೀಡಲಾಗಿಲ್ಲ. ಮುಸ್ಲಿಂ ನಿರಾಶ್ರಿತರ ಕುರಿತಾದ ಅವರ ಹೇಳಿಕೆಯೇ ಇದರ ಹಿಂದಿನ ಕಾರಣ ಎಂದು ಹೇಳಲಾಗುತ್ತದೆ.