ಎರಡೂ ದೇಶಗಳ ನಡುವೆ ಕಳೆದ ೧೮ ವರ್ಷಗಳಿಂದ ಕದನವಿರಾಮದ ಒಪ್ಪಂದವಿದೆ; ಆದರೆ ಪಾಕಿಸ್ತಾನ ಅದನ್ನು ಎಂದಿಗೂ ಪಾಲಿಸಲಿಲ್ಲ. ಈಗ ಪಾಕಿಸ್ತಾನವು ಭಾರತಕ್ಕೆ ‘ನಾವು ಅದಕ್ಕೆ ಬದ್ಧರಾಗಿರುತ್ತೇವೆ’ ಎಂದು ಹೇಳಿಕೊಂಡಿದೆ; ಆದರೆ ಪಾಕಿಸ್ತಾನವನ್ನು ಯಾರು ನಂಬುತ್ತಾರೆ ? ಆದ್ದರಿಂದ, ಭಾರತ ಯಾವಾಗಲೂ ಜಾಗರೂಕವಾಗಿರಬೇಕು ಮತ್ತು ಪಾಕಿಸ್ತಾನದ ದುಷ್ಕರ್ಮಗಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕು !
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ಕದನವಿರಾಮವನ್ನು ಉಲ್ಲಂಘಿಸದಿದ್ದರೆ, ಉಭಯ ದೇಶಗಳ ನಡುವೆ ಶಾಂತಿ ನೆಲೆಸಬಹುದು. ಭಾರತವು ಕದನವಿರಾಮಕ್ಕೆ ಬದ್ಧವಾಗಿರುತ್ತದೆ; ಆದರೆ ಪಾಕಿಸ್ತಾನ ಕೂಡ ಇದಕ್ಕೆ ಬದ್ಧವಾಗಿರಬೇಕು ಎಂದು ಭಾರತೀಯ ಸೇನೆಯ ೨೮ ನೇ ಇಂನ್ಫೆಂಟ್ರಿ ಡಿವಿಜನ್‌ನ ಜನರಲ್ ಆಫಿಸರ್ ಕಮಾಂಡಿಂಗ್ (ಜಿ.ಓ.ಸಿ.) ಮೇಜರ್ ಜನರಲ್ ವಿ.ಎಮ್.ಬಿ. ಕೃಷ್ಣನ್ ಹೇಳಿದ್ದಾರೆ.
India, Pakistan militaries agree to cross-border ceasefire for first time since 2003 https://t.co/NUAzzMr4Yb
— ABC News (@abcnews) February 25, 2021
ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ ಇವರು ಕದನವಿರಾಮ ಒಪ್ಪಂದದ ಬಗ್ಗೆ ಮಾತನಾಡುತ್ತಾ, ‘ಈ ಒಪ್ಪಂದದ ಮೂಲಕ ಉಭಯ ದೇಶಗಳ ನಡುವಿನ ಸಂಬಂಧಗಳ ಪ್ರಗತಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಭಾರತಕ್ಕೆ ಇದೆ. ನಾವು ಯಾವಾಗಲೂ ಶಾಂತಿಗಾಗಿ ಆಶಿಸುತ್ತೇವೆ. ಬಾಕಿ ಇರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ನಾವು ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. (ಇದರಿಂದ ಇಮ್ರಾನ್ ಖಾನ್ ‘ಈ ಉದ್ಭವಿಸಿರುವ ಅಶಾಂತಿಗೆ ಭಾರತವೇ ಕಾರಣ, ಪಾಕಿಸ್ತಾನವಲ್ಲ’ ಎಂದು ಆರೋಪಿಸುತ್ತಿದ್ದಾರೆ. ಇಂತಹವರೊಂದಿಗೆ ಕದನವಿರಾಮ ಮಡಿಕೊಳ್ಳುವುದು ಆತ್ಮಘಾತವೇ ಆಗಿದೆ ! -ಸಂಪಾದಕರು)
India-Pakistan ceasefire pact won’t affect counter-terrorism operations in J&K, says Armyhttps://t.co/S4HAjCwHW4
— ThePrintIndia (@ThePrintIndia) February 27, 2021