ಹಿಂದೂಗಳ ಆತ್ಮಘಾತಕ ಜಾತ್ಯತೀತತೆಯನ್ನು ತಿಳಿಯಿರಿ !

೧. ಹಿಂದೂಗಳ ಆತ್ಮಘಾತಕ ಜಾತ್ಯತೀತತೆಯನ್ನು ತಿಳಿಯಿರಿ !

ಮಥುರಾ (ಉತ್ತರಪ್ರದೇಶ) ನಂದ ಮಹಲ ದೇವಸ್ಥಾನದಲ್ಲಿ ಫೈಸಲ್ ಖಾನ ಮತ್ತು ಮಹಮ್ಮದ ಚಾಂದ ಇವರಿಬ್ಬರು ನಮಾಜುಪಠಣ ಮಾಡುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಅವರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ.

೨. ಭಯೋತ್ಪಾದನೆಯ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳಬೇಕು !

ಪಶ್ಚಿಮ ಆಫ್ರಿಕಾ ಖಂಡದ ಮಾಲಿ ದೇಶದಲ್ಲಿ ಬುರ್ಕಿನಾ ಫಾಸೊ ಮತ್ತು ನಾಯಗರ್ ನಡುವಿನ ಗಡಿ ಪ್ರದೇಶದಲ್ಲಿ ಫ್ರಾನ್ಸ್  ವಾಯುಪಡೆಯು ನಡೆಸಿದ ಏರ್ ಸ್ಟ್ರೈಕ್‌ದಲ್ಲಿ ೫೦ ಕ್ಕೂ ಹೆಚ್ಚು ಅಲ್-ಕೈದಾ ಉಗ್ರರು ಸಾವನ್ನಪ್ಪಿದ್ದಾರೆ.

೩. ಪಾಕಿಸ್ತಾನದ ಹಿಂದೂಗಳ ಪರಿಸ್ಥಿತಿ ತಿಳಿಯಿರಿ !

ಮತಾಂಧರು ಕರಾಚಿಯಲ್ಲಿ (ಪಾಕಿಸ್ತಾನ) ಹಿಂದೂ ಹುಡುಗನೊಬ್ಬ ಪೈಗಂಬರರನ್ನು ಅವಮಾನಿಸಿದ್ದಾನೆಂದು ಆರೋಪಿಸಿ ಅಲ್ಲಿನ ಪುರಾತನ ದೇವಸ್ಥಾನವೊಂದರಲ್ಲಿ ಶ್ರೀಗಣೇಶ ಮತ್ತು ಭಗವಾನ ಶಿವನ ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆ. ಕಳೆದ ೨೦ ದಿನಗಳಲ್ಲಾದ ದೇವಸ್ಥಾನಗಳಲ್ಲಿ ವಿಧ್ವಂಸಕ ಕೃತ್ಯಗಳ ಪೈಕಿ ಇದು ಮೂರನೇ ಘಟನೆಯಾಗಿದೆ.

೪. ಇಂತಹವರ ಸರಕಾರಿಕರಣ ಏಕೆ ಆಗುವುದಿಲ್ಲ?

ಕೇರಳ ಮತ್ತು ಇತರ ರಾಜ್ಯಗಳಲ್ಲಿ ನವೆಂಬರ್ ೫ ರಂದು ಆದಾಯ ತೆರಿಗೆ ಇಲಾಖೆಯು, ತೆರಿಗೆ ವಂಚನೆಗಾಗಿ ಕೆ. ಯೋಹಾನ್ನನ್ ಇವರ ‘ಬಿಲೀವರ್ಸ್ ಈಸ್ಟರ್ನ್ ಚರ್ಚ್ಗೆ ಸಂಬಂಧಿಸಿದ ಜನರ ಕಚೇರಿಗಳು ಮತ್ತು ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು.

೫. ಭಾರತ ಇಂತಹ ನಿರ್ಧಾರ ಯಾವಾಗ ತೆಗೆದುಕೊಳ್ಳುವುದು ?

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನವೆಂಬರ್ ೨ ರಂದು ಇಸ್ಲಾಮಿಕ್ ಸ್ಟೇಟ್‌ನ ಉಗ್ರರು ನಡೆಸಿದ ಜಿಹಾದಿ ಉಗ್ರರ ದಾಳಿಯ ನಂತರ ಆಸ್ಟ್ರಿಯಾ ಸರಕಾರವು  ದೇಶದ ಮೂಲಭೂತವಾದಿ ಮಸೀದಿಗಳನ್ನು ಮುಚ್ಚಲು ನಿರ್ಧರಿಸಿದೆ.

೬. ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ !

ಕೇರಳದ ತ್ರಾವಣಕೋರ ದೇವಸ್ವಂ ಮಂಡಳಿಯು ತನ್ನ ಅಧಿಕಾರ ಕ್ಷೇತ್ರದಲ್ಲಿರುವ ೧ ಸಾವಿರದ ೨೦೦ ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಒಂದು ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ದೇವಸ್ಥಾನದ ಅರ್ಚಕರಾಗಿ ನೇಮಿಸಲು ನಿರ್ಧರಿಸಿದೆ.

೭. ಪ್ರಧಾನಿ ಮೋದಿಯವರು ಈ ಬೇಡಿಕೆಯನ್ನು ಈಡೇರಿಸುತ್ತಾರೆಂದು ನಿರೀಕ್ಷೆ !

ಪ್ರಧಾನಿ ಮೋದಿ ಅವರು ಶ್ರೀರಾಮಮಂದಿರ, ಕಲಮ್ ೩೭೦, ಪೌರತ್ವ ತಿದ್ದುಪಡಿ ಕಾಯಿದೆ ಮುಂತಾದ ನಿರ್ಧಾರಗಳನ್ನು ತೆಗೆದುಕೊಂಡಂತೆಯೇ ಇಡೀ ದೇಶದಲ್ಲಿ ಗೋಹತ್ಯಾ ನಿಷೇಧಿಸುವ ಶುಭಕಾರ್ಯವನ್ನೂ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ವಕ್ತಾರ ವಿನೋದ ಬನ್ಸಲ್ ಆಗ್ರಹಿಸಿದ್ದಾರೆ.