೧. ಹಿಂದೂಗಳ ದೇವಸ್ಥಾನಗಳ ಸ್ಥಿತಿಯನ್ನು ತಿಳಿಯಿರಿ !
ಮತಾಂಧರು ಆಂಧ್ರಪ್ರದೇಶದ ಶ್ರೀಶೈಲಮ್ ದೇವಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ, ಎಂದು ಭಾಗ್ಯನಗರದ ಭಾಜಪದ ಶಾಸಕ ಟಿ. ರಾಜಾಸಿಂಹರವರು ಆರೋಪಿಸಿದ್ದಾರೆ. ‘ಇಲ್ಲಿಯ ಗೋಶಾಲೆಯಲ್ಲಿ ಗೋಮಾಂಸಕ್ಕಾಗಿ ಗೋವಿಗಳ ಹತ್ಯೆ ಮಾಡಲಾಗುತ್ತಿದೆ’, ಎಂದು ಸಹ ಅವರು ಹೇಳಿದ್ದಾರೆ.
೨. ಭಾರತದಲ್ಲಿ ಹಿಂದೂದ್ವೇಷಿ ‘ಅಮೇಝಾನ್’ಅನ್ನು ಯಾವಾಗ ನಿಷೇಧಿಸಲಾಗುತ್ತದೆ ?
ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಅಮೇಝಾನ್ ಕಂಪನಿಯ ‘ಕಿಂಡಲ್’ ಎಂಬ ‘ಆನಲೈನ್’ ಪುಸ್ತಕ ಮಾರಾಟಕೇಂದ್ರದಲ್ಲಿ ಮುಸಲ್ಮಾನ ಪುರುಷ ಮತ್ತು ಹಿಂದೂ ಮಹಿಳೆ ಇವರ ಸಂಬಂಧದಲ್ಲಿ ಅಶ್ಲೀಲವಾಗಿ ಸಂವಾದ ನಡೆಸುವ ಅನೇಕ ಪುಸ್ತಕಗಳು ಲಭ್ಯವಿತ್ತು.
೩. ಗೋರಕ್ಷಣೆ ಮಾಡುವ ಹಿಂದೂಗಳ ರಕ್ಷಣೆ ಯಾವಾಗ ?
ಮಧ್ಯಪ್ರದೇಶದ ದಮೋಹದಲ್ಲಿ ಗೋವಂಶದ ಕಳ್ಳಸಾಗಾಣಿಕೆಯನ್ನು ತಡೆಯಲು ಪ್ರಯತ್ನಿಸಿದಾಗ ಮತಾಂಧ ಕಟುಕರು ಇಬ್ಬರು ಹಿಂದೂಗಳ ಮೇಲೆ ನಡೆಸಿದ ಆಕ್ರಮಣದಲ್ಲಿ ಅಜಯ ಮುಡಾ ಎಂಬ ಶಿಕ್ಷಕರು ಮೃತಪಟ್ಟರು.
೪. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಮತಾಂಧರು ಪಾಕ್‌ನ ಖೈಬರ ಪಖ್ತುನಖ್ವಾ ಪ್ರದೇಶದಲ್ಲಿ ಹಿಂದೂಗಳ ದೇವಸ್ಥಾನವನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದರು. ಮತ್ತೊಂದೆಡೆ ಭಾರತದ ಆಂಧ್ರಪ್ರದೇಶದಲ್ಲಿ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರಾಚೀನ ವಿಗ್ರಹದ ತಲೆಯನ್ನು ಅಜ್ಞಾತರು ಕಡಿದು ಹಾಕಿದ್ದಾರೆ.
೫. ಇಂತಹ ಕಾಂಗ್ರೆಸ್ ನಾಯಕರ ಮೇಲೆ ಕ್ರಮ ಕೈಗೊಳ್ಳಿರಿ !
ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ವಿಪಕ್ಷದ ಮುಖಂಡ ಸಿದ್ಧರಾಮಯ್ಯ ಇವರು ಒಂದು ಪ್ರಸಂಗದಲ್ಲಿ ಗ್ರಾಮಸ್ಥನೊಬ್ಬನಿಗೆ ‘ನಿನಗೆ ಹನುಮಂತನ ಜನ್ಮದಿನಾಂಕ ಗೊತ್ತಿದೆಯೇ ? ಗೊತ್ತಿದ್ದರೆ ಮಾತ್ರ ಜಯಂತಿಯನ್ನು ಆಚರಿಸು, ಇಲ್ಲದಿದ್ದರೆ ಸುಮ್ಮನೆ ಕೋಳಿ ತಿನ್ನು’, ಎಂದು ಹೇಳಿದರು.
೬. ಈ ಘಟನೆಗಳನ್ನು ತಡೆಯುವುದಕ್ಕಾಗಿಯೇ ಹಿಂದೂ ರಾಷ್ಟ್ರ ಬೇಕು !
ರಾಜಮುಂದ್ರಿ(ಆಂಧ್ರಪ್ರದೇಶ) ಇಲ್ಲಿಯ ವಿಘ್ನೇಶ್ವರ ದೇವಸ್ಥಾನದಲ್ಲಿ ಭಗವಾನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ ವಿಗ್ರಹವನ್ನು ಸಮಾಜಕಂಟಕರು ಧ್ವಂಸ ಗೊಳಿಸಲಾಯಿತು. ರಾಜ್ಯದಲ್ಲಿ ಕಳೆದ ೧೯ ತಿಂಗಳುಗಳಲ್ಲಿ ೧೨೦ ದೇವಸ್ಥಾನಗಳ ಮೇಲೆ ಆಕ್ರಮಣದ ಘಟನೆಗಳು ನಡೆದಿವೆ.
೭. ಇಡೀ ದೇಶದಲ್ಲಿ ಇಂತಹ ಕ್ರಮ ಕೈಗೊಳ್ಳಬೇಕು !
ಉತ್ತರಪ್ರದೇಶದಲ್ಲಿ ವಾಹನಗಳ ಕ್ರಮಾಂಕದ ಪಟ್ಟಿಯ ಮೇಲೆ ಜಾತಿಯ ಹೆಸರನ್ನು ಬರೆಯುವ ರೂಢಿಯಿದೆ. ಇದರಲ್ಲಿ ಜಾತಿಯ ಮಹತ್ವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಈಗ ಉತ್ತರಪ್ರದೇಶದ ಸಾರಿಗೆ ಇಲಾಖೆಯಿಂದ ಈ ರೀತಿಯ ಜಾತಿಯ ಪರಿಚಯವನ್ನು ಹೇಳುವ ವಾಹನಗಳ ಮೇಲೆ ಕ್ರಮಕೈಗೊಳ್ಳಲು ಪ್ರಾರಂಭವಾಗಿದೆ.