ಕಳೆದ ವರ್ಷ ಮುಂಬೈ ವಿದ್ಯುತ್ ಕಡಿತದಲ್ಲಿ ಚೀನಾದ ಕೈವಾಡ !

ಅಮೆರಿಕಾದ ಸಂಸ್ಥೆಯ ಪ್ರತಿಪಾದನೆ !

ಗಾಲ್ವಾನ್ ಸಂಘರ್ಷಕ್ಕೆ ಪ್ರತಿಕ್ರಿಯಿಸುವ ಪ್ರಯತ್ನ !

  • ಚೀನಾ ವಿವಿಧ ರೀತಿಯಲ್ಲಿ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಇಂತಹ ದಾಳಿಗಳಿಗೆ ಸ್ಪಂದಿಸಲು ಭಾರತ ಸಿದ್ಧವಾಗಿದೆಯೇ?
  • ಭಾರತ ಸರ್ಕಾರವು ಅಮೆರಿಕಾದ ಪತ್ರಿಕೆ ಮಾಡಿರುವ ಪ್ರತಿಪಾದನೆ ನಿಜವೋ ಸುಳ್ಳೋ ಎಂದು ಪರಿಶೀಲಿಸಿ ಅದರ ಹಿಂದಿನ ಸತ್ಯವನ್ನು ಹೊರತರಬೇಕು !

ವಾಷಿಂಗ್ಟನ್ ಡಿಸಿ(ಅಮೆರಿಕಾ) – ಅಕ್ಟೋಬರ್ ೨೦೨೦ ರಲ್ಲಿ, ಚೀನಾದ ಹ್ಯಾಕರ್ಸ್ ಕೇವಲ ಐದು ದಿನಗಳಲ್ಲಿ ಭಾರತದ ಪವರ್ ಗ್ರಿಡ್, ಐಟಿ ಸಂಸ್ಥೆಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಮೇಲೆ ೪೦,೫೦೦ ಬಾರಿ ದಾಳಿ ನಡೆಸಿದರು. ಅಕ್ಟೋಬರ್ ೧೨ ರಂದು ಮುಂಬೈನಲ್ಲಿ ನಡೆದ ‘ಬ್ಲ್ಯಾಕ ಔಟ್(ವಿದ್ಯುತ್ ಪೂರೈಕೆ ಕಡಿತಗೊಳ್ಳುವುದು) ಹಿಂದೆ ಚೀನಾ ಕೈವಾಡವಿದೆ ಎಂದು ಅಮೆರಿಕಾದ ಸೈಬರ್ ರಕ್ಷಣಾ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ‘ರೆಕಾರ್ಡೆಡ್ ಫ್ಯೂಚರ್’ ಎನ್ನುವುದು ಸರ್ಕಾರಿ ಸಂಸ್ಥೆಗಳು ಇಂಟರ್ನೆಟ್ ದುರುಪಯೋಗವನ್ನು ಹೇಗೆ ಮಾಡುತ್ತವೆ ಎಂದು ಅಧ್ಯಯನವನ್ನು ನಡೆಸುವ ಸಂಸ್ಥೆಯಾಗಿದೆ. ಆದರೆ ಈ ವಿಷಯದಲ್ಲಿ ಅವರಿಗೆ ಭಾರತದ ವಿದ್ಯುತ್ ವ್ಯವಸ್ಥೆಯನ್ನು ಪರೀಕ್ಷಿಸಲು ಆಗಲಿಲ್ಲ. ಆದ್ದರಿಂದ ಇದರ ಪೂರ್ಣ ಅನ್ವೇಷಣೆ ಸಾಧ್ಯವಾಗಲಿಲ್ಲ. ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ನಂತರ ಗಾಲ್ವಾನ್ ಕಣಿವೆಯಲ್ಲಿ ಉದ್ವಿಗ್ನತೆ ಹೆಚ್ಚಿತ್ತು. “ಭಾರತ ಹೆಚ್ಚು ಬಲವಾಗಿ ಮುಂದುವರಿದರೆ, ಇಡೀ ದೇಶವು ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ” ಎಂದು ಚೀನಾ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿದೆ. ಚೀನಾ ತನ್ನ ಹ್ಯಾಕರ್‌ಗಳ ಸಹಾಯದಿಂದ ಭಾರತದಲ್ಲಿ ‘ಬ್ಲ್ಯಾಕ ಔಟ್’ ನಡೆಸಲು ತಯಾರಿ ನಡೆಸಿತ್ತು.

