೧. ಪುಣೆ ಮಹಾನಗರ ಪಾಲಿಕೆ ಧರ್ಮದ್ರೋಹವನ್ನು ತಿಳಿಯಿರಿ !
‘ಮೂರ್ತಿದಾನ’ ಅಭಿಯಾನದ ಅಂತರ್ಗತ ಭಕ್ತಾದಿಗಳಿಂದ ವಿಸರ್ಜನೆಗಾಗಿ ದಾನವಾಗಿ ಪಡೆದ ಶ್ರೀ ಗಣೇಶಮೂರ್ತಿಗಳನ್ನು ಪುನರ್‌ಮಾರಾಟ ಮಾಡಲು ಪುಣೆ ಮಹಾನಗರ ಸಭೆಯು ‘ಸ್ಪ್ಲೆಂಡೀಡ ವಿಜನ್’ ಸಾಮಾಜಿಕ ಸಂಸ್ಥೆಗೆ ಅನುಮತಿ ನೀಡಿದ್ದು ಅಂತಹ ಮೂರ್ತಿಗಳನ್ನು ಬೃಹತ್ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ, ಎಂಬುದನ್ನು ಹಿಂದೂ ಜನಜಾಗೃತಿ ಸಮಿತಿಯು ಬೆಳಕಿಗೆ ತಂದಿದೆ.
೨. ನಕ್ಸಲ್‌ವಾದವು ಯಾವಾಗ ನಾಶವಾಗುವುದು ?
ಲಖಿಸರಾಯ(ಬಿಹಾರ)ದಲ್ಲಿ ನಕ್ಸಲವಾದಿಗಳು ಅಪಹರಿಸಿದ್ದ ಓರ್ವ ಅರ್ಚಕನ ಹತ್ಯೆಗೈದರು. ಈ ಅರ್ಚಕನ ಹೆಸರು ನೀರಜ ಝಾ ಎಂದಿದೆ. ನಕ್ಸಲರು ನೀರಜ ಝಾ ಇವರ ಕುಟುಂಬದವರಲ್ಲಿ ೧ ಕೋಟಿ ರೂಪಾಯಿಗಳ ಹಣವನ್ನು ಕೇಳಿದ್ದರು.
೩. ಹಿಂದುತ್ವನಿಷ್ಠರ ರಕ್ಷಣೆ ಯಾವಾಗ ಆಗಲಿದೆ ?
ಮಧ್ಯಪ್ರದೇಶದ ಶಿವಸೇನೆಯ ಮಾಜಿ ರಾಜ್ಯಮುಖ್ಯಸ್ಥ ರಮೇಶ ಸಾಹು ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಗೋಲಿಬಾರ್‌ನಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡರು. ಈ ಹತ್ಯೆಗೆ ಹಳೆಯ ವಿವಾದ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
೪. ಕೇರಳದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಸರಕಾರದ ಹಿಂದೂದ್ವೇಷಿ ಕ್ರೈಸ್ತ ಮಂತ್ರಿಗಳು ಮಾಡಿದ ದೇವತೆಯ ಅವಮಾನವನ್ನು ತಿಳಿಯಿರಿ !
ಕೇರಳ ರಾಜ್ಯದ ಹಣಕಾಸು ಸಚಿವ ಥಾಮಸ್ ಇಸಾಕ್ ಇವರು ಜನತೆಗೆ ಓಣಮ್ ಹಬ್ಬದ ಶುಭಾಶಯಗಳನ್ನು ನೀಡುವ ಟ್ವೀಟ್‌ನಲ್ಲಿ, ‘ವಾಮನ ಮಹಾಬಲಿ (ಬಲಿರಾಜನ) ಯವರ ಆಸ್ಥಾನದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಅವನು ಮಹಾಬಲಿಗೆ ಮೋಸ ಮಾಡಿದನು’ ಎಂದು ಬರೆದಿದ್ದಾರೆ.
೫. ಮಾದಕವಸ್ತುಗಳ ಕಳ್ಳಸಾಗಾಣಿಕೆಯನ್ನು ಬೇರುಸಮೇತ ಕಿತ್ತೊಗೆಯಿರಿ !
ದಕ್ಷಿಣದ ಚಲನಚಿತ್ರರಂಗದ ಅನೇಕ ಖ್ಯಾತ ಕಲಾವಿದರು ಮಾದಕವಸ್ತುಗಳ ಸೇವನೆ ಮಾಡುತ್ತಾರೆ. ಪೊಲೀಸರಿಗೆ ಇದು ತಿಳಿದಿದ್ದರೂ ಅವರು ಕಲಾವಿದರ ರಾಜಕೀಯ ಹಿತಸಂಬಂಧಗಳಿಂದಾಗಿ ಕ್ರಮಕೈಗೊಳ್ಳುವುದಿಲ್ಲ, ಎಂಬುದಾಗಿ ನಟಿ ಮಾಧವಿ ಲತಾ ಹೇಳಿದ್ದಾರೆ.
೬. ಬಾಂಬ್ ತಯಾರಿಸುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿರಿ !
ಕಣ್ಣೂರ(ಕೇರಳ)ನ ಪೊನ್ನಿಯಮ್ ಪ್ರದೇಶದಲ್ಲಿ ಬಾಂಬ್ ತಯಾರಿಸುವಾಗ ಸಂಭವಿಸಿದ ಸ್ಫೋಟದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ಹಿಂದೆಯೂ ಇಲ್ಲಿ ಇಂತಹ ರೀತಿ ಬಾಂಬ್ ಸ್ಫೋಟಗಳ ಘಟನೆಗಳಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಗಾಯಗೊಂಡಿದ್ದರು.
೭. ಇಂತಹ ವೆಬ್ ಸಿರೀಜಗಳನ್ನು ನಿಷೇಧಿಸಿ !
‘ಝೀ ೫’ ಮತ್ತು ‘ಅಲ್ಟ್ ಬಾಲಾಜಿ’ ಆಪ್ಸ್’ನಲ್ಲಿ ಪ್ರಸಾರವಾಗುತ್ತಿರುವ ‘ಬಾಲಾಜಿ ಟೆಲಿಫಿಲ್ಮ್’ನ ‘ವರ್ಜಿನ್ ಭಾಸ್ಕರ್ -೨’ ಅಶ್ಲೀಲತೆಯನ್ನು ಹೊಂದಿದ ವೆಬ್ಸಿ ರೀಜ್‌ನಲ್ಲಿ ‘ಪುಣ್ಯಶ್ಲೋಕ ಅಹಿಲ್ಯಾದೇವಿ ಗರ್ಲ್ಸ್ ಹಾಸ್ಟೇಲ್’ನ ಹೆಸರು ಮತ್ತು ಅದರಲ್ಲಿಯ ಪ್ರಸಂಗವನ್ನು ತೋರಿಸಿ ಅವರನ್ನು ಅವಮಾನಿಸಲಾಗಿದೆ.