ನೇಪಾಳಿ ಹಿಂದೂಗಳು ದೇಶದಾದ್ಯಂತ ಚೀನಾವಿರೋಧಿ ಆಂದೋಲನವನ್ನು ನಡೆಸಬೇಕು !

೧. ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಿ !

ಪಶ್ಚಿಮ ಬಂಗಾಲದ ಮೆದಿನಿಪುರ ಜಿಲ್ಲೆಯ ಮೊಯನಾದಲ್ಲಿ ಬಿಜೆಪಿ ಕಾರ್ಯ ಕರ್ತ ದೀಪಕ್ ಮಂಡಲ (೩೨ ವರ್ಷ)  ಇವರನ್ನು ಬಾಂಬ್ ಎಸೆದು ಹತ್ಯೆ ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.

೨. ಈ ಸುಳ್ಳು ಇಸ್ಲಾಮಿ ಇತಿಹಾಸವನ್ನು ಬದಲಾಯಿಸಿ !

‘ತಾಜಮಹಲ್’ದ ಹಿಂದಿನ ಹೆಸರು ‘ತೇಜೋಮಹಾಲಯ’ ಎಂದಿದೆ. ಅಲ್ಲಿ ಭಗವಾನ ಶಿವನ ದೇವಾಲಯವಿತ್ತು. ಜಯಪುರದ ರಾಜಕುಟುಂಬದವರ ಬಳಿ ಇದರ ಸಂಪೂರ್ಣ ಇತಿಹಾಸವು ಸಂರಕ್ಷಿತವಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ತಪ್ಪು ಇತಿಹಾಸವನ್ನು ಬದಲಾಯಿಸಬೇಕು ಎಂದು ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ಹೇಳಿದ್ದಾರೆ.

೩. ನೇಪಾಳಿ ಹಿಂದೂಗಳು ದೇಶದಾದ್ಯಂತ ಚೀನಾವಿರೋಧಿ ಆಂದೋಲನವನ್ನು ನಡೆಸಬೇಕು !

ನೇಪಾಳದ ಗಡಿಯಲ್ಲಿರುವ ಹುಮಲಾ ಗ್ರಾಮದಲ್ಲಿ ಚೀನಾ ನಿರ್ಮಿಸಿದ ೯ ಕಟ್ಟಡಗಳ ವಿರುದ್ಧ ನೇಪಾಳಿ ನಾಗರಿಕರು ಚೀನಾದ ರಾಯಭಾರಿ ಕಚೇರಿಯ ಹೊರಗೆ ಆಂದೋಲನ ನಡೆಸಿದರು. ‘ಇದು ನೇಪಾಳದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಚೀನಾ ನಡೆಸಿದ ಕುತಂತ್ರವಾಗಿದೆ’ ಎಂದು ಆರೋಪಿಸಿದರು.

೪. ಕ್ರೈಸ್ತ ಜಗನಮೋಹನ ರೆಡ್ಡಿ ಅವರ ಹಿಂದೂದ್ವೇಷವನ್ನು ತಿಳಿಯಿರಿ !

ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಇವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಇತರ ಧರ್ಮದವರಿಗೆ ಕಡ್ಡಾಯವಾಗಿರುವ ಭಗವಾನ ವೆಂಕಟೇಶ್ವರನ ಮೇಲೆ ಶ್ರದ್ಧೆ ಇಡುವ ಪ್ರಮಾಣವಚನಕ್ಕೆ ಸಹಿ ಹಾಕಲಿಲ್ಲ.

೫. ಮತಾಂಧರ ಕ್ರೂರ ವರ್ತನೆಯನ್ನು ಯಾವಾಗ ನಿಗ್ರಹಿಸುವಿರಿ ?

ಸೋನಭದ್ರ (ಉತ್ತರಪ್ರದೇಶ)ದಲ್ಲಿ, ಎಜಾಜ್ ಅಹಮದ್ ಎಂಬ ವ್ಯಕ್ತಿಯು ಹಿಂದೂ ಯುವತಿ ಪ್ರಿಯಾ ಸೋನಿ (೨೩ ವರ್ಷ) ಇವಳ ಜೊತೆಗೆ ವಿವಾಹವಾದ ನಂತರ ಅವಳು ಮತಾಂತರವಾಗಲು ನಿರಾಕರಿಸಿದಳೆಂದು ಆಕೆಯ ಶಿರಚ್ಛೇದಿಸಿ ಹತ್ಯೆಗೈದಿದ್ದನು.

೬. ಭಾರತವು ‘ಹಿಂದೂ ರಾಷ್ಟ್ರ’ವಾಗಲಿದೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಡಬೇಕು !

ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದಲ್ಲಿ ಗಾಂಧಿ ಮತ್ತು ನೆಹರೂ ಅವರ ಜಾತ್ಯತೀತ ವಿಚಾರವನ್ನು ತ್ಯಜಿಸಿದೆ. ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿಸಲು ಸಂಘ ಪ್ರಯತ್ನಿಸುತ್ತಿದೆ ಎಂದು ಸಂಯುಕ್ತ ರಾಷ್ಟ್ರಗಳ ಮಹಾಸಭೆಯಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

೭. ಪೊಲೀಸ್ ದಳದಲ್ಲಿರುವ ಮತಾಂಧರ ಅಪರಾಧಿವೃತ್ತಿಯನ್ನು ಅರಿತುಕೊಳ್ಳಿ

ಉತ್ತರ ಪ್ರದೇಶದ ಬಹುಜನಸಮಾಜವಾದಿ ಪಕ್ಷದ ಶಾಸಕ ಮತ್ತು ಕುಖ್ಯಾತ ಗೂಂಡಾ ಮುಖ್ತಾರ ಅನ್ಸಾರಿ ಇವರ ಶಸ್ತ್ರ ಅನುಮತಿಯನ್ನು ಕಾನೂನುಬಾಹಿರವಾಗಿ ನವೀಕರಣ ಮಾಡಿದ ಪೊಲೀಸ್ ಪೇದೆ ಸೇರಾಜ್ ಅಹಮ್ಮದನನ್ನು ಪೊಲೀಸರು ಬಂಧಿಸಿದ್ದಾರೆ.