ಪಾಟಲೀಪುತ್ರ (ಬಿಹಾರ) – ಭಾರತೀಯ ಪಾಸ್‌ಪೋರ್ಟ್ ಪಡೆಯಲು ಪ್ರಯತ್ನಿಸುತ್ತಿರುವಾಗ ಬಾಂಗ್ಲಾದೇಶಿ ನುಸುಳುಕೋರ ನವಾಬನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಬಿಹಾರದ ಅರಾರಿಯಾ ಜಿಲ್ಲೆಯ ರಾಮಪುರ ಕುದಾರಕಟ್ಟಿ ಗ್ರಾಮದಲ್ಲಿ ಸುಮಾರು 3 ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದನು. (ಇದು ಪೊಲೀಸ್ ಮತ್ತು ಆಡಳಿತಕ್ಕೆ ನಾಚಿಕೆಗೇಡು! – ಸಂಪಾದಕರು)
1. ನುಸುಳುಕೋರ ನವಾಬನು ಅರಾರಿಯಾಕ್ಕೆ ಸ್ಥಳಾಂತರಗೊಳ್ಳುವ ಮೊದಲು ಬಿಹಾರದ ಕಟಿಹಾರ್‌ನಲ್ಲಿ ವಾಸಿಸುತ್ತಿದ್ದನು. ಅವನು ರಂಗಿಲಾ ಖಾತೂನ್ ಮಹಿಳೆಯೊಂದಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದನು. ನವಾಬನಿಗೆ ನುಸರತ ಖಾತೂನ ಹೆಸರಿನ ಹೆಣ್ಣುಮಗುವಿದೆ.
2. ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿರುವಾಗ, ಅವನು ಬಾಂಗ್ಲಾದೇಶಿ ನುಸುಳುಕೋರನಾಗಿರುವುದು ಬೆಳಕಿಗೆಬಂದಿತು. ಅವನು `ಬೂಥ ಲೆವಲ್ ಆಫೀಸರ’ (ಬಿಎಲ್‌ಒ)ಗೆ ಹಣ ನೀಡಿ ಭಾರತೀಯ ವೋಟರ್‍ಐಡಿ ಪಡೆದುಕೊಂಡಿದ್ದನು.
3. ರಾಮಪುರ ಕುದಾರಕಟ್ಟಿ ಪಂಚಾಯಿತಿ ಸಮಿತಿ ಅಧ್ಯಕ್ಷೆ ಪಮ್ಮಿದೇವಿಯವರು ನವಾಬನ ದಾಖಲೆಗಳನ್ನು ಪರಿಶೀಲಿಸುವಾಗ ಅನುಮಾನ ಮೂಡಿತು. ಈ ಪ್ರಕರಣದಲ್ಲಿ ಅವನನ್ನು ವಿಚಾರಿಸಿದಾಗ ನವಾಬನು ತಾನು ಬಾಂಗ್ಲಾದೇಶದ ಪ್ರಜೆಯಾಗಿದ್ದಾನೆಂದು ಒಪ್ಪಿಕೊಂಡಿದ್ದಾನೆ.
4. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ನವಾಬನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
5. ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರು ಅಶ್ಲೀಲ ಚಲನಚಿತ್ರದಲ್ಲಿ ಕೆಲಸ ಮಾಡುವ ಬಾಂಗ್ಲಾದೇಶಿ ಅಭಿನೇತ್ರಿ ಬನ್ನಾ ಶೇಖ್ ಳನ್ನು ಭಾರತದಲ್ಲಿ ಅಕ್ರಮವಾಗಿ ವಾಸ್ತವ್ಯ ಮಾಡಿರುವ ಕಾರಣದಿಂದ ಬಂಧಿಸಿತ್ತು. ಅವಳು ಬಾಂಗ್ಲಾದೇಶಿ ಮುಸಲ್ಮಾನಳಾಗಿದ್ದಾನೆಂದು ದೃಢಪಟ್ಟಿದ್ದು, ಅವಳು ನಕಲಿ ದಾಖಲೆಗಳನ್ನು ಉಪಯೋಗಿಸಿ ಭಾರತದಲ್ಲಿ ವಾಸಿಸುತ್ತಿದ್ದಳು. (ಇಂತಹ ನುಸುಳುಕೋರರನ್ನು ಹುಡುಕಿ ಹೊರಗೆ ಅಟ್ಟುವ ರಾಜಕಾರಣಿಗಳು ಬೇಕು ! – ಸಂಪಾದಕರು)