ಸರ್ಕೋಜಿಯ ಪರ ವಾದ ಮಂಡಿಸಿದ ವಕೀಲರು ಮತ್ತು ನ್ಯಾಯಾಧೀಶರು ಸಹ ತಪ್ಪಿತಸ್ಥರು!
ಭಾರತದಲ್ಲಿ ಇಂತಹ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳಿಗೆ ಎಂದಾದರೂ ಇಂತಹ ಶಿಕ್ಷೆಯಾಗುತ್ತದೆಯೇ ?
ಪ್ಯಾರಿಸ್ (ಫ್ರಾನ್ಸ್) – ಭ್ರಷ್ಟಾಚಾರದ ಆರೋಪದ ಮೇಲೆ ಫ್ರಾನ್ಸ್ ನ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಜಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸರ್ಕೋಜಿಗೆ ಈ ಪ್ರಕರಣದಲ್ಲಿ ಮೇಲಿನ ನ್ಯಾಯಾಲಯದಲ್ಲಿ ದಾವೆ ಹೂಡುವ ಅವಕಾಶವಿದೆ.
France's former President Nicolas #Sarkozy was found guilty of bribery and sentenced to three years in jail, with two years suspended. Judges found him guilty of trying to bribe a judge and of influence-peddling. pic.twitter.com/FtO8GwOKcw
— Frontline (@Frontlinestory) March 2, 2021
೨೦೦೭ ರ ಚುನಾವಣಾ ಪ್ರಚಾರದ ಸಮಯದಲ್ಲಿ ಕಪ್ಪು ಹಣ ಪಡೆದಿರುವ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಉನ್ನತ ಹುದ್ದೆ ನೀಡುವ ಆಮಿಷ ನೀಡಿ ಅವರಿಂದ ಈ ಪ್ರಕರಣದ ಗೌಪ್ಯ ಮಾಹಿತಿಯನ್ನು ಪಡೆದಿದ್ದರು. ಈ ಪ್ರಕರಣದಲ್ಲಿ ಸರ್ಕೋಜಿಯ ಪರವಾಗಿ ವಾದ ಮಂಡಿಸಿದ ವಕೀಲ ಮತ್ತು ನಿವೃತ್ತ ನ್ಯಾಯಾಧೀಶರೂ ದೋಷಿಯೆನ್ನಲಾಗಿದೆ. ಫ್ರಾನ್ಸ್ ನಲ್ಲಿ ಓರ್ವ ಮಾಜಿ ರಾಷ್ಟ್ರಪತಿಗಳಿಗೆ ಶಿಕ್ಷೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಮಾಜಿ ರಾಷ್ಟ್ರಪತಿ ಜೈಕ್ಸ್ ಚಿರಾಕ್‌ಗೆ ಇವರಿಗೆ ಈಗಾಗಲೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ.