‘ಭಾರತದ ಭದ್ರತೆಗೆ ಧಕ್ಕೆಯಾಗುವಂತೆ ಏನೂ ಮಾಡುವುದಿಲ್ಲವಂತೆ !’ – ಮಾಲ್ಡೀವ್ಸ್ ರಾಷ್ಟ್ರಪತಿ ಮುಯಿಜ್ಜೂ

ಭಾರತದ ಪ್ರವಾಸದ ಮೇಲಿರುವ ಮಾಲ್ಡೀವ್ಸ್ ರಾಷ್ಟ್ರಪತಿ ಮುಯಿಜ್ಜೂ ಹೇಳಿಕೆ

ನವ ದೆಹಲಿ – ಮಾಲ್ಡೀವ್ಸ್ ಭಾರತದ ಭದ್ರತೆಗೆ ಧಕ್ಕೆಯಾಗುವಂತೆ ಏನನ್ನೂ ಮಾಡುವುದಿಲ್ಲ. ಭಾರತವು ಮಾಲ್ಡೀವ್ಸನ ಪ್ರಮುಖ ಪಾಲುದಾರ ಮತ್ತು ಮಿತ್ರ ದೇಶವಾಗಿದೆ. ನಮ್ಮ ಸಂಬಂಧಗಳು ಪರಸ್ಪರ ಗೌರವ ಮತ್ತು ಸಾಮಾನ ಹಿತಸಂಬಂಧವನ್ನು ಆಧರಿಸಿವೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮಹಮ್ಮದ್ ಮುಯಿಜ್ಜೂ ಹೇಳಿದ್ದಾರೆ. ಅವರು ಸಧ್ಯಕ್ಕೆ ಭಾರತದ ಪ್ರವಾಸದಲ್ಲಿದ್ದಾರೆ.

1. ಪತ್ರಕರ್ತರೊಂದಿಗೆ ಮಾತನಾಡುವಾಗ ಮುಯಿಜ್ಜೂ ಅವರು, ನಾವು ಇತರೆ ದೇಶಗಳೊಂದಿಗೆ ಹಲವು ಕ್ಷೇತ್ರಗಳ ನಡುವೆ ಸಹಕಾರವನ್ನು ಹೆಚ್ಚಿಸುತ್ತಿದ್ದೇವೆ; ಆದರೆ ಇದರಿಂದ ಭಾರತದ ಭದ್ರತೆಗೆ ಧಕ್ಕೆಯಾಗುವುದಿಲ್ಲ. ಮಾಲ್ಡೀವ್ಸ್ ಭಾರತದೊಂದಿಗೆ ಸುದೀರ್ಘ ಮತ್ತು ಮಹತ್ವದ ಸಂಬಂಧಗಳಿಗೆ ಆದ್ಯತೆ ನೀಡುವುದನ್ನು ಮುಂದುವರೆಸುವುದು.

2. ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೈನಿಕರಿಗೆ ಮರಳಿ ಕಳುಹಿಸುವ ವಿಷಯದಲ್ಲಿ ಮುಯಿಜ್ಜೂ ಅವರು, `ಮಾಲ್ಡೀವ್ಸ ಜನತೆಯ ಆಗ್ರಹವಾಗಿತ್ತು. ಅದನ್ನು ನಾವು ಪಾಲಿಸಿದ್ದೇವೆ. ಭಾರತದಲ್ಲಿ ಪ್ರಜಾಪ್ರಭುತ್ವವಿರುವುದರಿಂದ ಭಾರತ ಮತ್ತು ಇಲ್ಲಿಯ ಜನರು ಖಂಡಿತವಾಗಿಯೂ ತಿಳಿದುಕೊಳ್ಳುತ್ತಾರೆ’’ ಎಂದು ಹೇಳಿದರು.

ಮುಯಿಜ್ಜೂ ಭಾರತಕ್ಕೆ ಏಕೆ ಬಂದಿದ್ದಾರೆ ?

ಮಾಲ್ಡೀವ್ಸ್ ಗೆ ಭಾರತದಿಂದ ಆರ್ಥಿಕ ಸಹಾಯ ಬೇಕಾಗಿದೆ ಮತ್ತು ಭಾರತವು ನೀಡಿದ್ದ ಹಳೆಯ ಸಾಲವನ್ನು ಪಾವತಿಸಲು ಹೆಚ್ಚಿನ ಸಮಯವನ್ನು ಕೇಳಲಿದೆ. ‘ಭಾರತ ಸಹಾಯ ಮಾಡದಿದ್ದರೆ, ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ’ ಎಂದು ಮಾಲ್ಡೀವ್ಸ ಗಮನಕ್ಕೆ ಬಂದಿದೆ. ಮುಯಿಜ್ಜೂ ಇವರು ಪ್ರಧಾನಿ ಮೋದಿಯವರೊಂದಿಗಿನ ಸಭೆಯಲ್ಲಿ ಈ ಅಂಶಗಳಿಗೆ ಪ್ರಾಮುಖ್ಯತೆಯಿರುವ ಸಾಧ್ಯತೆಇದೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಯಾವ ದೇಶವು ಚೀನಾದ ವಶಕ್ಕೆ ಹೋಗುತ್ತವೆಯೋ, ಅವು ಚೀನಾದ ಹಿತ ಮತ್ತು ಭಾರತದ ಅಹಿತವನ್ನು ಮಾಡುವುದಕ್ಕಾಗಿಯೇ ಹೆಜ್ಜೆ ಇಡುತ್ತಾರೆ ಇದೇ ಇತಿಹಾಸವಾಗಿದೆ. ಹಾಗಾಗಿ ಮುಯಿಜ್ಜೂರವರ ಹೇಳಿಕೆಯ ಮೇಲೆ ಯಾರು ವಿಶ್ವಾಸವಿಡುತ್ತಾರೆ ?