ನಾಸಿಕ್ – ಇಲ್ಲಿನ ತ್ರಯಂಬಕೇಶ್ವರದಿಂದ 10 ಮುಸಲ್ಮಾನ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಗಿರಿ ಪರ್ವತ ಪ್ರದೇಶದಲ್ಲಿ ಈ ಯುವಕರು ಮೊಬೈಲ್ ಮೂಲಕ ಪರಿಸರದ ಚಿತ್ರೀಕರಣ ಮಾಡುತ್ತಿದ್ದರು. ಅವರ ಚಲನವಲನ ಅನುಮಾನಾಸ್ಪದವಾಗಿದ್ದರಿಂದ ಸ್ಥಳೀಯ ನಾಗರೀಕರು ಅವರ ವಿಚಾರಣೆ ಮಾಡಿದರು. ಆಗ ಮುಸಲ್ಮಾನರು ಅವರಿಗೆ ಬೇಕಾಬಿಟ್ಟಿಯಾಗಿ ಉತ್ತರಿಸಿದರು; ಆದ್ದರಿಂದ ನಾಗರಿಕರು ಪೊಲೀಸರಿಗೆ ದೂರು ನೀಡಿದರು. ಆನಂತರ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು. ಆ ಯುವಕರು ಕೇರಳದವರು ಎಂದು ತಿಳಿದು ಬಂದಿದೆ. ಅವರನ್ನು ವಿಚಾರಣೆಗಾಗಿ ತ್ರಯಂಬಕೇಶ್ವರ ಠಾಣೆಗೆ ಕರೆದೊಯ್ಯಲಾಗಿದೆ. ಅವರಲ್ಲಿರುವ ದಾಖಲೆಗಳು ಮತ್ತು ಮೊಬೈಲ್ ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಸಂಪಾದಕೀಯ ನಿಲುವುಕೇರಳದ ಮುಸಲ್ಮಾನರು ಹಿಂದೂಗಳ ತೀರ್ಥಕ್ಷೇತ್ರಗಳಲ್ಲಿ ಏನು ಮಾಡುತ್ತಿದ್ದರು ?, ಇದರ ತನಿಖೆ ನಡೆಸಿ ಸತ್ಯ ಹೊರಬರಬೇಕು ! |