ಹಿಂದುತ್ವನಿಷ್ಠರನ್ನು ಯಾವಾಗ ರಕ್ಷಿಸಲಾಗುತ್ತದೆ ?

೧. ಹಿಂದುತ್ವನಿಷ್ಠರನ್ನು ಯಾವಾಗ ರಕ್ಷಿಸಲಾಗುತ್ತದೆ ?

ಬುಲಂದಶಹರ (ಉತ್ತರಪ್ರದೇಶ)ದ ಕಾಕೋಡ ಪ್ರದೇಶದಲ್ಲಿ ‘ಹಿಂದೂ ಜಾಗರಣ ಮಂಚ್’ದ ಕಾರ್ಯಕರ್ತ ರಾಹುಲ ಇವರು ಮಾಂಸದ ಅಂಗಡಿಯೊಂದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಮೂವರು ಮತಾಂಧರು ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಪೊಲೀಸರು ನಗರಸೇವಕ ನಫೀಸನನ್ನು ಬಂಧಿಸಿದ್ದು, ಇನ್ನಿಬ್ಬರನ್ನು ಪತ್ತೆ ಹಚ್ಚುತ್ತಿದ್ದಾರೆ.

೨. ಹಿಂದೂಗಳೇ, ದೇವಸ್ಥಾನಗಳ ರಕ್ಷಣೆಗೆ ಸಿದ್ಧರಾಗಿರಿ !

ಇಸ್ಲಾಮಿಕ್ ಸ್ಟೇಟ್ ನ ‘ವಾಯ್ಸ್ ಆಫ್ ಇಂಡಿಯಾ ನಿಯತಕಾಲಿಕೆಯಲ್ಲಿ ಭಾರತೀಯ ಮುಸ್ಲಿಮರಿಗೆ ಸರಕಾರದ ವಿರುದ್ಧ ಜಿಹಾದ್ ನಡೆಸುವಂತೆ ಕರೆ ನೀಡಲಾಗಿದೆ. ಹಾಗೆಯೇ ‘ಬಾಬರಿ ವಿಷಯದಲ್ಲಿ ಸೇಡು ತೀರಿಸಿಕೊಳ್ಳುತ್ತೇವೆ’, ಎಂದೂ ಬೆದರಿಕೆಯೊಡ್ಡಿದೆ.

೩. ಗೋಹತ್ಯೆಯನ್ನು ತಡೆಯುವ ಮತ್ತು ತಮ್ಮ ಧರ್ಮಬಾಂಧವರನ್ನು ಕೊಲ್ಲುವ ಮತಾಂಧರ ಮತಾಂಧತೆಯನ್ನು ತಿಳಿಯಿರಿ !

ಜಾರಖಂಡ ರಾಜ್ಯದ ಗವಾ ಇಲ್ಲಿಯ ಉಚರಿ ಮೊಹಲ್ಲಾದಲ್ಲಿ ೧೮ ವರ್ಷ ವಯಸ್ಸಿನ ಮಹಮ್ಮದ ಆರಜೂ ಎಂಬಾತನು ಗೋಹತ್ಯೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ಮತಾಂಧರು ಆತನನ್ನು ಕೊಂದರು. ಪೊಲೀಸರು ಮುನ್ನೂ ಕುರೈಶಿ ಮತ್ತು ಕೈಲ್ ಕುರೈಶಿ ಇವರನ್ನು ಬಂಧಿಸಿದ್ದಾರೆ.

೪. ಕೇವಲ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ, ಶಿಕ್ಷೆಯ ಅಗತ್ಯವಿದೆ !

‘ಇರಾಸ ನೌ’ ಚಲನಚಿತ್ರವನ್ನು ನಿರ್ಮಿಸುತ್ತಿರುವ ಕಂಪನಿಯು ನವರಾತ್ರಿಯ ನಿಮಿತ್ತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಪವಿತ್ರ ನವರಾತ್ರಿಯನ್ನು ಅಶ್ಲೀಲವಾಗಿ ಅವಮಾನ ಮಾಡಿದೆ. ಧರ್ಮನಿಷ್ಠ ಹಿಂದೂಗಳು ವಿರೋಧಿಸಿದ ನಂತರ ‘ಇರಾಸ ನೌ’ ಕ್ಷಮೆಯಾಚನೆ ಮಾಡಿದೆ.

೫. ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ಸ್ಥಿತಿಯನ್ನು ತಿಳಿಯಿರಿ !

ನವರಾತ್ರಿ ಪ್ರಾರಂಭವಾಗುವ ಮೊದಲು, ಬಾಂಗ್ಲಾದೇಶದ ಫರೀದಪೂರದ ಬೋಅಲಮಾರಿ ಮತ್ತು ನಾರಾಯಣಗಂಜನ ಅರೈಹಜಾರನಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಗಳನ್ನು ಧ್ವಂಸ ಮಾಡಲಾಯಿತು. ಈ ಪ್ರಕರಣದಲ್ಲಿ ಮಹಮ್ಮದ ನಯನ ಶೇಖ ಮತ್ತು ಮಹಮ್ಮದ ರಾಜು ಮೃಧಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

೬. ಕೇಂದ್ರ ಸರಕಾರ ಇಂತಹ ವೆಬ್ ಸಿರೀಸ್‌ಗಳನ್ನು ನಿಷೇಧಿಸಬೇಕು !

‘ಎಮ್‌ಎಕ್ಸ್ ಪ್ಲೇಯರ್ ಈ ‘ಓಟಿಟಿ ಆಪ್ನಲ್ಲಿ ಮುಂದೆ ಪ್ರಸಾರವಾಗಲಿರುವ ‘ಆಶ್ರಮ ಈ ವೆಬ್ ಸಿರೀಸ್‌ನ ಎರಡನೇ ಭಾಗದಲ್ಲಿ ಹಿಂದೂ ಸಂತರ ಕುರಿತು ಅಯೋಗ್ಯ ಚಿತ್ರಣವನ್ನು ಮಾಡಲಾಗಿದೆ.

೭. ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಯಾವಾಗ ರಕ್ಷಿಸಲಾಗುವುದು ?

ಪಾಕಿಸ್ತಾನದ ಸಿಂಧ ಪ್ರಾಂತದ ಥಾರಪಾರಕರನ ನಗರಪರಕರದಲ್ಲಿರುವ ಸಿಂಹವಾಹಿನಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮತಾಂಧರು ಧ್ವಂಸ ಮಾಡಿದರು. ಪಾಕಿಸ್ತಾನದಲ್ಲಿ ಡಾ. ರೇಖಾ ಮಾಹೇಶ್ವರಿಯವರು ಈ ಬಗ್ಗೆ ಮಾಹಿತಿ ನೀಡಿ, ವಿಧ್ವಂಸಕ ಮೂರ್ತಿಯ ಛಾಯಾಚಿತ್ರವನ್ನು ಟ್ವೀಟ್ ಮಾಡಿದ್ದಾರೆ.