ಮಹಿಳೆಯರಿಗೆ ಸ್ವರಕ್ಷಣೆಗಾಗಿ ಆಯುಧವನ್ನು ಇಟ್ಟುಕೊಳ್ಳುವ ಕಾನೂನು ಬೇಕು !

ಥಿರುವೆಲ್ಲೂರು (ತಮಿಳುನಾಡು) ಎಂಬಲ್ಲಿ ೨೪ ವರ್ಷದ ನರಾಧಮನು ೧೯ ವರ್ಷದ ಯುವತಿಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಆ ಯುವತಿಯು ತನ್ನ ರಕ್ಷಣೆಗಾಗಿ ಚೂರಿಯಿಂದ ಆತನ ಕುತ್ತಿಗೆಯ ಮೇಲೆ ಹಲ್ಲೆ ಮಾಡಿ ಕೊಂದಳು.

ಹಿಂದೂಗಳ ದೇವಸ್ಥಾನಗಳ ಸ್ಥಿತಿಯನ್ನು ತಿಳಿಯಿರಿ !

ಮತಾಂಧರು ಆಂಧ್ರಪ್ರದೇಶದ ಶ್ರೀಶೈಲಮ್ ದೇವಸ್ಥಾನವನ್ನು ವಶಪಡಿಸಿ ಕೊಂಡಿದ್ದಾರೆ, ಎಂದು ಭಾಗ್ಯನಗರದ ಭಾಜಪದ ಶಾಸಕ ಟಿ. ರಾಜಾಸಿಂಹರವರು ಆರೋಪಿಸಿದ್ದಾರೆ. ‘ಇಲ್ಲಿಯ ಗೋಶಾಲೆಯಲ್ಲಿ ಗೋಮಾಂಸಕ್ಕಾಗಿ ಗೋವಿಗಳ ಹತ್ಯೆ ಮಾಡಲಾಗುತ್ತಿದೆ’, ಎಂದು ಸಹ ಅವರು ಹೇಳಿದ್ದಾರೆ.

ಹಿಂದೂಗಳ ದೇವಾಲಯಗಳನ್ನು ಮುಕ್ತಗೊಳಿಸಲು ಹಿಂದೂ ರಾಷ್ಟ್ರವೇ ಬೇಕು !

ದೆಹಲಿಯ ಕುತುಬ ಮಿನಾರ ಪರಿಸರದಲ್ಲಿರುವ ಮಸೀದಿಗಳನ್ನು ೨೭ ಹಿಂದೂ ಮತ್ತು ಜೈನರ ದೇವಸ್ಥಾನಗಳನ್ನು ಕೆಡವಿ ಕಟ್ಟಲಾಗಿದ್ದು ಅಲ್ಲಿ ಪುನಃ ದೇವಸ್ಥಾನಗಳ ಪುನರ್ನಿರ್ಮಾಣ ಮಾಡಬೇಕು, ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

ಕೇಂದ್ರ ಸರಕಾರ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು !

ಬ್ರಾಝಿಲ್‌ನ ಜೋನಾಸ ಮಸೇಟಿಯವರು ಭಾರತದ ಗುರುಕುಲದಲ್ಲಿ ೪ ವರ್ಷಗಳ ಕಾಲ ನೆಲೆಸಿ ವೇದಗಳ ಶಿಕ್ಷಣ ಪಡೆದರು ಮತ್ತು ಈಗ ಅವರು ಬ್ರಾಝಿಲ್‌ನಲ್ಲಿ ಶ್ರೀಭಗವದ್ಗೀತೆ ಮತ್ತು ವೇದ ಇವುಗಳ ಶಿಕ್ಷಣ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ‘ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.

ಹಿಂದೂ ರಾಷ್ಟ್ರದ ನಂತರವೇ ಇಂತಹ ಘಟನೆಗಳನ್ನು ತಡೆಯಬಹುದು !

ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡಿದ್ದ ‘ಲುಡೋ’ ಚಲನಚಿತ್ರ ಹಿಂದೂ ದೇವತೆಗಳನ್ನು ಬಹುರೂಪಿ  ವೇಶದಲ್ಲಿ ಚಿತ್ರಿಸುವ ಮೂಲಕ ಅವಮಾನಿಸಲಾಗಿದೆ. ಬ್ರಹ್ಮ, ವಿಷ್ಣು, ಶಂಕರ, ಮಹಾಕಾಳಿ ಮುಂತಾದ ದೇವತೆಗಳನ್ನು ಅವಮಾನಿಸಲಾಗಿದೆ.

