೧. ಕೇಂದ್ರ ಸರಕಾರ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು !
ಬ್ರಾಝಿಲ್‌ನ ಜೋನಾಸ ಮಸೇಟಿಯವರು ಭಾರತದ ಗುರುಕುಲದಲ್ಲಿ ೪ ವರ್ಷಗಳ ಕಾಲ ನೆಲೆಸಿ ವೇದಗಳ ಶಿಕ್ಷಣ ಪಡೆದರು ಮತ್ತು ಈಗ ಅವರು ಬ್ರಾಝಿಲ್‌ನಲ್ಲಿ ಶ್ರೀಭಗವದ್ಗೀತೆ ಮತ್ತು ವೇದ ಇವುಗಳ ಶಿಕ್ಷಣ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ‘ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.
೨. ಹೀಗೇಕೆ ಬೇಡಿಕೆಯನ್ನು ಮಾಡಬೇಕಾಗುತ್ತದೆ ?
ಸೂಫಿ ಇಸ್ಲಾಮಿಕ್ ಬೋರ್ಡ್ ಸಂಘಟನೆಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಹಾದಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ ಶಹಾ ಇವರಿಗೆ ಪತ್ರ ಬರೆದು ಆಗ್ರಹಿಸಿದೆ. ‘ನಿಷೇಧ ಹೇರದಿದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ, ಎಂದೂ ಹೇಳಿದೆ.
೩. ಅಶಿಸ್ತಿನಿಂದ ವರ್ತಿಸುವ ಇಂತಹ ಭಾರತೀಯರು ಲಜ್ಜಾಸ್ಪದ !
ಯಾವ ಜನರು ಕೊರೊನಾದ ನಿಯಮಗಳ ಉಲ್ಲಂಘನೆ ಮಾಡುತ್ತಿರುವರೊ, ಅವರಿಗೆ ಕನಿಷ್ಠ ಪಕ್ಷ ೫ ರಿಂದ ೧೫ ದಿನಗಳವರೆಗೆ ಕೋವಿಡ ಸೆಂಟರ್ ದಲ್ಲಿ ಸೇವೆ ಸಲ್ಲಿಸುವ ಶಿಕ್ಷೆಯನ್ನು ನೀಡಬೇಕು, ಎಂದು ಗುಜರಾತ ಉಚ್ಚ ನ್ಯಾಯಾಲಯವು ಅಲ್ಲಿನ ಸರಕಾರಕ್ಕೆ ಆದೇಶ ನೀಡಿದೆ.
೪. ಹಿಂದುತ್ವನಿಷ್ಠರನ್ನು ಯಾವಾಗ ರಕ್ಷಿಸುತ್ತಾರೆ ?
ಶಿವಮೊಗ್ಗದಲ್ಲಿ ಬಜರಂಗ ದಳದ ಸಕ್ರಿಯ ಕಾರ್ಯಕರ್ತ ಶ್ರೀ. ನಾಗೇಶ ಇವರ ಮೇಲೆ ಇಲ್ಲಿನ ಉರ್ದು ಶಾಲೆಯ ಸಮೀಪ ೧೦ ರಿಂದ ೧೫ ಜನರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಶ್ರೀ. ನಾಗೇಶ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
೫. ಸಮಾನ ನಾಗರಿಕ ಕಾನೂನನ್ನು ಜಾರಿಗೆ ತನ್ನಿರಿ !
ಇಸ್ಲಾಂನಂತಹ ಒಂದು ಧರ್ಮದಲ್ಲಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿರುವ ಮತ್ತು ಇತರ ಧರ್ಮಗಳಲ್ಲಿ ಇದನ್ನು ನಿಷೇಧಿಸುವ ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.
೬. ರೈತರ ಪ್ರತಿಭಟನೆ ಹೆಸರಿನಲ್ಲಿ ನುಸುಳಿದ ಮತಾಂಧ ಸಂಘಟನೆಗಳು !
ನವ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸಿದ ರೈತರಿಗೆ ಸಹಾಯ ಮಾಡುವ ಸಂಘಟನೆಗಳಲ್ಲಿ ದೆಹಲಿಯ ಗಲಭೆಯ ಪ್ರಕರಣದಲ್ಲಿ ಹೆಸರಿರುವ ‘ಯುನೈಟೆಡ್ ಅಗೆನ್ಸ್ಟ ಹೇಟ್ (ಯು.ಎ.ಎಚ್.) ಇಸ್ಲಾಮಿ ಸಂಘಟನೆಯೂ ಸಮಾವೇಶಗೊಂಡಿದೆ. ಅದಕ್ಕೆ ೨೫ ಮಸೀದಿಗಳಿಂದ ಸಹಾಯ ದೊರಕುತ್ತಿದೆ.
೭. ಭಯೋತ್ಪಾದಕರ ಕಾರ್ಖಾನೆಯಾದ ಪಾಕಿಸ್ತಾನವನ್ನು ನಾಶ ಮಾಡಿರಿ !
ಭದ್ರತಾ ಪಡೆಗಳು ಈ ವರ್ಷದ ಜಮ್ಮು ಮತ್ತು ಕಾಶ್ಮೀರದಲ್ಲಿ ೧೧ ತಿಂಗಳುಗಳಲ್ಲಿ ೨೧೧ ಉಗ್ರರನ್ನು ಹೊಡೆದುರುಳಿಸಿದರೆ, ೪೭ ಜನರನ್ನು ಬಂಧಿಸಿವೆ. ಇದಲ್ಲದೇ ಉಗ್ರರಿಗೆ ಸಹಾಯ ಮಾಡುವ ೧೫೦ ಜನರನ್ನು ಬಂಧಿಸಲಾಗಿದೆ