ಮೊಘಲರು, ಬ್ರಿಟೀಶರು, ಸೋನಿಯಾ ಕಾಂಗ್ರೆಸ್ ಇವರು ತಮ್ಮ ಸಾಮರ್ಥ್ಯದಿಂದ ಅಲ್ಲ, ಬದಲಾಗಿ ಹಿಂದೂಗಳು ಸಂಘಟಿತರಾಗದೇ ಇದ್ದರಿಂದ ಯಶಸ್ವಿಯಾದರು ! – ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

ಅಲೆಕ್ಸಾಂಡರ್, ಮೊಘಲರು, ಬ್ರಿಟೀಶರು, ಸೋನಿಯಾ ಕಾಂಗ್ರೆಸ್ ಇವರು ತಮ್ಮ ಸಾಮರ್ಥ್ಯದಿಂದ ಅಲ್ಲ, ಬದಲಾಗಿ ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದರಿಂದ ಯಶಸ್ವಿಯಾದರು. ಆಕ್ರಮಣಕಾರಿ ಶಕ್ತಿಯಿಂದ ನಮ್ಮ ಧರ್ಮದ ರಕ್ಷಣೆ ಮಾಡಲು ನಾವು ಒಟ್ಟಾಗುವ ಸಮಯ ಬಂದಿದೆ, ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಪರಾರಿಯಾಗಿದ್ದ ಕಾಂಗ್ರೆಸ್‌ನ ಮತಾಂಧ ನಾಯಕನ ಬಂಧನ

ಈ ವರ್ಷ ಆಗಸ್ಟ್ ೧೧ ರಂದು ಮತಾಂಧರು ನಡೆಸಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಕಾಂಗ್ರೆಸ್ ಮುಖಂಡ ರಕೀಬ್ ಜಾಕಿರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕಾಂಗ್ರೆಸ್‌ನ ಎರಡನೇ ಮಾಜಿ ಕಾರ್ಪೊರೇಟರ್.

ಭಾಗ್ಯನಗರ ಮಹಾನಗರ ಪಾಲಿಕೆ ತ್ರಿಶಂಕು ಸ್ಥಿತಿ !

ಭಾಗ್ಯನಗರ ಮಹಾನಗರ ಪಾಲಿಕೆ ಚುನಾವಣೆಯ ನಂತರ ತ್ರಿಶಂಕು ಸ್ಥಿತಿ ಉಂಟಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಯು ಅತಿ ಹೆಚ್ಚು ೫೫ ಸ್ಥಾನಗಳನ್ನು ಗಳಿಸಿದೆ, ನಂತರದ ಸ್ಥಾನದಲ್ಲಿ ಬಿಜೆಪಿ ೪೮ ಸ್ಥಾನಗಳನ್ನು ಮತ್ತು ಮೂರನೇ ಸ್ಥಾನದಲ್ಲಿರುವ ಎಂ.ಐ.ಎಂ. ೪೪ ಸ್ಥಾನಗಳನ್ನು ಪಡೆದಿವೆ.

‘ಕಲ್ಪವೃಕ್ಷ’ ಸಂಸ್ಥೆಯ ಜಾಲತಾಣದಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್.ಹುಸೇನ್ ಚಿತ್ರಗಳ ಮಾರಾಟ

ಸ್ಥಳೀಯ ‘ಕಲ್ಪವೃಕ್ಷ’ ಸಂಸ್ಥೆಯ ಜಾಲತಾಣದದಲ್ಲಿ ಚಿತ್ರಗಳ ಮಾರಾಟವಾಗುತ್ತಿದ್ದು, ಇದರಲ್ಲಿ ಹಿಂದೂ ದ್ವೇಷಿ ಚಿತ್ರಕಾರ ಎಂ.ಎಫ್.ಹುಸೇನ್ ಚಿತ್ರಗಳೂ ಇವೆ. ಆದ್ದರಿಂದ ಹಿಂದೂ ಧರ್ಮಾಭಿಮಾನಿಗಳು ಇದನ್ನು ವಿರೋಧಿಸುತ್ತಾ ಹುಸೇನ್ ಚಿತ್ರಗಳ ಮಾರಾಟವನ್ನು ನಿಲ್ಲಿಸಲು ಆಗ್ರಹಿಸುತ್ತಿದ್ದಾರೆ.

‘ಹಿಂದೂಗಳು ದ್ರೋಹಿಗಳು’ ಎಂದು ಟೀಕಿಸಿದ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆಯನ್ನು ಬಂಧಿಸುವಂತೆ ಆಗ್ರಹ

ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ) ಇಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಸೇರಿಕೊಂಡು ‘ಹಿಂದೂಗಳು ದ್ರೋಹಿಗಳಾಗಿದ್ದಾರೆ. ಅವರು ೧೦೦ ವರ್ಷಗಳ ಕಾಲ ಮೊಘಲರ ಗುಲಾಮರಾಗಿದ್ದರು’ ಎಂದು ಹೇಳಿದರು.

