ದಕ್ಷಿಣ ಅಮೆರಿಕದಲ್ಲಿ ಹಿಮಪಾತದಿಂದ ವಿದ್ಯುತ್, ನೀರು ಅಥವಾ ಆಹಾರವಿಲ್ಲದೆ ಲಕ್ಷಾಂತರ ಜನರಹಾಹಾಕಾರ

ಅಮೆರಿಕದಂತಹ ಬಲಾಢ್ಯ ದೇಶವು ಪ್ರಕೃತಿಯ ದಾಳಿಯಿಂದ ಸೋಲೊಪ್ಪಿ ತತ್ತರಿಸಬೇಕಾಗುತ್ತಿದೆ, ಹೀಗಿರುವಾಗ ಅಲ್ಲಿ ಭಾರತದ ಸ್ಥಿತಿ ಏನಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳಬಹುದು. ಅಂತಹ ಆಪತ್ಕಾಲದ ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ಮತ್ತು ಜೀವಂತವಾಗಿರಲು, ಸಾಧನೆಯನ್ನು ಮಾಡಿ ಈಶ್ವರನ ಅನುಗ್ರಹವನ್ನು ಸಂಪಾದಿಸುವುದು ಅವಶ್ಯಕ!


ಟೆಕ್ಸಾಸ್ (ಅಮೇರಿಕಾ) – ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತ ಮತ್ತು ಶೀತಗಾಳಿಯಿಂದ ದಕ್ಷಿಣ ಟೆಕ್ಸಾಸ್‌ನಲ್ಲಿ ಜನಜೀವನವು ಅಸ್ತವ್ಯಸ್ತಗೊಂಡಿದೆ. ಈ ಹಿಮಪಾತವು ಅಮೇರಿಕದ ಪವರ್ ಗ್ರಿಡ್‌ಗೆ ಬಹು ದೊಡ್ಡ ಹಾನಿಯನ್ನುಂಟು ಮಾಡಿದೆ. ಅದರ ಪರಿಣಾಮವಾಗಿ, ೫ ಲಕ್ಷ ಮನೆಗಳಿಗೆ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ. ತೀವ್ರ ಚಳಿಯಿಂದಾಗಿ, ನೀರು ಸರಬರಾಜು ಮಾಡುವ ಸಣ್ಣ ಜಲವಾಹಿನಿಗಳು ಹೆಪ್ಪುಗಟ್ಟಿವೆ. ಅಧ್ಯಕ್ಷ ಜೋ ಬಿಡನ್ ಇವರು ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

೧. ವರ್ಜೀನಿಯಾದಿಂದ ದಕ್ಷಿಣ ಪೆನ್ಸಿಲ್ವೇನಿಯಾ, ಜೊತೆಗೆ ಉತ್ತರ ಕೆರೊಲಿನಾ, ವಾಷಿಂಗ್ಟನ್ ಡಿಸಿ ಮತ್ತು ಫಿಲಿಡೆಲ್ಫಿಯಾದ ಕೆಲವು ಭಾಗಗಳಲ್ಲಿ ಮುಂದಿನ ೨೪ ಗಂಟೆಗಳಲ್ಲಿ ಭಾರಿ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಸಿದೆ,

೨. ಟೆಕ್ಸಾಸ್‌ನ ಸೂಪರ್ ಮಾರ್ಕೆಟ್‌ನಲ್ಲಿನ ಆಹಾರ ಮತ್ತು ತಿಂಡಿಗಳು ಮುಗಿದು ಹೋಗಿವೆ. ಸುಮಾರು ೭೦ ಲಕ್ಷ ಜನರಿಗೆ ಬಿಸಿನೀರು ಬೇಕಾಗಿದೆ. ಹಸಿವಿನಿಂದ ಬಳಲುತ್ತಿರುವ ಜನರು ಆಹಾರಕ್ಕಾಗಿ ಅನ್ನಛತ್ರಗಳ ಮುಂದೆ ೪ ಗಂಟೆಗಳ ಕಾಲ ಸರದಿಯ ಸಾಲಿನಲ್ಲಿ ನಿಲ್ಲಬೇಕಾಗಿದೆ ಹೂಸ್ಟನ್ ನಗರಕ್ಕೆ ಆಹಾರ ಪೂರೈಕೆ ಇಲ್ಲ. ಆದ್ದರಿಂದ ಜನರು ತಮ್ಮ ಹೊಟ್ಟೆಯನ್ನು ತುಂಬಲು ಹಾಳಾದ ಆಹಾರವನ್ನು ಸೇವಿಸಬೇಕಾಗಿದೆ. ನೀರು ಇರುವ ಪ್ರದೇಶಗಳಲ್ಲಿ ನಾಗರಿಕರಿಗೆ ತಣ್ಣೀರು ಕುಡಿಯುವುದು ಅಥವಾ ನೀರಿಲ್ಲದೆ ಉಳಿಯುವುದು ಕೇವಲ ಎರಡು ಆಯ್ಕೆಗಳಿವೆ. ಹೂಸ್ಟನ್‌ನ ಪರಿಸ್ಥಿತಿ ಆಫ್ರಿಕಾದಂತೆಯೇ ಆಗಿದೆ

(ಸೌಜನ್ಯ : CBS 17)