ಹಿಂದೂಗಳು ಇದರಿಂದ ಏನಾದರೂ ಕಲಿಯುವರೇ ?

ಇಂಗ್ಲೆಂಡಿನ ಕ್ರಿಕೇಟ್ ಆಟಗಾರ ಮೊಯಿನ್ ಅಲೀ ಐಪಿಎಲ್ ಕ್ರಿಕೆಟ್ ಸ್ಪರ್ಧೆಯಲ್ಲಿ ಚೆನ್ನೈ ಸೂಪರಕಿಂಗ್ಸ್ ತಂಡದ ಪರವಾಗಿ ಆಡುತ್ತಾರೆ. ಈ ತಂಡದ ಟಿ-ಶರ್ಟ್ ಮೇಲೆ ಒಂದು ಸರಾಯಿ ಕಂಪನಿಯ ಲೋಗೋ ಇದ್ದುದರಿಂದ ಮೊಯಿನ್ ಅಲೀ ಇವರು ಅದನ್ನು ತೆಗೆಯುವಂತೆ ಆಗ್ರಹಿಸಿದಾಗ ಆ ಲೋಗೋವನ್ನು ತೆಗೆಯಲಾಯಿತು.

ಇದು ಹಿಂದೂಗಳದ್ದೇ ಅಧಿಕಾರವಾಗಿದೆ !

ಹಿಂದೂ ಯುವಾ ವಾಹಿನಿಯು ಡೆಹರಾಡೂನದಲ್ಲಿ (ಉತ್ತರಾಖಂಡ) ೧೫೦ ಕ್ಕೂ ಹೆಚ್ಚು ದೇವಸ್ಥಾನಗಳ ಹೊರಗಡೆ ‘ಈ ತೀರ್ಥಸ್ಥಾನ ಹಿಂದೂಗಳಿಗೆ ಪವಿತ್ರ ಸ್ಥಾನವಾಗಿದೆ. ಇಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ, ಎಂಬ ಫಲಕಗಳನ್ನು ಹಾಕಿದೆ. ಪೊಲೀಸರು ಇದರ ಮೇಲೆ ಕ್ರಮಕೈಗೊಳ್ಳುತ್ತಾ ಅವುಗಳನ್ನು ತೆಗೆದುಹಾಕಿದರು.

ಪಾಕಿಸ್ತಾನದಲ್ಲಿ ಹಿಂದೂಗಳ ಅಸಹಾಯಕತೆಯನ್ನು ತಿಳಿಯಿರಿ !

ಪಾಕಿಸ್ತಾನದಲ್ಲಿ ಕಳೆದ ವರ್ಷ ಮತಾಂಧರ ಸಮೂಹವು ಹಿಂದೂಗಳ ಪ್ರಾಚೀನ ಮಂದಿರ ಮತ್ತು ಅಲ್ಲಿನ ಶ್ರೀ ಪರಮಹಂಸಜಿ ಮಹಾರಾಜರ ಸಮಾಧಿಯನ್ನು ಧ್ವಂಸಗೈದು ಬೆಂಕಿ ಹಚ್ಚಿತ್ತು. ಈಗ ಅಲ್ಲಿಯ ಹಿಂದೂಗಳು ಈ ಪ್ರಕರಣದಲ್ಲಿ ಆ ಸಮೂಹವನ್ನು ಕ್ಷಮಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ.

ಚೀನಾದ ಅಪಾಯವನ್ನು ಎದುರಿಸಲು ಭಾರತೀಯರು ಸಿದ್ಧರಿರುವರೇ ?

ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ ಇವರು ದೇಶದ ಸದ್ಯದ ಭದ್ರತೆಯ ಸ್ಥಿತಿ ಅಸ್ಥಿರ ಮತ್ತು ಅನಿಶ್ಚಿತವಾಗಿದೆ. ಇಂತಹ ಸಮಯದಲ್ಲಿ ಸಂಪೂರ್ಣ ಸೈನ್ಯವು ಯುದ್ಧದ ಸಿದ್ಧತೆಯನ್ನು ಹೆಚ್ಚಿಸಬೇಕು ಮತ್ತು ಬಲವನ್ನು ಹೆಚ್ಚಿಸಲು ಸಮನ್ವಯ ಇಡಬೇಕು, ಎಂದು ಸೈನ್ಯಕ್ಕೆ ಕರೆ ನೀಡಿದ್ದಾರೆ.

ಭಾರತದ ಭ್ರಷ್ಟ ರಾಜಕಾರಣಿಗಳಿಗೆ ಇಂತಹ ಶಿಕ್ಷೆಯನ್ನು ನೀಡಲಾಗುತ್ತದೆಯೇ ?

