ಫಾರೂಕ್ ಅಬ್ದುಲ್ಲಾ ಅವರ ಸುಳ್ಳುಬುರುಕತನವನ್ನು ತಿಳಿಯಿರಿ !

೧. ಫಾರೂಕ್ ಅಬ್ದುಲ್ಲಾ ಅವರ ಸುಳ್ಳುಬುರುಕತನವನ್ನು ತಿಳಿಯಿರಿ !

೧೯೯೦ ರಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಸ್ಥಳಾಂತರ ಮಾಡಿದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಿದರೆ ‘ಇಲ್ಲಿಯ ಮುಸಲ್ಮಾನರು ಹಿಂದೂಗಳಿಗೆ ಎಂದಿಗೂ ಕಾಶ್ಮೀರದಿಂದ ಹೊರಗೆ ಹಾಕಿಲ್ಲ’, ಎಂಬುದು ತಿಳಿಯುವುದು, ಎಂದು ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ ಅಬ್ದುಲ್ಲಾ ಇವರು ಹೇಳಿದ್ದಾರೆ.

೨. ಅಂತಹವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !

‘ಬಾಬರಿ ‘ಮಸೀದಿ’ ಇತ್ತು ಮತ್ತು ಯಾವಾಗಲೂ ಇರಲಿದೆ. ದುಃಖಪಡಬೇಕೆಂದಿಲ್ಲ. ಯಾವುದೇ ಪರಿಸ್ಥಿತಿ ಶಾಶ್ವತವಲ್ಲ’, ಎಂದು ‘ಆಲ್ ಇಂಡಿಯಾ ಮುಸ್ಲೀಮ್ ಪರ್ಸನಲ್ ಲಾ ಬೋರ್ಡ್’ ತನ್ನ ಆಧಿಕೃತ ಟ್ವೀಟ್‌ನಲ್ಲಿ ಬೆದರಿಕೆಯೊಡ್ಡಿದೆ.

೩. ಇಂತಹ ಬೆದರಿಕೆಯೊಡ್ಡುವವರನ್ನು ಸೆರೆಮನೆಗೆ ತಳ್ಳಿರಿ !

ದೇವಸ್ಥಾನವನ್ನು ಕೆಡವಿ ಮಸೀದಿಯನ್ನು ಕಟ್ಟಿರಲಿಲ್ಲ; ಆದರೆ ಈಗ ಹೀಗೆ ಆಗಬಹುದು. ಮಸೀದಿ ಕಟ್ಟಲು ದೇವಸ್ಥಾನ ಬೀಳಿಸಬಹುದು’, ಎಂದು ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇನ್’ ಅಧ್ಯಕ್ಷ ಸಾಜಿದ ರಶೀದಿ ಇವರು ಶ್ರೀರಾಮಮಂದಿರ ಭೂಮಿಪೂಜೆಯ ನಂತರ ಬೆದರಿಕೆಯೊಡ್ಡಿದರು.

೪. ಅದರಲ್ಲಿ ತಪ್ಪೇನಿದೆ ?

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭೂಮಿಪೂಜೆಯನ್ನು ಮಾಡಿ ಪ್ರಧಾನಮಂತ್ರಿ ಮೋದಿಯವರು ಹಿಂದೂ ರಾಷ್ಟ್ರದ ಬುನಾದಿ ಇಟ್ಟಿದ್ದಾರೆ, ಎಂದು ‘ಮಜಲೀಸ-ಎ-ಇತ್ತೇಹಾದುಲ್ ಮುಸ್ಲಿಮಿಯನ್’ ಅಂದರೆ ‘ಎಮ್.ಐ.ಎಮ್. ಪಕ್ಷದ ಸಂಸದ ಅಸದುದ್ದೀನ ಓವೈಸಿ ಹೇಳಿದ್ದಾರೆ.

೫. ಭಾರತದದ ಅಲ್ಪಸಂಖ್ಯಾಂತರ ‘ಜಾತ್ಯತೀತತೆ’ಯನ್ನು ತಿಳಿಯಿರಿ !

ಭಾರತೀಯ ಕ್ರಿಕೆಟ ಆಟಗಾರ ಮಹಮ್ಮದ ಶಮಿ ಇವರ ಪತ್ನಿ ಹಸೀನ ಜಹಾಂ ಇವರು ಶ್ರೀರಾಮಮಂದಿರದ ಭೂಮಿಪೂಜೆಯನ್ನು ಸ್ವಾಗತಿಸಿದ್ದಾರೆ. ಇದರಿಂದಾಗಿ ಅವರಿಗೆ ಮತಾಂಧರು ‘ಬಲಾತ್ಕಾರ ಮಾಡಿ ನಿನ್ನನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಲಾಗಿದೆ.

೬. ಇಂತಹ ಘಟನೆಗಳನ್ನು ತಡೆಯಲು ಪಾಕಿಸ್ತಾನವನ್ನು ನಾಶ ಮಾಡಿ !

ಜಮ್ಮೂ-ಕಾಶ್ಮೀರದ ಓಮಪೊರಾ ಪ್ರದೇಶದಲ್ಲಿ ಭಯೋತ್ಪಾದಕರು ಭಾಜಪದ ಕಾರ್ಯಕರ್ತ ಅಬ್ದುಲ್ ಹಮೀದ ಇವರ ಮೇಲೆ ಗುಂಡು ಹಾರಿಸಿದರು. ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ನಡೆಯುತ್ತಿದೆ. ಈ ಹಿಂದೆ ಭಾಜಪದ ಇಬ್ಬರು ಸರಪಂಚರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

೭. ಸ್ವಾತಂತ್ರ್ಯದಿನದಂದು ಇವುಗಳನ್ನು ಗಮನದಲ್ಲಿಡಿ !

ಅ. ಪ್ರಜಾಪ್ರಭುತ್ವ ದಿನದಂದು ಆಗುವ ರಾಷ್ಟ್ರಧ್ವಜದ ವಿಡಂಬನೆ ಯನ್ನು ನ್ಯಾಯ ಸಮ್ಮತ ಮಾರ್ಗದಿಂದ ನಿಲ್ಲಿಸಿ !

ಆ. ದೇಶಪ್ರೇಮಿ ಕ್ರಾಂತಿಕಾರರ ತೇಜೋವಧೆ ಮಾಡಲು ಬಿಡಬೇಡಿ.