ಹಿಂದೂಗಳ ದೇವತೆಗಳನ್ನು ಅವಮಾನಿಸುವವರಿಗೂ ಶಿಕ್ಷಿಸಿ !

೧. ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ಹಿಂದೂದ್ವೇಷವನ್ನು ತಿಳಿಯಿರಿ !

ಬಂಗಾಲದಲ್ಲಿ ಶ್ರೀರಾಮಮಂದಿರದ ಭೂಮಿಪೂಜೆಯ ದಿನ ಅನೇಕ ಕಡೆಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆಯನ್ನು ಆಯೋಜಿಸಲಾಗಿತ್ತು. ಆದರೆ ಪೊಲೀಸರು ಮತ್ತು ಮತಾಂಧರು ದೇವಸ್ಥಾನದಲ್ಲಿ ನುಗ್ಗಿ ಅದನ್ನು ತಡೆದರು. ಪೊಲೀಸರು ಹಿಂದೂಗಳಿಗೆ ದೇವಸ್ಥಾನದಿಂದ ಹೊರಗೆಳೆದು ಲಾಠಿ ಬೀಸಿದರು. ಇದರಲ್ಲಿ ದೇವಸ್ಥಾನಗಳಿಗೂ ಹಾನಿ ಉಂಟಾಯಿತು.

೨. ದೇಶದಲ್ಲಿ ಅಸುರಕ್ಷಿತ ದೇವಸ್ಥಾನಗಳು !

ಉತ್ತರಪ್ರದೇಶದ ಆಝಮಗಡ ಜಿಲ್ಲೆಯ ಶೇಖಪುರಾ ಕಬೀರುದ್ದೀನಪೂರ ಈ ಗ್ರಾಮದ ಶಿವಮಂದಿರದಲ್ಲಿ ಅಜ್ಞಾತರು ಭಗವಾನ ಶಿವನ ಮೂರ್ತಿಯನ್ನು ಧ್ವಂಸಗೊಳಿಸಿದ ಘಟನೆಯು ಆಗಸ್ಟ್ ೭ ರ ರಾತ್ರಿ ನಡೆಯಿತು. ಅನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

೩. ಈಗ ಜಾತ್ಯತೀತರು ಮೌನವೇಕೆ ?

‘ಫೇಸ್‌ಬುಕ್’ನಲ್ಲಿ ಮಹಮ್ಮದ್ ಪೈಗಂಬರ್ ಇವರ ಕುರಿತು ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ಮತಾಂಧರು ಆಗಸ್ಟ್ ೧೧ ರ ಮಧ್ಯರಾತ್ರಿ ನಂತರ ಬೆಂಗಳೂರಿನಲ್ಲಿ ಮಾಡಿದ ಗಲಭೆಯಲ್ಲಿ ೬೦ ಮಂದಿ ಪೊಲೀಸರು ಗಾಯಗೊಂಡಿದ್ದರೆ, ಪೊಲೀಸರ ಗೊಂಡೇಟಿಗೆ ಮೂವರು ಮೃತಪಟ್ಟಿದ್ದಾರೆ. ಮತಾಂಧರು ೩೦೦ ವಾಹನಗಳನ್ನು ಸುಟ್ಟು ಹಾಕಿದ್ದಾರೆ.

೪. ಆಪತ್ಕಾಲದಲ್ಲಿ ಧೈರ್ಯದಿಂದಿರಲು ಸಾಧನೆ ಮಾಡಿರಿ !

ಜೋತಿಷಿ ಸಚಿನ ಮಲ್ಹೋತ್ರಾ ಇವರು ಆಗಸ್ಟ್ ೧೫ ರ ಸ್ವಾತಂತ್ರ್ಯದಿನದ ನಂತರ ಭಾರತದ ಜಾತಕದಲ್ಲಿ ಯಾವುದಾದರೊಂದು ಯುದ್ಧ ಅಥವಾ ದೊಡ್ಡ ಮುಖಂಡರೊಬ್ಬರ ವಿಷಯದಲ್ಲಿ ದೊಡ್ಡ ಅವಘಡ ಸಂಭವಿಸುವ ಮುನ್ಸೂಚನೆಗಳು ಸಿಗುತ್ತಿದೆ, ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.

೫. ಹಿಂದೂಗಳ ದೇವತೆಗಳನ್ನು ಅವಮಾನಿಸುವವರಿಗೂ ಶಿಕ್ಷಿಸಿ !

ಸರ್ವೋಚ್ಚ ನ್ಯಾಯಾಲಯದ ಅವಮಾನ ಮಾಡಿದ ಪ್ರಕರಣದಲ್ಲಿ ನ್ಯಾಯವಾದಿ ಪ್ರಶಾಂತ ಭೂಷಣ ಇವರನ್ನು ನ್ಯಾಯಾಲಯ ದೋಷಿ ಎಂದು ನಿರ್ಧರಿಸಿದೆ. ಅವರ ಶಿಕ್ಷೆಯ ಕುರಿತು ಈಗ ನ್ಯಾಯಾಲಯದಲ್ಲಿ ಆಗಸ್ಟ್ ೨೦ ರಂದು ವಿಚಾರಣೆ ನಡೆಯಲಿದೆ.

೬. ‘ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಜೀಡಿಮಣ್ಣಿನ ಶ್ರೀ ಗಣೇಶಮೂರ್ತಿಯನ್ನು ಸ್ಥಾಪಿಸಿ !

ಪರಿಸರಪೂರಕ (ಇಕೋಫ್ರೆಂಡ್ಲಿ) ಗಣೇಶೋತ್ಸವವನ್ನು ಆಚರಿಸಲು ಗಣೇಶಭಕ್ತರು ಜೇಡಿಮಣ್ಣಿನ ಶ್ರೀ ಗಣೇಶಮೂರ್ತಿಯನ್ನು ತರಬೇಕು. ಈ ಮೂರ್ತಿಗೆ ನೈಸರ್ಗಿಕಬಣ್ಣವನ್ನು ಹಚ್ಚಿರಬೇಕು. ಇದರಿಂದ ಗಣೇಶತತ್ತ್ವದ ಹೆಚ್ಚೆಚ್ಚು ಲಾಭವಾಗುತ್ತದೆ.

೭. ಭಾರತದ ನಕಾಶೆಯನ್ನು ಅವಮಾನಿಸಿದವರನ್ನು ಗುರುತಿಸಿ

ಕೇರಳದ ಕಾಂಗ್ರೆಸ್ ಶಾಸಕ ಶನಿಮೋಲ್ ಉಸ್ಮಾನ್, ಗೋವಾದ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷೆ ಪ್ರತಿಮಾ ಕುತಿನ್ಹೋ ಮತ್ತು ಖ್ಯಾತ ಕೇಶರಚನಾಕಾರ ಜಾವೇದ ಹಬೀಬ ಇವರು ಸ್ವಾತಂತ್ರ್ಯದಿನದ ಶುಭಾಶಯ ನೀಡುವ ಚಿತ್ರದಲ್ಲಿ ಭಾರತದ ನಕಾಶೆಯಿಂದ ಕಾಶ್ಮೀರವನ್ನು ತೆಗೆದುಹಾಕಿದ್ದಾರೆ.