ಫ್ರಾನ್ಸನ ೬೬ ವರ್ಷದ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಝಿ ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಿ ೩ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಾಂಗ್ರೆಸ್ಸಿನ ಢೋಂಗಿ ರೈತಪ್ರೇಮವನ್ನು ತಿಳಿಯಿರಿ !

ಝಾರಖಂಡದಲ್ಲಿ ರೈತರ ಅಂದೋಲನಕ್ಕೆ ಬೆಂಬಲ ನೀಡುವುದಕ್ಕಾಗಿ ಕಾಂಗ್ರೆಸ್‍ನಿಂದ `ಜನ ಆಕ್ರೋಶ ಸಭೆ’ ಯ ಆಯೋಜನೆ ಮಾಡಲಾಗಿತ್ತು. ಈ ಸಮಯಕ್ಕೆ ವೇದಿಕೆಯ ಮೇಲೆ ನರ್ತಕಿಯರಿಂದ ಹಿಂದಿ ಚಲನಚಿತ್ರಗಳ ಹಾಡುಗಳ ತಾಳಕ್ಕೆ ನೃತ್ಯ ಮಾಡಲಾಯಿತು, ಆಗ ವೇದಿಕೆಯ ಮೇಲೆ ಪಕ್ಷದ ಕೆಲವು ಮಹಿಳಾ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

ಭಾರತದಲ್ಲಿನ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಡಿ !

ಜಗತ್ತಿನಲ್ಲಿ ಮುಸಲ್ಮಾನರು ಪರಸ್ಪರರಲ್ಲಿ ಹೋರಾಡಿ ಕೊನೆಗೊಳ್ಳುತ್ತ ಹೊರಟಿದ್ದಾರೆ. ಅಲ್ಲಿಯಂತೂ ಹಿಂದೂ ಮತ್ತು ಕ್ರೈಸ್ತರು ಇರುವುದಿಲ್ಲ. ನಾನು ಭಾರತೀಯ ಮುಸಲ್ಮಾನನಾಗಿದ್ದೇನೆ, ಎಂಬುದು ನನಗೆ ಹೆಮ್ಮೆ ಅನಿಸುತ್ತದೆ, ಎಂದು ಕಾಂಗ್ರೆಸ್ ನಾಯಕ ಗುಲಾಮ ನಬಿ ಆಝಾದ್ ಇವರು ರಾಜ್ಯಸಭೆಯಲ್ಲಿ ಪ್ರತಿಪಾದನೆ ಮಾಡಿದರು.

ಇಂತಹವರಿಗೆ ಸೆರೆಮನೆಗೆ ತಳ್ಳಿ !

ಇಂದಿನ ಹಿಂದೂ ಸಮಾಜವು ಪೂರ್ಣವಾಗಿ ಕೊಳೆತ್ತಿದ್ದು ಭಾರತದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ, ಎಂದು ಅಲೀಗಡ ಮುಸ್ಲೀಮ ವಿದ್ಯಾ ಪೀಠದ ವಿದ್ಯಾರ್ಥಿ ಶರಜೀಲ ಉಸ್ಮಾನಿ ಇವನು ಪುಣೆಯ ಎಲ್ಗಾರ ಪರಿಷತ್ತಿನಲ್ಲಿ ವಿಷ ಕಕ್ಕಿದನು.

ಹಿಂಸಾಚಾರಿಗಳ ವಿರುದ್ಧ ಉಗ್ರಕ್ರಮ ಕೈಗೊಳ್ಳಿರಿ !

ಜನವರಿ ೨೬ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಆಂದೋಲನ ಮಾಡುವ ರೈತರು ಟ್ರ್ಯಾಕ್ಟರ್ ಮೋರ್ಚಾವನ್ನು ತೆಗೆದಿದ್ದರು; ಆದರೆ ಇದರಲ್ಲಿ ಬೃಹತ್ಪ್ರಮಾಣದಲ್ಲಿ ಅವರಿಂದ ಹಿಂಸಾಚಾರವಾಯಿತು. ಇದರಲ್ಲಿ ಇಬ್ಬರು ರೈತರು ಮೃತಪಟ್ಟರೆ, ೧೮ ಪೊಲೀಸರು ಗಾಯಗೊಂಡರು.

ಇಂತಹವರಿಗೆ ಗಲ್ಲು ಶಿಕ್ಷೆಯಾಗುವಂತಹ ಕಾನೂನು ರೂಪಿಸಿ !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕಲ್ಯಾಣ ಬ್ಯಾನರ್ಜಿಯವರು ದೇವಿ ಸೀತಾಮಾತೆಗೆ ಅವಮಾನಿಸಿದ್ದರಿಂದಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.