ಹಿಂದೂ ದೇವತೆಯ ಅವಮಾನಕರ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತ ಪಕ್ಷದ ಸಂಸದನಿಂದ ಕ್ಷಮೆಯಾಚನೆ !

ಪಾಕಿಸ್ತಾನದಲ್ಲಿ ಹಿಂದೂಗಳಿಂದಾಗುವ ವಿರೋಧದ ಪರಿಣಾಮ !

ಮತಾಂಧರ ಭಯೋತ್ಪಾದನೆಯ ನೆರಳಿನಲ್ಲಿದ್ದರೂ ಪಾಕಿಸ್ತಾನದ ಹಿಂದೂಗಳು ಆಡಳಿತ ಪಕ್ಷದ ಸಂಸದರನ್ನು ಕ್ಷಮೆಯಾಚಿಸುವಂತೆ ಒತ್ತಾಯಿಸುವುದು ಶ್ಲಾಘನೀಯ. ಭಾರತದಲ್ಲಿ ಜನಿಸಿದ ಹಿಂದೂಗಳು ಇದರಿಂದ ಪಾಠ ಕಲಿತ ದಿನವೇ ಸುದಿನ !

ಇಸ್ಲಾಮಾಬಾದ್ (ಪಾಕಿಸ್ತಾನ) – ಹಿಂದೂ ದೇವತೆಗಳನ್ನು ಅವಮಾನಿಸಿದ ಟ್ವೀಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಇ-ಇನ್ಸಾಫ್ ನ ಸಂಸದ ಅಮೀರ್ ಲಿಯಾಕತ್ ಹುಸೇನ್ ಹಿಂದೂಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅವರು ಈ ಟ್ವೀಟ್ ಅನ್ನು ಸಹ ಅಳಿಸಿದ್ದಾರೆ. ‘ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ನನ್ನ ಅರಿವಿಗೆ ಬಂದಿದೆ. ನಾನು ಎಲ್ಲ ಧರ್ಮಗಳನ್ನು ನಂಬುತ್ತೇನೆ, ಅದನ್ನೇ ನನ್ನ ಧರ್ಮ ನನಗೆ ಕಲಿಸಿದೆ’ ಎಂದು ಹುಸೇನ್ ಹೇಳಿದರು. (ಹಾಗಿದ್ದಲ್ಲಿ ಅಂತಹ ಚಿತ್ರವನ್ನು ಪೋಸ್ಟ್ ಮಾಡತ್ತಲೇ ಇರಲಿಲ್ಲ! ಹಿಂದೂಗಳ ವಿರೋಧಕ್ಕೆ ಹುಸೇನ್ ಈಗ ಕ್ಷಮೆಯಾಚಿಸುತ್ತಿದ್ದಾರೆ! – ಸಂಪಾದಕರು) ವಿಪಕ್ಷ ನಾಯಕಿ ಮರಿಯನ್ ನವಾಜ್‌ ಇವರನ್ನು ಅಣಕಿಸುವುದಕ್ಕಾಗಿ ಹುಸೈನ್ ಇವರು ಹಿಂದೂಗಳ ದೇವತೆಗಳ ಚಿತ್ರ ಪೋಸ್ಟ್ ಮಾಡಿದ್ದರು.

ಅನಂತರ ಹಿಂದೂಗಳಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಅವರು ಕ್ಷಮೆಯಾಚಿಸಿದರು. ಪಾಕಿಸ್ತನದ ಹಿಂದೂ ಪರಿಷತ್ತಿನ ಮುಖ್ಯಸ್ಥ ರಮೇಶಕುಮಾರ ವಾಂಕವಾನಿಯವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ‘ಧಾರ್ಮಿಕ ಚಿಂತಕ ಎಂದು ಕರೆಯಲ್ಪಡುವವರು ಈ ರೀತಿ ಟ್ವೀಟ್ ಮಾಡುವುದು ಶೋಭಿಸುವುದಿಲ್ಲ. ಅವರ ನಾಚಿಕೆಗೇಡಿನ ಕೃತ್ಯವನ್ನು ನಾವು ಖಂಡಿಸುತ್ತೇವೆ’, ಎಂದು ಹೇಳಿದ್ದಾರೆ.