ಕೇರಳದ ಮತಾಂಧ ವೈದ್ಯಕೀಯ ಶಿಕ್ಷಣ ನಿರ್ದೇಶಕರ ಹಿಂದೂದ್ವೇಷವನ್ನು ತಿಳಿಯಿರಿ !
ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ರಮಲಾ ಬೀವಿ ಇವರು ‘ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಅದನ್ನು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆಚರಿಸಬಾರದು’ ಎಂದು ಆದೇಶ ಹೊರಡಿಸಿದ್ದಾರೆ.
ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ರಮಲಾ ಬೀವಿ ಇವರು ‘ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಅದನ್ನು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆಚರಿಸಬಾರದು’ ಎಂದು ಆದೇಶ ಹೊರಡಿಸಿದ್ದಾರೆ.
ಬಂಗಾಲದ ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸರತ್ ಜಹಾನ್ ಅವರು ಸ್ವತಃ ಶ್ರೀ ದುರ್ಗಾದೇವಿಯ ವೇಷ ತೊಟ್ಟ ಫೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮತಾಂಧರು ನುಸರತ್ ಜಹಾನ್‌ಗೆ ಜೀವಬೆದರಿಕೆಯೊಡ್ಡಿದ್ದಾರೆ.
ನೇಪಾಳದ ಗಡಿಯಲ್ಲಿರುವ ಹುಮಲಾ ಗ್ರಾಮದಲ್ಲಿ ಚೀನಾ ನಿರ್ಮಿಸಿದ ೯ ಕಟ್ಟಡಗಳ ವಿರುದ್ಧ ನೇಪಾಳಿ ನಾಗರಿಕರು ಚೀನಾದ ರಾಯಭಾರಿ ಕಚೇರಿಯ ಹೊರಗೆ ಆಂದೋಲನ ನಡೆಸಿದರು. ‘ಇದು ನೇಪಾಳದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಚೀನಾ ನಡೆಸಿದ ಕುತಂತ್ರವಾಗಿದೆ’ ಎಂದು ಆರೋಪಿಸಿದರು.
ಭಾಜಪದ ಜಿಲ್ಲಾ ಕಾರ್ಯದರ್ಶಿ ಗಣೇಶ ರಾಯ್ ಅವರ ಶವವು ಬಂಗಾಲದ ಗೋಘಾಟ್ ರೈಲ್ವೆ ನಿಲ್ದಾಣದ ಬಳಿಯ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ತೃಣಮೂಲ ಕಾಂಗ್ರೆಸ್ ಹತ್ಯೆ ಮಾಡಿದೆ ಎಂದು ಭಾಜಪ ಆರೋಪಿಸಿದೆ.
ತೆಲಂಗಾಣ ಉಚ್ಚ ನ್ಯಾಯಾಲಯವು ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೊಹರಂ ದಿನದಂದು ಹಳೆಭಾಗ್ಯನಗರದಲ್ಲಿ ಮೆರವಣಿಗೆಯನ್ನು ನಡೆಸಲು ಅನುಮತಿ ನೀಡಿರಲಿಲ್ಲ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಆದರೂ ಪೊಲೀಸ್ ಆಯುಕ್ತರು ಮೆರವಣಿಗೆಗೆ ಅನುಮತಿ ನೀಡಿ ಭದ್ರತೆ ಪೂರೈಸಿದ್ದರು.
ಮಧ್ಯಪ್ರದೇಶದ ಶಿವಸೇನೆಯ ಮಾಜಿ ರಾಜ್ಯಮುಖ್ಯಸ್ಥ ರಮೇಶ ಸಾಹು ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಗೋಲಿಬಾರ್‌ನಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡರು. ಈ ಹತ್ಯೆಗೆ ಹಳೆಯ ವಿವಾದ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಬಾಂಗ್ಲಾದೇಶದ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್ದಿಂದ ಅಪಹರಿಸಿ ಅವಳನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯನ್ನು ಮತಾಂತರಿಸಿ ಘಟನೆಯು ನಡೆದಿದೆ. ಎನ್.ಐ.ಎ. ‘ಲವ್ ಜಿಹಾದ್ ನಿಟ್ಟಿನಿಂದ ಇದರ ತನಿಖೆಗೆ ಪ್ರಾರಂಭಿಸಿದೆ.
ಮುಂಬರುವ ‘ಆಶ್ರಮ ಈ ವೆಬ್ ಸಿರೀಸ್ ಮೂಲಕ ಸಾಧುಗಳ ಅವಮಾನ ಮಾಡಿರುವುದರಿಂದ ಅದನ್ನು ನಿಷೇಧಿಸಬೇಕೆಂದು ಧರ್ಮಪ್ರೇಮಿಗಳು ಆಗ್ರಹಿಸಿದ್ದಾರೆ. ಈ ವೆಬ್ ಸಿರೀಜ್‌ನಲ್ಲಿ ‘ಓರ್ವ ಬಾಬಾ ‘ಆಧ್ಯಾತ್ಮಿಕ’ನೆಂದು ನಟಿಸಿ ಅಪರಾಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾನೆಂದು’ ತೋರಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಅವಮಾನ ಮಾಡಿದ ಪ್ರಕರಣದಲ್ಲಿ ನ್ಯಾಯವಾದಿ ಪ್ರಶಾಂತ ಭೂಷಣ ಇವರನ್ನು ನ್ಯಾಯಾಲಯ ದೋಷಿ ಎಂದು ನಿರ್ಧರಿಸಿದೆ. ಅವರ ಶಿಕ್ಷೆಯ ಕುರಿತು ಈಗ ನ್ಯಾಯಾಲಯದಲ್ಲಿ ಆಗಸ್ಟ್ ೨೦ ರಂದು ವಿಚಾರಣೆ ನಡೆಯಲಿದೆ.
೧೯೯೦ ರಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಸ್ಥಳಾಂತರ ಮಾಡಿದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಿದರೆ ‘ಇಲ್ಲಿಯ ಮುಸಲ್ಮಾನರು ಹಿಂದೂಗಳಿಗೆ ಎಂದಿಗೂ ಕಾಶ್ಮೀರದಿಂದ ಹೊರಗೆ ಹಾಕಿಲ್ಲ’, ಎಂಬುದು ತಿಳಿಯುವುದು, ಎಂದು ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ ಅಬ್ದುಲ್ಲಾ ಇವರು ಹೇಳಿದ್ದಾರೆ.