ಅಮೆರಿಕಾದಲ್ಲಿ ಕೊರೋನಾ ಅವಧಿಯಲ್ಲಿ ಚೀನಾ ಮೂಲದ ಜನರ ಮೇಲಿನ ದಾಳಿಯ ಘಟನೆಗಳಲ್ಲಿ ಹೆಚ್ಚಳ !

ದಾಳಿಯನ್ನು ತಡೆಯುವಂತೆ ರಾಷ್ಟ್ರಾಧ್ಯಕ್ಷ ಜೋ ಬೈಡನ್‌ರಿಂದ ಆದೇಶ

  • ಭಾರತದ ಜನರು ಅಮೇರಿಕಾಗಿಂತ ಹೆಚ್ಚು ಸಹಿಷ್ಣುಗಳು. ಆದ್ದರಿಂದ ಕೊರೋನಾ ಇರಲಿ ಗಾಲ್ವಾನ್ ಘರ್ಷಣೆ ಇರಲಿ ಭಾರತದಲ್ಲಿ ಅಮೇರಿಕಾದಂತಹ ಘಟನೆ ಏನೂ ಆಗಿಲ್ಲ.
  • ‘ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ’ ಎಂದು ಹೇಳುತ್ತಿರುವ ಅಮೆರಿಕಾದ ಸಂಘಟನೆಗಳು ಮತ್ತು ರಾಜಕೀಯ ಸಂಘಟನೆಗಳು ಅಮೇರಿಕಾದಲ್ಲಿ ಇಂತಹ ಘಟನೆಗಳ ಬಗ್ಗೆ ಯಾವಾಗಲೂ ಮೌನವಾಗಿರುತ್ತವೆ!

ನ್ಯೂಯಾರ್ಕ್ (ಅಮೇರಿಕಾ) – ಕೊರೋನಾದ ಸಮಯದಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಚೀನಾ ಮೂಲದ ಜನರ ಮೇಲಿನ ದಾಳಿಗಳು ಹೆಚ್ಚಾಗಿವೆ. ಇದನ್ನು ಗಮನಿಸಿದ ಶ್ವೇತಭವನವು ಕಾರ್ಯಕಾರಿ ಆದೇಶ ಹೊರಡಿಸಿದೆ.

ಯಾವುದೇ ಪರಿಸ್ಥಿತಿಯಲ್ಲಿ ಇಂತಹ ದಾಳಿಗಳು ಸ್ವೀಕಾರಾರ್ಹವಲ್ಲ ಎಂದು ಅಧ್ಯಕ್ಷ ಜೋ ಬೈಡನ್ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಶ್ವೇತಭವನದ ಪ್ರಸಾರ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಬಗ್ಗೆ ಮಾತನಾಡುವಾಗ ‘ವಿಶೇಷ’ ಜನರ ಬಗ್ಗೆ ಮಾತನಾಡಬೇಡಿ ಎಂದು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ.

ಮಾಜಿ ಅಧ್ಯಕ್ಷ ಡೊನಲ್ಡ್ ಟ್ರಂಪ್ ಇವರು ಕೊರೋನಾ ಹರಡಲು ಚೀನಾವನ್ನು ದೂಷಿಸಿದ್ದರು. ಟ್ರಂಪ್ ಅವರ ಹೇಳಿಕೆಗಳು ದಾಳಿ ಹೆಚ್ಚಳಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಇದು ಅಮೆರಿಕಾದ ಜನರಲ್ಲಿ ಚೀನಾ ಮೂಲದ ಜನರ ಬಗ್ಗೆ ದ್ವೇಷವನ್ನು ಹುಟ್ಟುಹಾಕಿತು ಮತ್ತು ಅವರನ್ನು ಗುರಿಯಾಗಿಸಲು ಪ್ರಾರಂಭಿಸಿತು. ಕೇವಲ ನ್ಯೂಯಾರ್ಕ್‌ ಒಂದರಲ್ಲೇ ೨೯ ಅಪರಾಧಗಳು ನಡೆದಿವೆ. ಮಾರ್ಚ್‌ನಿಂದ ಡಿಸೆಂಬರ್ ೨೦೨೦ ರವರೆಗೆ, ಅಮೇರಿಕಾದಲ್ಲಿ ಕೊರೋನಾದ ಕಾರಣದಿಂದಾಗಿ ೩ ಸಾವಿರಕ್ಕೂ ಹೆಚ್ಚು ಜನಾಂಗೀಯ ಅಪರಾಧ ಪ್ರಕರಣಗಳು ವರದಿಯಾಗಿವೆ. ಈ ದಾಳಿಗಳ ವಿರುದ್ಧ ಮೆರವಣಿಗೆಯನ್ನು ಸಹ ನಡೆಸಲಾಯಿತು.