೧. ಮತಾಂಧರ ಜಾತ್ಯತೀತತೆಯನ್ನು ತಿಳಿಯಿರಿ !
ರಾಯಬರೇಲಿ(ಉತ್ತರಪ್ರದೇಶ) ಯಲ್ಲಿ ಸ್ವೇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿ ತನ್ನ ಭೂಮಿಯಲ್ಲಿ ದೇವಸ್ಥಾನವನ್ನು ಕಟ್ಟಲು ಪ್ರಯತ್ನಿಸಿದ ದೇವಪ್ರಕಾಶ ಪಟೇಲ ಇವರ ಮನೆಯ ಬಾಗಿಲಿಗೆ ಮತಾಂಧ ಸರಪಂಚನು ಸಹಚರರೊಂದಿಗೆ ಸೇರಿ ಹೊರಗಿನಿಂದ ಚಿಲಕ ಹಾಕಿದನು. ನಂತರ ಮನೆಗೆ ಬೆಂಕಿ ಹಚ್ಚಿ ಅವರ ಪರಿವಾರವನ್ನು ಸುಡಲು ಪ್ರಯತ್ನಿಸಿದನು.
೨. ಮಹಿಳೆಯರಿಗೆ ಸ್ವರಕ್ಷಣೆಗಾಗಿ ಆಯುಧವನ್ನು ಇಟ್ಟುಕೊಳ್ಳುವ ಕಾನೂನು ಬೇಕು !
ಥಿರುವೆಲ್ಲೂರು (ತಮಿಳುನಾಡು) ಎಂಬಲ್ಲಿ ೨೪ ವರ್ಷದ ನರಾಧಮನು ೧೯ ವರ್ಷದ ಯುವತಿಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಆ ಯುವತಿಯು ತನ್ನ ರಕ್ಷಣೆಗಾಗಿ ಚೂರಿಯಿಂದ ಆತನ ಕುತ್ತಿಗೆಯ ಮೇಲೆ ಹಲ್ಲೆ ಮಾಡಿ ಕೊಂದಳು.
೩. ನೆಹರೂ ಅವರ ಅಕ್ಷಮ್ಯ ತಪ್ಪನ್ನು ತಿಳಿಯಿರಿ !
ನೇಪಾಳದ ರಾಜ ತ್ರಿಭುವನ ಬೀರ ಬಿಕ್ರಮ ಶಹಾ ಇವರು ನೇಪಾಳವನ್ನು ಭಾರತದ ಪ್ರದೇಶವನ್ನಾಗಿ ಸೇರಿಸಲು ಪ್ರಸ್ತಾವವನ್ನು ಮಂಡಿಸಿದ್ದರು; ಆದರೆ ನೆಹರೂರವರು ಅದನ್ನು ನಿರಾಕರಿಸಿದರು, ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣವ ಮುಖರ್ಜಿಯವರು ತಮ್ಮ ‘ದ ಪ್ರೆಸಿಂಡೆನ್ಸಿಯಲ್ ಈಯರ್ಸ’ ಎಂಬ ಪುಸ್ತಕದಲ್ಲಿ ಬರೆದ್ದಾರೆ.
೪. ಎಲ್ಲ ನುಸುಳುಕೋರ ರೋಹಿಂಗ್ಯಾರನ್ನು ಬಂಧಿಸಿ ದೇಶದಿಂದಾಚೆಗೆ ತಳ್ಳಿರಿ !
ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುತ್ತಿಗೆ ಹಾಕಿ ಮ್ಯಾನ್ಮಾರ್ ನಿವಾಸಿ ರೋಹಿಂಗ್ಯಾ ಮುಸಲ್ಮಾನ ಅಜೀಜುಲ ಇವನನ್ನು ಬಂಧಿಸಿದಾಗ ಅವನಿಂದ ೨ ನಕಲಿ ಭಾರತೀಯ ಪಾಸಪೋರ್ಟ್, ೩ ಆಧಾರಕಾರ್ಡ್, ೧ ಪ್ಯಾನ್‌ಕಾರ್ಡ್ ಇತ್ಯಾದಿ ದಾಖಲೆಗಳು ದೊರಕಿದವು.
