ಜಾತ್ಯತೀತವಾದಿಗಳು ಮತ್ತು ಪ್ರಗತಿ (ಅಧೋಗತಿ) ಪರರು ಈಗೇಕೆ ಮೌನವಾಗಿದ್ದಾರೆ ?

೧. ಜಾತ್ಯತೀತವಾದಿಗಳು ಮತ್ತು ಪ್ರಗತಿ (ಅಧೋಗತಿ) ಪರರು ಈಗೇಕೆ ಮೌನವಾಗಿದ್ದಾರೆ ?

ಬಂಗಾಲದ ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸರತ್ ಜಹಾನ್ ಅವರು ಸ್ವತಃ ಶ್ರೀ ದುರ್ಗಾದೇವಿಯ ವೇಷ ತೊಟ್ಟ ಫೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮತಾಂಧರು ನುಸರತ್ ಜಹಾನ್‌ಗೆ ಜೀವಬೆದರಿಕೆಯೊಡ್ಡಿದ್ದಾರೆ.

೨. ಭಾರತಕ್ಕೆ ಇಂತಹ ಸಂಸ್ಥೆಗಳ ಆವಶ್ಯಕತೆ ಇಲ್ಲ !

ಅಂತಾರಾಷ್ಟ್ರೀಯ ಮಾನವಾಧಿಕಾರ ಸಂಸ್ಥೆಯಾದ ‘ಅಮ್ನೆಸ್ಟಿ ಇಂಟರ್‌ನ್ಯಾಶನಲ್’ನ ಭಾರತೀಯ ಶಾಖೆಯು ‘ಇಲ್ಲಿ ಭಾರತ ಸರಕಾರವು ನಮಗೆ ಕಿರುಕುಳ ನೀಡುತ್ತಿದೆ’, ಎಂದು ಆರೋಪಿಸಿ ‘ಮಾನವಾಧಿಕಾರದ ರಕ್ಷಣೆ’ಯ ಕಾರ್ಯವನ್ನು ಪೂರ್ಣವಾಗಿ ನಿಲ್ಲಿಸುತ್ತಿದ್ದೇವೆ’, ಎಂದು ಘೋಷಿಸಿದೆ.

೩. ಜನಸಾಮಾನ್ಯರಿಗೆ ಸಾಧನೆಯನ್ನು ಕಲಿಸದಿರುವ ಪರಿಣಾಮಗಳನ್ನು ತಿಳಿಯಿರಿ !

ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯೂರೋದ ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಪ್ರತಿದಿನ ೮೭ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ೨೦೧೮ ಕ್ಕೆ ಹೋಲಿಸಿದರೆ ೨೦೧೯ ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣವು ಶೇಕಡಾ ೭.೩ ರಷ್ಟು ಹೆಚ್ಚಾಗಿದೆ.

೪. ಹಿಂದೂ ದೇವಾಲಯಗಳಲ್ಲಿ ಯಾರು ಕಳ್ಳತನ ಮಾಡುತ್ತಾರೆ ಎಂಬುದನ್ನು ತಿಳಿಯಿರಿ !

ಕಳೆದ ೧೫ ವರ್ಷಗಳಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿನ ೮೦ ದೇವಸ್ಥಾನಗಳಲ್ಲಿನ ಅರ್ಪಣೆಪೆಟ್ಟಿಗೆಗಳಿಂದ ಹಣವನ್ನು ಕದ್ದಿದ್ದಕ್ಕಾಗಿ ಆಂಧ್ರಪ್ರದೇಶ ಪೊಲೀಸರು ಪಠಾಣ್ ಸಲಾರ್ ಖಾನ್‌ನನ್ನು ಬಂಧಿಸಿದ್ದಾರೆ.

೫. ದೇವಾಲಯಗಳ ಸರಕಾರಿಕರಣವನ್ನು ನಿಲ್ಲಿಸಲು ಸಂಘಟಿತರಾಗಿರಿ !

‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ ನ ಶ್ರೀ. ಟಿ.ಆರ್. ರಮೇಶ ಅವರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಹಿಂದೂ ಧಾರ್ಮಿಕದತ್ತಿ ಇಲಾಖೆಯ ಅಧಿಕಾರಿಗಳು ತಮಿಳುನಾಡಿನ ೪೫ ದೇವಾಲಯಗಳನ್ನು ಅಕ್ರಮವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

೬. ಇಂತಹ ಮತಾಂಧ ಸಂಘಟನೆಗಳನ್ನು ಈಗ ನಿಷೇಧಿಸಿ !

ಬಾಬರಿ ಮಸೀದಿಯನ್ನು ಪುನಃ ನಿರ್ಮಿಸಲಾಗುವುದು, ಇದಕ್ಕೆ ೧ ಸಾವಿರ ವರ್ಷವಾದರೂ ಸರಿ ಎಂದು ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಕಾರ್ಯದರ್ಶಿ ತಸ್ಲೀಮ್ ರಹಮಾನಿ ಇವರು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ.

೭. ಇವರು ಇನ್ನೂ ಏಕೆ ಸ್ವತಂತ್ರವಿದ್ದಾರೆ ?

‘ಇಂದಿರಾ ಗಾಂಧಿಯವರನ್ನು ಕೊಲ್ಲಲು ಗುಂಡು ಸಿಕ್ಕಿತು, ರಾಜೀವ್ ಗಾಂಧಿ ಅವರಿಗೆ ಬಾಂಬ್ ಸಿಕ್ಕಿತು; ಆದರೆ ನರೇಂದ್ರ ಮೋದಿ ಅವರನ್ನು ಕೊಲ್ಲಲು ಬಾಂಬ್ ಸಿಗಲಿಲ್ಲವೇ ? ನರೇಂದ್ರ ಮೋದಿಯವರನ್ನು ಏಕೆ ಸ್ಫೋಟಿಸಬಾರದು ? ಎಂದು ಗೋಂಡವಾನಾ ಗಣತಂತ್ರ ಪಾರ್ಟಿಯ ಮಾಜಿ ಶಾಸಕ ರಾಮಗುಲಾಮ ಉಯಿಕೆ ಹೇಳಿದ್ದಾರೆ.