‘ರಾವಣ ಖಳನಾಯಕನಲ್ಲ, ಅವನಲ್ಲಿಯೂ ಮನುಷ್ಯತ್ವ ಇತ್ತು !’(ಅಂತೆ)

ಇಲ್ಲಿಯವರೆಗೆ ನಾವು ರಾವಣನನ್ನು ಖಳನಾಯಕನ ಪಾತ್ರದಲ್ಲಿ ಮಾತ್ರ ನೋಡಿದ್ದೇವೆ; ಆದರೆ ಅವನು ಖಳನಾಯಕನಾಗಿರಲಿಲ್ಲ. ಅವನಲ್ಲಿಯೂ ಮನುಷ್ಯತ್ವ ಇತ್ತು. ರಾವಣನ ಮಾನವೀಯತೆ ಹೇಗಿತ್ತು ? ‘ಆದಿಪುರುಷ್’ ಚಿತ್ರದಲ್ಲಿ ಇದನ್ನು ತೋರಿಸಲಾಗುವುದು ಎಂದು ನಟ ಸೈಫ್ ಅಲಿ ಖಾನ್ ಆಂಗ್ಲ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಸ್ಲಿಮರಿಗೆ ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಅನುಮತಿಸಬಾರದು !

ಇಸ್ಲಾಂ ನಂತಹ ಧರ್ಮದಲ್ಲಿ ಬಹುಪತ್ನಿತ್ವದ ಪದ್ದತಿ ಇರುವ ಬಗ್ಗೆ ಹಾಗೂ ಇತರ ಧರ್ಮಗಳಲ್ಲಿ ಇದಕ್ಕೆ ನಿಷೇಧ ವಿಧಿಸುವಂತಹ ಅನುಮತಿಯನ್ನು ನೀಡಲು ಸಾಧ್ಯವಿಲ್ಲ, ಎಂದು ಕೋರಿ ಐವರು ನ್ಯಾಯವಾದಿ ವಿಷ್ಣು ಶಂಕರ ಜೈನ್ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೨೬ ಕಛೇರಿಗಳ ಮೇಲೆ ಇ.ಡಿ.ಯ ದಾಳಿ

ವಿದೇಶಗಳಿಂದ ಸಿಗುವಂತಹ ದೇಣಿಗೆ ಹಾಗೂ ಆರ್ಥಿಕ ದುರುಪಯೋಗ(ಅವ್ಯವಹಾರ)ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.ಯು) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೨೬ ಕಛೇರಿಗಳ ಮೇಲೆ ದಾಳಿ ನಡೆಸಿತು.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾನೂನಿನ ಮೂಲಪಾಠವೂ ತಿಳಿದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಛೀಮಾರಿ

ಕರ್ನಾಟಕದ ಗೋವಿಂದರಾಜ ನಗರದ ಮಸೀದಿಯೊಂದರಲ್ಲಿ ನಮಾಜ್ ವೇಳೆ ಧ್ವನಿವರ್ಧಕದಿಂದ ನಿಗದಿತ ಡೆಸಿಬೆಲ್‌ಗಿಂತ ಹೆಚ್ಚು ಶಬ್ದ ಹೊರ ಹೊಮ್ಮುತ್ತಿರುವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಛೀಮಾರಿ ಹಾಕಿದೆ.

ಭಾರತ ಇಡೀ ಜಗತ್ತಿನ ನೇತೃತ್ವವನ್ನು ವಹಿಸಲು ಸಕ್ಷಮ ! – ಆರ್.ಎಸ್.ಎಸ್ ಸರಸಂಘಚಲಕ ಡಾ. ಮೋಹನ ಭಾಗವತ

‘ವೈವಿಧ್ಯತೆಯನ್ನು ಜೋಡಿಸುವ ಘಟಕ ಕೇವಲ ಭಾರತದ ಹತ್ತಿರವಿದ್ದು, ಅದನ್ನು ಜಗತ್ತಿಗೆ ನೀಡುವುದಿದೆ. ಭಾರತವು ಇಡೀ ಜಗತ್ತಿನ ನೇತೃತ್ವ ವಹಿಸಲು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕರು ಡಾ. ಮೋಹನ ಭಾಗವತ ಇವರು ದೂರಸಂಪರ್ಕ ವ್ಯವಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಇದನ್ನು ಹೇಳಿದರು.