೧. ಬಂಗಾಲದಲ್ಲಿ ಭಾಜಪ ಕಾರ್ಯಕರ್ತರ ಹತ್ಯೆಗಳು ಯಾವಾಗ ನಿಲ್ಲುವುದು?
ಭಾಜಪದ ಜಿಲ್ಲಾ ಕಾರ್ಯದರ್ಶಿ ಗಣೇಶ ರಾಯ್ ಅವರ ಶವವು ಬಂಗಾಲದ ಗೋಘಾಟ್ ರೈಲ್ವೆ ನಿಲ್ದಾಣದ ಬಳಿಯ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ತೃಣಮೂಲ ಕಾಂಗ್ರೆಸ್ ಹತ್ಯೆ ಮಾಡಿದೆ ಎಂದು ಭಾಜಪ ಆರೋಪಿಸಿದೆ.
೨. ಇಂತಹ ರಾಜಕೀಯ ಪಕ್ಷಗಳ ಬಗ್ಗೆ ಎಚ್ಚರದಿಂದಿರಿ !
ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಚುನಾವಣೆಯು ಸಮೀಪಿಸುತ್ತಿದ್ದಂತೆ ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತ ಮನೆ ಮತ್ತು ಮಾಸಿಕ ೧ ಸಾವಿರ ರೂಪಾಯಿ ಭತ್ತ್ಯೆ ನೀಡುವುದಾಗಿ ಘೋಷಿಸಿದ್ದಾರೆ. ಬಂಗಾಲದಲ್ಲಿ ೮ ಸಾವಿರ ಬ್ರಾಹ್ಮಣ ಅರ್ಚಕರಿದ್ದಾರೆ.
೩. ಉಗ್ರರ ವಿರುದ್ಧ ತ್ವರಿತಗತಿ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಗಲ್ಲಿಗೇರಿಸಿ
ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಒಟ್ಟು ೧೨೨ ಇಸ್ಲಾಮಿಕ್ ಸ್ಟೇಟ್‌ನ ಉಗ್ರರನ್ನು ೧೭ ಪ್ರಕರಣಗಳಲ್ಲಿ ಬಂಧಿಸಲಾಗಿದೆ.
೪. ಹಿಂದೂಗಳ ವಿರುದ್ಧ ನಡೆಯುತ್ತಿರುವ ಅಂತರರಾಷ್ಟ್ರೀಯ ಸಂಚನ್ನು ತಿಳಿಯಿರಿ !
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮತಾಂಧರಿಗೆ ಕಾನೂನು ನೆರವು ನೀಡಲು ಕಾಲಿನ್ ಗೊನ್ಸಾಲ್ವಿಸ್ ಎಂಬ ವ್ಯಕ್ತಿಯ ಹ್ಯುಮನ್ ರೈಟ್ಸ್ ಲಾ ನೆಟವರ್ಕ್ ಸಂಸ್ಥೆಗೆ ಯುರೋಪಿನ ನಾಲ್ಕು ಚರ್ಚಗಳಿಂದ ೫೦ ಕೋಟಿ ರೂ. ನೀಡಲಾಗಿದೆ ಎಂಬ ಮಾಹಿತಿಯನ್ನು ‘ಲೀಗಲ್ ರೈಟ್ ಆಬ್ಸವೇಟರಿ ಸಂಸ್ಥೆಯು ನೀಡಿದೆ.
೫. ಕ್ರೈಸ್ತ ಬ್ರಿಟಿಷ ಸಂಸದರ ಕಾಶ್ಮೀರಿ ಹಿಂದೂಗಳ ಪ್ರೀತಿಯನ್ನು ತಿಳಿಯಿರಿ
ಬ್ರಿಟನ್ನಿನ ಆಡಳಿತಾರೂಢ ಪಕ್ಷದ ಸಂಸದ ಬಾಬ್ ಬ್ಲ್ಯಾಕ್‌ಮನ್ ಇವರು ಜಿಹಾದಿ ಉಗ್ರರಿಂದ ಕಾಶ್ಮೀರದಲ್ಲಾದ ಹಿಂದೂಗಳ ನರಮೇಧದ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಿದರು.
೬. ಕ್ರೈಸ್ತ ಮಿಶನರಿಗಳು ಮತ್ತು ಸಾಮ್ಯವಾದಿಗಳ ಹಿಂದೂವಿರೋಧಿ ಸಂಚನ್ನು ತಿಳಿಯಿರಿ !
ಬುಡಕಟ್ಟು ಜನಾಂಗದವರು ಮುಂದಿನ ಜನಗಣತಿಯಲ್ಲಿ ತಮ್ಮ ಧರ್ಮ ಹಿಂದೂ ಎಂದು ಹೇಳದಂತೆ ತಡೆಯಲು ಕ್ರೈಸ್ತ ಮಿಶನರಿಗಳು ಮತ್ತು ಸಾಮ್ಯವಾದಿಗಳು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮನ್ನು ‘ಗೊಂಡ, ‘ಕಬೀರ್‌ಪಂಥ, ‘ಕೃಷ್ಣಪಂಥ ಎಂದು ಕರೆಯುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.
೭. ಪಾಕಿಸ್ತಾನದ ಮತಾಂಧರ ವಾಸನಾಂಧತೆ ಅರಿತುಕೊಳ್ಳಿ !
ಪಾಕಿಸ್ತಾನದ ಆಡಳಿತಾರೂಢ ಪಕ್ಷ ‘ತಹರೀಕ-ಎ-ಇನ್ಸಾಫ್ನ ಸಂಸದ ಶಂದಾನಾ ಗುಲಜಾರ ಇವರು, ‘ದೇಶದಲ್ಲಿ ಶೇ. ೮೨ ರಷ್ಟು ಬಲಾತ್ಕಾರದ ಘಟನೆಗಳಲ್ಲಿ ಪೀಡಿತೆಯ ಮನೆಯ ಸದಸ್ಯರೇ ಉದಾ. ತಂದೆ, ಸಹೋದರ, ಅಜ್ಜ ಅಥವಾ ದೊಡ್ಡಪ್ಪ-ಚಿಕ್ಕಪ್ಪನವರೇ ಹುಡುಗಿಯರ ಬಲಾತ್ಕಾರ ಮಾಡುತ್ತಾರೆ, ಎಂದು ಹೇಳಿದ್ದಾರೆ.