೫. ಮತಾಂಧರ ಅಸಹಿಷ್ಣುತನವನ್ನು ತಿಳಿಯಿರಿ !
ಭೋಪಾಲ (ಮಧ್ಯಪ್ರದೇಶ) ಇಲ್ಲಿಯ ಮುಸಲ್ಮಾನ ಯುವತಿಯನ್ನು ಪ್ರೀತಿಸಿದ ಕಾರಣದಿಂದ ಅವಳ ತಂದೆ ರಯಿಸ್ ಖಾನ ಇವರು ಹಿಂದೂ ಯುವಕ ಧರ್ಮೇಂದ್ರ ಇವನ ಹತ್ಯೆ ಮಾಡಿದರು. ಬಳಿಕ ಮೃತದೇಹಕ್ಕೆ ಉಚ್ಚ ಪ್ರವಾಹವಿದ್ದ ವಿದ್ಯುತ್ ತಂತಿಯಿಂದ ‘ಶಾಕ್’ ಕೊಟ್ಟರು. ಆ ಮೂಲಕವಾಗಿ ಅವನ ಮೃತ್ಯು ಮೈಮೇಲೆ ವಿದ್ಯುತ್ ಕುಸಿದು ಆಗಿದೆ ಎಂದು ತೋರಿಸಲು ಪ್ರಯತ್ನಿಸಿದರು.
೬. ಪಾದ್ರಿಗಳ ವಾಸನಾಂಧತೆಯನ್ನು ತಿಳಿಯಿರಿ !
ಕೇರಳದಲ್ಲಿ ‘ಮಲಂಕಾರಾ ಆರ್ಥೋಡಾಕ್ಸ್ ಸೀರಿಯನ್ ಚರ್ಚನಲ್ಲಿ ಕನ್ಫೆಶನ್‌ನ (ಮಾಡಿದ ಪಾಪಗಳನ್ನು ಚರ್ಚನಲ್ಲಿ ಪಾದ್ರಿಯ ಎದುರಿನಲ್ಲಿ ಒಪ್ಪಿಕೊಳ್ಳುವುದು) ವಿರುದ್ಧ ೫ ಕ್ರೈಸ್ತ ಮಹಿಳೆಯರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ‘ಕನ್ಫೆಶನ್ನಿನ ಬದಲಿಗೆ ಪಾದ್ರಿಗಳು ಶಾರೀರಿಕ ಸಂಬಂಧವನ್ನಿಡಲು ಆಗ್ರಹಿಸುತ್ತಾರೆ, ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.
೭. ದಾಸ್ಯತ್ವದ ಸಂಕೇತಗಳನ್ನು ಯಾವಾಗ ಅಳಿಸಲಾಗುತ್ತವೆ ?
ನವ ದೆಹಲಿಯಲ್ಲಿ ಲುಟಿಯನ್ಸ್ ಪ್ರದೇಶದಲ್ಲಿ ಔರಂಗಜೇಬ ಮಾರ್ಗ ಎಂದು ಬರೆಯಲಾಗಿದ್ದ ಫಲಕದಲ್ಲಿ ‘ಗುರು ತೇಗಬಹಾದ್ದೂರ ಲೇನ್ ಎಂದು ಬರೆದ ಪ್ರಕರಣದಲ್ಲಿ ಪೊಲೀಸರು ೧೧ ಜನರನ್ನು ವಶಕ್ಕೆ ಪಡೆದಿದ್ದು ಅವರ ವಿಚಾರಣೆ ಮಾಡಲಾಗುತ್ತಿದೆ. ನ್ಯಾಯವಾದಿ ಅನುರಾಧಾ ಭಾರ್ಗವ ಇವರ ಮುಂದಾಳತ್ವದಲ್ಲಿ ಈ ಕೃತಿ ಮಾಡಲಾಯಿತು.