೧. ಬಂಗಾಲದಲ್ಲಿ ಇಂತಹ ಹತ್ಯೆಗಳು ಯಾವಾಗ ನಿಲ್ಲುವವು ?
ಬಂಗಾಲದ ೨೪ ಪರಗಣಾ ಜಿಲ್ಲೆಯ ಟಿಟಾಗಡ ಪೊಲೀಸ್ ಠಾಣೆ ಎದುರು ಅಜ್ಞಾತ ಹಲ್ಲೆಕೋರರು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮತ್ತು ಮಾಜಿ ನಗರಸೇವಕ ಮನೀಶ ಶುಕ್ಲಾ ಇವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಹತ್ಯೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
೨. ಕೇರಳದ ಮತಾಂಧ ವೈದ್ಯಕೀಯ ಶಿಕ್ಷಣ ನಿರ್ದೇಶಕರ ಹಿಂದೂದ್ವೇಷವನ್ನು ತಿಳಿಯಿರಿ !
ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ರಮಲಾ ಬೀವಿ ಇವರು ‘ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಅದನ್ನು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆಚರಿಸಬಾರದು’ ಎಂದು ಆದೇಶ ಹೊರಡಿಸಿದ್ದಾರೆ.
೩. ರಾಹುಲ ಗಾಂಧಿಯವರ ಹಾಸ್ಯಾಸ್ಪದ ಹೇಳಿಕೆಯನ್ನು ತಿಳಿಯಿರಿ !
“ಚೀನಾದ ಪಡೆಗಳು ಭಾರತದ ಗಡಿಯಲ್ಲಿ ನುಸುಳಿವೆ. ಪ್ರಧಾನಿ ನರೇಂದ್ರ ಮೋದಿ ಹೆದರುಪುಕ್ಕ ಆಗಿದ್ದಾರೆ. ನಮ್ಮ ಸರಕಾರ ಇರುತ್ತಿದ್ದರೆ ೧೫ ನಿಮಿಷಗಳಲ್ಲಿ ಚೀನಾ ಸೈನ್ಯವನ್ನು ಹೊರಹಾಕುತ್ತಿದ್ದೆವು”, ಎಂದು ಕಾಂಗ್ರೆಸ್ ಸಂಸದ ರಾಹುಲ ಗಾಂಧಿ ಹೇಳಿದ್ದಾರೆ.
೪. ಮತ್ತೊಂದು ರೀತಿಯ ‘ಲವ್ ಜಿಹಾದ್’ಅನ್ನು ತಿಳಿಯಿರಿ !
ಕಾನಪೂರದ (ಉತ್ತರ ಪ್ರದೇಶ) ‘ನವಾಬ ಸಾಹೇಬ ಹಾತಾ’ ಪ್ರದೇಶದಲ್ಲಿ ಓರ್ವ ಮುಸ್ಲಿಂ ಯುವತಿಯು ಸುಮಿತ ಕನೌಜಿಯಾ ಎಂಬ ಹಿಂದೂ ಯುವಕನನ್ನು ಪ್ರೇಮದಲ್ಲಿ ಸಿಲುಕಿಸಿ ಆತನನ್ನು ಇಸ್ಲಾಂಗೆ ಮತಾಂತರಿಸಿ ಅವನೊಡನೆ ವಿವಾಹ ಮಾಡಿದಳು.
೫. ಅಯೋಗ್ಯ ವಾರ್ತೆಗಳನ್ನು ಪ್ರಸಾರ ಮಾಡುವ ಈ ವಾರ್ತಾವಾಹಿನಿಗಳ ನಿಜ ಸ್ವರೂಪವನ್ನು ತಿಳಿಯಿರಿ !
ನಟ ಸುಶಾಂತ ಸಿಂಗ್ ರಜಪೂತ ಅವರ ಟ್ವೀಟ್‌ಅನ್ನು ಅಯೋಗ್ಯ ರೀತಿಯಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ‘ನ್ಯೂಸ್ ಬ್ರಾಡಕಾಸ್ಟಿಂಗ್ ಸ್ಟ್ಯಾಂಡರ್ಡ್ ಅಥಾರಿಟಿ’ ಹಿಂದಿ ವಾರ್ತಾವಾಹಿನಿ ‘ಆಜ ತಕ್’ ಗೆ ೧ ಲಕ್ಷ ರೂಪಾಯಿ ದಂಡ ವಿಧಿಸಿತು.
೬. ಫಾರೂಕ್ ಅಬ್ದುಲ್ಲಾ ಇವರನ್ನು ಚೀನಾಕ್ಕೆ ಕಳುಹಿಸಿರಿ
ಚೀನಾದ ಬೆಂಬಲದಿಂದ ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ೩೭೦ ಕಲಮ್‌ಅನ್ನು ಜಾರಿಗೆ ತರಲು ಸಾಧ್ಯವಿದೆ, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಇವರು ಹೇಳಿದ್ದಾರೆ. ಅವರು ‘ಕಾಶ್ಮೀರದ ಜನರು ಭಾರತಕ್ಕಿಂತ ಚೀನಾ ಆಡಳಿತ ಮಾಡುವುದನ್ನು ಇಷ್ಟ ಪಡುತ್ತಾರೆ, ಎಂಬ ಹೇಳಿಕೆಯನ್ನು ನೀಡಿದ್ದರು.
೭. ಲವ್ ಜಿಹಾದ್‌ಗೆ ಕುಮ್ಮಕ್ಕು ನೀಡುವುದನ್ನು ತಿಳಿಯಿರಿ
ಟಾಟಾ ಗ್ರೂಪ್‌ನ ‘ತನಿಷ್ಕ ಜ್ಯುವೆಲ್ಲರಿ ಕಂಪನಿಯ ಜಾಹೀರಾತಿನಲ್ಲಿ ‘ಸೀಮಂತದ ವಿಧಿಯನ್ನು ತೋರಿಸುವ ಮೂಲಕ ‘ಲವ್ ಜಿಹಾದ್ ಗೆ ಪ್ರೋತ್ಸಾಹನೆ ನೀಡಲಾಗಿದೆ. ಆದ್ದರಿಂದ ‘#Boycott Tanishq’ ‘ಹ್ಯಾಶ್‌ಟ್ಯಾಗ್ ‘ಟ್ರೆಂಡ್ ಮಾಡಿ ಟ್ವಿಟರ್‌ನಲ್ಲಿ ಪ್ರತಿಭಟನೆ ಮಾಡಿದ ನಂತರ ಅದನ್ನು ತೆಗೆದು ಹಾಕಲಾಯಿತು