ಯತಿ ನರಸಿಂಹಾನಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವ ಮತಾಂಧ ಮುಸ್ಲಿಮರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರೋಕ್ಷ ಎಚ್ಚರಿಕೆ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಪ್ರತಿಯೊಬ್ಬ ನಾಗರಿಕನು ಮಹಾನ್ ಪುರುಷರ ಬಗ್ಗೆ ಕೃತಜ್ಞತೆಯ ಭಾವವನ್ನು ಹೊಂದಿರಬೇಕು; ಆದರೆ ಅದನ್ನು ಬಲವಂತವಾಗಿ ಯಾರ ಮೇಲೂ ಹೇರುವಂತಿಲ್ಲ. ಎಲ್ಲ ಧರ್ಮದವರು ಪರಸ್ಪರ ಗೌರವಿಸಬೇಕು. ಯಾರಾದರೂ ಶ್ರದ್ಧೆಯ ಜೊತೆ ಆಟವಾಡಿದರೆ, ಮಹಾಪುರುಷರ, ದೇವತೆಗಳ, ಪಂಥಗಳ ಶ್ರದ್ಧೆಗೆ ಅವಮಾನ ಮಾಡಿ, ಅಸಭ್ಯ ಹೇಳಿಕೆಗಳನ್ನು ನೀಡಿದರೆ ಅವರನ್ನು ಕಾನೂನಿನ ವ್ಯಾಪ್ತಿಗೆ ತಂದು ಕಠಿಣ ಶಿಕ್ಷೆ ವಿಧಿಸಲಾಗುವುದು. ಆಂದೋಲನದ ಹೆಸರಿನಲ್ಲಿ ಅರಾಜಕತೆ, ವಿಧ್ವಂಸಕತೆ ಅಥವಾ ಬೆಂಕಿ ಹಚ್ಚುವುದನ್ನು ಅನುಮತಿಸಲಾಗುವುದಿಲ್ಲ. ಹಾಗೆ ಮಾಡಲು ಧೈರ್ಯ ಮಾಡುವವರು ಬೆಲೆ ತೆತ್ತಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.
ಯತಿ ನರಸಿಂಹಾನಂದರು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ರಾಜ್ಯದಲ್ಲಿ ಮುಸ್ಲಿಮರಿಂದ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಎಚ್ಚರಿಕೆ ನೀಡಿದ್ದಾರೆ. ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಕಾನೂನು ಸುವ್ಯವಸ್ಥೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಶಾರದೀಯ ನವರಾತ್ರಿ ಮತ್ತು ವಿಜಯದಶಮಿಯನ್ನು ಸಂತೋಷ, ಶಾಂತಿ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ಆಚರಿಸಲು ಪ್ರತಿ ಜಿಲ್ಲೆ ಮತ್ತು ಪ್ರತಿ ಪೊಲೀಸ್ ಠಾಣೆ ಕಟ್ಟೆಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಪೊಲೀಸ್ ಆಡಳಿತಕ್ಕೆ ಸೂಚನೆ ನೀಡಿದರು.
ಸಂಪಾದಕೀಯ ನಿಲುವುಯೋಗಿ ಆದಿತ್ಯನಾಥ್ ಬಿಟ್ಟರೆ, ದೇಶದ ಯಾವ ಮುಖ್ಯಮಂತ್ರಿಗಳೂ ಇಂತಹ ನೇರ ಎಚ್ಚರಿಕೆಯನ್ನು ನೀಡುವುದಿಲ್ಲ, ಇದರಿಂದ ಯೋಗಿ ಆದಿತ್ಯನಾಥ್ ಅವರು ಜನರ ಸುರಕ್ಷತೆಯ ಬಗ್ಗೆ ಎಷ್ಟು ಸಂವೇದನಾಶೀಲರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ! |