ಪಾಕಿಸ್ತಾನವನ್ನು ನಾಶ ಮಾಡಿದಾಗಲೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗುತ್ತದೆ !

ನವೆಂಬರ್ ೧೯ ರ ಬೆಳಗ್ಗೆ ನಾಗರೋಟದ (ಜಮ್ಮು-ಕಾಶ್ಮೀರ) ಬಾನ್ ಟೋಲ್ ನಾಕಾದಲ್ಲಿ ಭಯೋತ್ಪಾದಕರು ಟ್ರಕ್‌ನಿಂದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ೩ ಗಂಟೆಗಳ ಕಾಲ ನಡೆದ ಚಕಮಕಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ.

ದೇವಸ್ಥಾನಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರವೇ ಬೇಕು !

೯ ನವೆಂಬರ್ ೨೦೨೦ ರಂದು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಬಗೆಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಒಂದು ವರ್ಷ ಪೂರ್ಣವಾದ ನಿಮಿತ್ತ #JusticeDemolished (ನ್ಯಾಯ ಉರುಳಿತು) ಎಂಬ ಹ್ಯಾಶ್‌ಟ್ಯಾಗ್‌ದಿಂದ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ ಮತಾಂಧರು ದೇವಸ್ಥಾನವನ್ನು ಕೆಡವಿ ಪುನಃ ಮಸೀದಿಯನ್ನು ಕಟ್ಟುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಹಿಂದೂಗಳ ಆತ್ಮಘಾತಕ ಜಾತ್ಯತೀತತೆಯನ್ನು ತಿಳಿಯಿರಿ !

ಮಥುರಾ (ಉತ್ತರಪ್ರದೇಶ) ನಂದ ಮಹಲ ದೇವಸ್ಥಾನದಲ್ಲಿ ಫೈಸಲ್ ಖಾನ ಮತ್ತು ಮಹಮ್ಮದ ಚಾಂದ ಇವರಿಬ್ಬರು ನಮಾಜುಪಠಣ ಮಾಡುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಅವರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ.

ದೇಶದಲ್ಲಿ ‘ಲವ್ ಜಿಹಾದ’ನ ಘಟನೆಗಳು ಯಾವಾಗ ನಿಲ್ಲುತ್ತವೆ ?

ಫರಿದಾಬಾದ (ಹರಿಯಾಣಾ) ಬಲ್ಲಭಗಡನ ಅಗ್ರವಾಲ ಮಹಾವಿದ್ಯಾಲಯದ ಪ್ರವೇಶದ್ವಾರದ ಹೊರಗೆ ನಿಕಿತಾ ತೋಮರ್ ಎಂಬ ಹಿಂದೂ ಯುವತಿಯನ್ನು ಮತಾಂಧರು ಗುಂಡಿಕ್ಕಿ ಕೊಂದಿದ್ದಾರೆ. ‘ಲವ್ ಜಿಹಾದ್’ನಿಂದ ಈ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಬಂಧಿಸಿದ್ದಾರೆ.

ಹಿಂದುತ್ವನಿಷ್ಠರನ್ನು ಯಾವಾಗ ರಕ್ಷಿಸಲಾಗುತ್ತದೆ ?

ಬುಲಂದಶಹರ (ಉತ್ತರಪ್ರದೇಶ)ದ ಕಾಕೋಡ ಪ್ರದೇಶದಲ್ಲಿ ‘ಹಿಂದೂ ಜಾಗರಣ ಮಂಚ್’ದ ಕಾರ್ಯಕರ್ತ ರಾಹುಲ ಇವರು ಮಾಂಸದ ಅಂಗಡಿಯೊಂದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಮೂವರು ಮತಾಂಧರು ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಪೊಲೀಸರು ನಗರಸೇವಕ ನಫೀಸನನ್ನು ಬಂಧಿಸಿದ್ದು, ಇನ್ನಿಬ್ಬರನ್ನು ಪತ್ತೆ ಹಚ್ಚುತ್ತಿದ್ದಾರೆ