ದೇವಸ್ಥಾನಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರವೇ ಬೇಕು !

೧. ದೇವಸ್ಥಾನಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರವೇ ಬೇಕು !

೯ ನವೆಂಬರ್ ೨೦೨೦ ರಂದು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಬಗೆಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಒಂದು ವರ್ಷ ಪೂರ್ಣವಾದ ನಿಮಿತ್ತ #JusticeDemolished (ನ್ಯಾಯ ಉರುಳಿತು) ಎಂಬ ಹ್ಯಾಶ್‌ಟ್ಯಾಗ್‌ದಿಂದ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ ಮತಾಂಧರು ದೇವಸ್ಥಾನವನ್ನು ಕೆಡವಿ ಪುನಃ ಮಸೀದಿಯನ್ನು ಕಟ್ಟುವುದಾಗಿ ಬೆದರಿಕೆಯೊಡ್ಡಿದ್ದಾರೆ.

೨. ಹಿಂದೂ ದೇವತೆಗಳ ಉದ್ದೇಶಪೂರ್ವಕ ಅವಮಾನವನ್ನು ತಿಳಿಯಿರಿ !

‘ಲಕ್ಷ್ಮಿ ಬಾಂಬ್’ ಚಲನಚಿತ್ರದ ಹೆಸರನ್ನು ವಿರೋಧಿಸಿದ ನಂತರ ಈ ಚಿತ್ರಕ್ಕೆ ‘ಲಕ್ಷ್ಮಿ’ ಎಂದು ನಾಮಕರಣ ಮಾಡಲಾಯಿತು. ಈ ಚಿತ್ರ ಬಿಡುಗಡೆಯಾದ ನಂತರ ‘ಲಕ್ಷ್ಮಿ ಬಾಂಬ್’ ಎಂದು ಹೆಸರಿಡುವಂತಹ ಯಾವುದೇ ದೃಶ್ಯಾವಳಿ ಅಥವಾ ಆಶಯ ಆ ಚಲನಚಿತ್ರದಲ್ಲಿಲ್ಲ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.

೩. ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಅಗತ್ಯ !

ಕಾನಪೂರ (ಉತ್ತರ ಪ್ರದೇಶ) ದಲ್ಲಿ ‘ಲವ್ ಜಿಹಾದ್’ಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ಸ್ಥಾಪಿಸಲಾದ ವಿಶೇಷ ತನಿಖಾ ತಂಡದ ಕೆಲಸ ಪೂರ್ಣಗೊಂಡಿದ್ದು, ೧೪ ಪ್ರಕರಣಗಳಲ್ಲಿ ಹಿಂದೂ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಬೆಳಕಿಗೆ ಬಂದಿದೆ.

೪. ಮತಾಂಧರ ಮಕ್ಕಳ ಹಿಂಸಾತ್ಮಕ ಮನಸ್ಥಿತಿಯನ್ನು ತಿಳಿಯಿರಿ !

ಜರ್ಮನಿಯ ಸ್ಪಾಂಡಾವೂದಲ್ಲಿ ಕ್ರೈಸ್ತ ಮಾರ್ಗನ್‌ಸ್ಟರ್ನ್ ಪ್ರಾಥಮಿಕ ಶಾಲೆಯ ೧೧ ವರ್ಷದ ಮತಾಂಧ ವಿದ್ಯಾರ್ಥಿಯು ಮೊಹಮ್ಮದ ಪೈಗಂಬರರ ವ್ಯಂಗ್ಯಚಿತ್ರದ ಪ್ರಕರಣದಲ್ಲಿ ತನ್ನ ಶಿಕ್ಷಕನಿಗೆ ಶಿರಚ್ಛೇದದ ಬೆದರಿಕೆಯೊಡ್ಡಿದ್ದಾನೆ.

೫. ಇಡೀ ಪಾಕಿಸ್ತಾನವನ್ನೇ ಏಕೆ ನಾಶ ಮಾಡಬಾರದು ?

ಬಾರಾಮುಲ್ಲಾ (ಜಮ್ಮು-ಕಾಶ್ಮೀರ) ದಲ್ಲಿ ನಿಯಂತ್ರಣರೇಖೆಯಲ್ಲಿ (ಎಲ್‌ಒಸಿ) ನಡೆದ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಭಾರತೀಯ ಅಧಿಕಾರಿ, ಮೂವರು ಸೈನಿಕರು ಮತ್ತು ಮೂವರು ನಾಗರಿಕರು ಸಾವನ್ನಪ್ಪಿದರು ಮತ್ತು ಭಾರತೀಯ ಸೈನ್ಯವು ಮಾಡಿದ ಪ್ರತಿದಾಳಿಗೆ ಪಾಕಿಸ್ತಾನದ ಎಂಟು ಸೈನಿಕರು ಸಾವನ್ನಪ್ಪಿದರು.

೬. ಭಾರತವು ಇಸ್ರೇಲ್‌ನಿಂದ ಯಾವಾಗ ಕಲಿಯುವುದು ?

ಇಸ್ರೇಲಿನ ಗುಪ್ತಚರ ಸಂಸ್ಥೆ ಮೊಸಾದ್‌ವು ಇರಾನಿನ ರಾಜಧಾನಿ ತೆಹರಾನಗೆ ನುಗ್ಗಿ ಅಲ್ ಕಾಯದಾದ ಎರಡನೇ ಕ್ರಮಾಂಕದ ಭಯೋತ್ಪಾದಕ ಅಬು ಮೊಹಮ್ಮದ ಅಲ್-ಮಾಸ್ತ್ರಿಯನ್ನು ಹತ್ಯೆಗೈದಿತು ಆತನೊಂದಿಗೆ ಲಾಡೆನ್‌ನ ಸೊಸೆ ಮರಿಯಮ್‌ಳನ್ನೂ ಹತ್ಯೆ ಮಾಡಿದೆ.

೭. ಒಳನುಸುಳುವ ಮೊದಲೇ ಭಾರತವು ಜಿಹಾದಿಗಳ ಮೇಲೆ ದಾಳಿ ಮಾಡಬೇಕು

ಪಾಕಿಸ್ತಾನದಿಂದ ೨೫೦ ರಿಂದ ೩೦೦ ಜಿಹಾದಿ ಭಯೋತ್ಪಾದಕರು ಭಾರತ ದೊಳಗೆ ನುಸುಳಲು ತಯಾರಿ ನಡೆಸುತ್ತಿದ್ದಾರೆ; ಆದರೆ, ಅವರನ್ನು ತಡೆಯಲು ಭಾರತೀಯ ಸೇನೆ ಮತ್ತು ನಾವು ಸಂಪೂರ್ಣ ಸಿದ್ಧರಿದ್ದೇವೆ ಎಂದು ಗಡಿ ಭದ್ರತಾ ಪಡೆ ಮಹಾನಿರೀಕ್ಷಕ  ರಾಜೇಶ ಮಿಶ್ರಾ ಹೇಳಿದ್ದಾರೆ.