೧. ಗಡಿಯಲ್ಲಿ ತನ್ನ ವಿರುದ್ಧ ಭಾರತ ಕ್ರಮ ಕೈಗೊಂಡರೆ, ಭಾರತದಲ್ಲಿ ವಿವಿಧ ಪವರ್ ಗ್ರಿಡ್‌ಗಳ ಮೇಲೆ ಸೈಬರ್ ದಾಳಿ ನಡೆಸುವ ಮೂಲಕ ಅದನ್ನು ಸ್ಥಗಿತಗೊಳಿಸಬಹುದು ಎಂದು ತೋರಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅಧ್ಯಯನ ಹೇಳಿದೆ. ಚೀನೀ ಹ್ಯಾಕರ್‌ಗಳು ಹರಡಿದ ಮಾಲ್‌ವೇರ್ (ವೈರಸ್) ಭಾರತದಲ್ಲಿ ವಿದ್ಯುತ್ ಸರಬರಾಜು ನಿಯಂತ್ರಣ ವ್ಯವಸ್ಥೆಯಲ್ಲಿ ನುಸುಳಿದೆ. ಇದು ಹೈ ವೋಲ್ಟೇಜ್ ಟ್ರಾನ್ಸ್ಮಿಷನ್ ಸಬ್ಸ್ಟೇಷನ್ ಮತ್ತು ಥರ್ಮಲ್ ಪ್ಲಾಂಟ್ ಗಳನ್ನು ಕೂಡ ಸೇರಿದೆ.

೨. ರೆಡ್ ಇಕೋ ಎಂಬ ಚೀನಾದ ಸರ್ಕಾರ ಪುರಸ್ಕೃತ ಹ್ಯಾಕರ್‌ಗಳ ತಂಡ ಭಾರತದಲ್ಲಿ ಹಲವಾರು ವಿದ್ಯುತ್ ಉತ್ಪಾದನೆ ಮತ್ತು ಪ್ರಸಾರ ಮಾರ್ಗಗಳಲ್ಲಿ ನುಸುಳಿ ಕುಳಿತಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟುವರ್ಟ್ ಸೊಲೊಮನ್ ಹೇಳಿದ್ದಾರೆ. ಸೈಬರ್ ಹ್ಯಾಕಿಂಗ್ ತಂತ್ರಜ್ಞಾನವನ್ನು ಬಳಸಲಾಗಿತ್ತು. ಅದೇ ಸಮಯದಲ್ಲಿ, ಮುಂಬೈನ ವಿದ್ಯುತ್ ಸರಬರಾಜಿನಲ್ಲಿ ಕಡಿತವಾಗಿತ್ತು; ಆದರೆ ಇದರ ಹಿಂದೆ ಸೈಬರ್ ದಾಳಿ ಇದೆಯೋ, ಬೇರೆ ಕಾರಣವಿದೆಯೋ ಖಚಿತಪಡಿಸಲಾಗಲಿಲ್ಲ.

೩. ೨೦೨೦ ರ ಅಕ್ಟೋಬರ್ ೧೨ ರ ಬೆಳಗ್ಗೆ ಮುಂಬಯಿಯಲ್ಲಿ ವಿದ್ಯುತ್ ಸರಬರಾಜು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಇದು ಮುಂಬೈಯನ್ನೇ ಸ್ಥಗಿತಗೊಳಿಸಿತು. ಕೊರೊನಾದಿಂದ ಬಳಲುತ್ತಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು ವಿದ್ಯುತ್ ಕಡಿತದಿಂದಾಗಿ ನಿಂತುಹೋದವು. ೨ ಗಂಟೆಗಳ ಪ್ರಯತ್ನದ ನಂತರ ವಿದ್ಯುತ್ ಸರಬರಾಜನ್ನು ಪುನಃ ಪ್ರಾರಂಭಿಸಲಾಯಿತು.