೧. ಹಿಂದೂಗಳು ಇಂತಹ ಐಕ್ಯತೆಯನ್ನು ಯಾವಾಗ ತೋರಿಸುವರು ?
ಫ್ರಾನ್ಸ್‌ನಲ್ಲಿ ಮುಸಲ್ಮಾನ ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮಕೈಗೊಂಡಿರುವುದನ್ನು ಖಂಡಿಸಲು ಇಸ್ಲಾಮಿಕ್ ದೇಶಗಳು ಫ್ರಾನ್ಸ್‌ನ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿವೆ. ಇದರಿಂದ ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಫ್ರಾನ್ಸ್ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂಬುದು ಕಂಡು ಬಂದಿದೆ.
೨. ದೇಶದಲ್ಲಿ ‘ಲವ್ ಜಿಹಾದ’ನ ಘಟನೆಗಳು ಯಾವಾಗ ನಿಲ್ಲುತ್ತವೆ ?
ಫರಿದಾಬಾದ (ಹರಿಯಾಣಾ) ಬಲ್ಲಭಗಡನ ಅಗ್ರವಾಲ ಮಹಾವಿದ್ಯಾಲಯದ ಪ್ರವೇಶದ್ವಾರದ ಹೊರಗೆ ನಿಕಿತಾ ತೋಮರ್ ಎಂಬ ಹಿಂದೂ ಯುವತಿಯನ್ನು ಮತಾಂಧರು ಗುಂಡಿಕ್ಕಿ ಕೊಂದಿದ್ದಾರೆ. ‘ಲವ್ ಜಿಹಾದ್’ನಿಂದ ಈ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಬಂಧಿಸಿದ್ದಾರೆ.
೩. ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಪೊಲೀಸ(ಬಲದ) ದಾಳಿಯನ್ನು ತಿಳಿಯಿರಿ !
ಬಿಲಾಸಪೂರದಲ್ಲಿ (ಛತ್ತೀಸಗಡ) ದುರ್ಗಾದೇವಿಯ ಮೂರ್ತಿಯ ವಿಸರ್ಜನೆಯ ಮೆರವಣಿಗೆಯಲ್ಲಿ ಡಿಜೆ ಇರುವ ವಾಹನವನ್ನು ವಶಪಡಿಸಿಕೊಂಡಿದ್ದರಿಂದ ಮತ್ತು ದೇವಿಯ ಮೂರ್ತಿಯಿರುವ ವಾಹನವನ್ನು ತಡೆಹಿಡಿದಿದ್ದರೆಂದು ವಾಗ್ವಾದ ನಡೆದು ಕಲ್ಲು ತೂರಾಟವಾಯಿತು. ಇದರಿಂದಾಗಿ ಕಲೀಮ ಖಾನ್ ನೇತೃತ್ವದ ಪೊಲೀಸರು ಭಕ್ತರನ್ನು ಥಳಿಸಿದ್ದಾರೆ.
೪. ಭಾರತದಲ್ಲಿ ಇಂತಹ ಘಟನೆಗಳಾಗುವ ಮುನ್ನ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !
ಮತಾಂಧನೊಬ್ಬನು ಫ್ರಾನ್ಸ್‌ನ ನೀಸ್ ಎಂಬಲ್ಲಿರುವ ನೊಟ್ರೆ ಡೇಮ್’ ಚರ್ಚನಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ಚೂರಿಯಿಂದ ಮಾಡಿದ ದಾಳಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದರು ಮತ್ತು ಇತರ ಮೂವರು ಗಾಯಗೊಂಡಿದ್ದಾರೆ.
೫. ಮುಂದಿನ ಅಪಾಯದಿಂದ ಎಚ್ಚರದಿಂದಿರಿ !
ಮೊಹಮ್ಮದ ಪೈಗಂಬರರ ವಿರುದ್ಧ ಫ್ರಾನ್ಸ ಅಧ್ಯಕ್ಷ ಮ್ಯಾಕ್ರಾನ್ ಇವರು ಹೇಳಿಕೆ ನೀಡಿದ್ದರೆಂದು ಆರೋಪಿಸಿ ಮುಸಲ್ಮಾನರು ಭೋಪಾಲನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಪ್ರತಿಭಟನೆ ನಡೆಸಿದರು. ಇದನ್ನು ಭೋಪಾಲ ಸೆಂಟ್ರಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಆಯೋಜಿಸಿದ್ದರು.
೬. ಇಡೀ ದೇಶದಲ್ಲಿ ಹೀಗೆ ಸಂಭವಿಸಬೇಕು !
‘ಲವ್ ಜಿಹಾದ್’ ಅನ್ನು ನಿಗ್ರಹಿಸಲು ನಾವು ಶೀಘ್ರದಲ್ಲೇ ಕಾನೂನು ರೂಪಿಸಲಿದ್ದೇವೆ. ತಮ್ಮ ಪರಿಚಯವನ್ನು ಅಡಗಿಸಿಟ್ಟು ನಮ್ಮ ಸಹೋದರಿಯರ ಮಾನದೊಂದಿಗೆ ಚೆಲ್ಲಾಟವಾಡುವವರು ತಿದ್ದಿಕೊಳ್ಳದಿದ್ದರೆ ಅವರ ‘ರಾಮ ನಾಮ ಸತ್ಯ’ದ ಯಾತ್ರೆಯನ್ನು ತೆಗೆಯುತ್ತೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಎಚ್ಚರಿಕೆ ನೀಡಿದ್ದಾರೆ.
೭. ಇಂತಹ ಕಾರ್ಯಕ್ರಮಗಳನ್ನು ನಿಷೇಧಿಸಿರಿ !
ಅಕ್ಟೋಬರ್ ೩೦ ರಂದು ಪ್ರಸಾರಗೊಂಡ ಕೌನ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಗ್ರಂಥ ಮನುಸ್ಮೃತಿಯ ಕುರಿತು ವಿಕಲ್ಪ ಮತ್ತು ನಕಾರಾತ್ಮಕತೆಯನ್ನು ಹರಡಿಸುವ ಪ್ರಶ್ನೆಯನ್ನು ಕೇಳಿ ಹಿಂದೂ ಶ್ರದ್ಧಾಸ್ಥಾನಗಳನ್ನು ಮತ್ತೊಮ್ಮೆ ಅವಮಾನಿಸಲಾಯಿತು.