ಹಿಂದೂಗಳ ದೇವಾಲಯಗಳನ್ನು ಮುಕ್ತಗೊಳಿಸಲು ಹಿಂದೂ ರಾಷ್ಟ್ರವೇ ಬೇಕು !

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

೧. ಇಂತಹ ದೇಶಗಳ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು !

ಅಮೇರಿಕಾವು ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ೧೦ ದೇಶಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ. ಇದರಲ್ಲಿ ಚೀನಾ, ಪಾಕಿಸ್ತಾನ, ಇರಾನ್, ಸೌದಿ ಅರೇಬಿಯಾ ಮುಂತಾದ ದೇಶಗಳಿವೆ. ‘ಈ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆಯನ್ನು ಮಾಡುತ್ತಿದ್ದೇವೆ’, ಎಂದು ಅಮೆರಿಕಾ ಎಚ್ಚರಿಕೆಯನ್ನು ನೀಡಿದೆ.

೨. ಹಿಂದೂಗಳ ದೇವಾಲಯಗಳನ್ನು ಮುಕ್ತಗೊಳಿಸಲು ಹಿಂದೂ ರಾಷ್ಟ್ರವೇ ಬೇಕು !

ದೆಹಲಿಯ ಕುತುಬ ಮಿನಾರ ಪರಿಸರದಲ್ಲಿರುವ ಮಸೀದಿಗಳನ್ನು ೨೭ ಹಿಂದೂ ಮತ್ತು ಜೈನರ ದೇವಸ್ಥಾನಗಳನ್ನು ಕೆಡವಿ ಕಟ್ಟಲಾಗಿದ್ದು ಅಲ್ಲಿ ಪುನಃ ದೇವಸ್ಥಾನಗಳ ಪುನರ್ನಿರ್ಮಾಣ ಮಾಡಬೇಕು, ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

೩. ಮುಂದುವರಿದ ಕಾಂಗ್ರೆಸ್ಸಿನ ಹಿಂದೂದ್ವೇಷದ ಸರಣಿ !

ಕರ್ನಾಟಕದ ವಿಧಾನಸಭೆಯಲ್ಲಿ ಗೋಹತ್ಯಾ ನಿಷೇಧಿಸುವ ಮಸೂದೆಯನ್ನು ಸಮ್ಮತಗೊಳಿಸಲಾಯಿತು. ಈ ವಿಧೇಯಕ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತ್ತು.

೪. ಭಯೋತ್ಪಾದಕರಿಗೆ ಸಹಾಯ ಮಾಡುವ ಕಾಂಗ್ರೆಸ್ ಮೇಲೆ ನಿರ್ಬಂಧ ಹೇರಬೇಕು !

ಜಮ್ಮೂ-ಕಾಶ್ಮೀರದ ಶೋಪಿಯಾ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಪರಾರಿಯಾಗಲು ಸಹಾಯ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನ್ಯಾಯವಾದಿ ಗೌಹರ ಅಹಮದ ವಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

೫. ಹಿಂದೂಗಳ ದೇವಸ್ಥಾನಗಳನ್ನು ಯಾವಾಗ ರಕ್ಷಿಸಲಾಗುತ್ತದೆ ?

ಕೇರಳದ ಮಲಪ್ಪುರಮ್ ಎಂಬ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಯ ವನ್ನಿಯಾಮಬಲಮ್ ದೇವಸ್ಥಾನದಲ್ಲಿ ಬೂಟ್ ಹಾಕಿ ಪ್ರವೇಶಿಸಿದ ಪ್ರಕರಣದಲ್ಲಿ ಹಿಜಾಬ ಧರಿಸಿದ್ದ ಓರ್ವ ಮಹಿಳೆಯ ವಿರುದ್ಧ ಪೊಲೀಸರಲ್ಲಿ ದೂರು ನೀಡಲಾಗಿದೆ.

೬. ರೈತರ ಅಂದೋಲನಕ್ಕೆ ಖಲಿಸ್ತಾನಿಯರ ಬೆಂಬಲವನ್ನು ತಿಳಿಯಿರಿ !

ಭಾರತದಲ್ಲಿ ಕೃಷಿ ಕಾನೂನನ್ನು ವಿರೋಧಿಸುವಾಗ ಭಾರತವಿರೋಧಿ ಸಮೂಹವು ವಾಶಿಂಗ್ಟನ್(ಅಮೆರಿಕಾ)ದ ಭಾರತೀಯ ರಾಯಭಾರಿ ಕಚೇರಿಯ ಎದುರಿಗಿರುವ ಮ. ಗಾಂಧಿಯವರ ಪುತ್ಥಳಿಯನ್ನು ಖಲಿಸ್ತಾನಿ ಧ್ವಜ ಹೊದಿಸಿದ್ದರು.

೭. ಇಂತಹ ಘಟನೆಗಳು ಯಾವಾಗ ನಿಲ್ಲುವುದು ?

ಮದುವೆಯ ಆಮಿಷವೊಡ್ಡಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಪ್ರಕರಣದಲ್ಲಿ ೨೫ ವರ್ಷದ ಶಬಾಬ್‌ನನ್ನು ಬೆಂಗಳೂರಿನ ಜಯನಗರ ಪೊಲೀಸರು ಬಂಧಿಸಿದ್ದಾರೆ