ಭಾಜಪ ಶಾಸಕ ನಂದ ಕಿಶೋರ ಗುರ್ಜರ ಇವರಿಂದ ಪೊಲೀಸರಿಗೆ ಮನವಿ
ಗಾಜಿಯಾಬಾದ (ಉತ್ತರ ಪ್ರದೇಶ) – ಇಲ್ಲಿನ ಡಾಸನಾ ದೇವಸ್ಥಾನದ ಮಹಂತ ನರಸಿಂಹಾನಂದ ಸರಸ್ವತಿ ಅವರು ಮಹಮ್ಮದ ಪೈಗಂಬರರ ವಿಷಯದಲ್ಲಿ ಮಾಡಿರುವ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯಿಂದ ಅಕ್ಟೋಬರ್ 4 ರ ರಾತ್ರಿ ಸಾವಿರಾರು ಮುಸ್ಲಿಮರು ಡಾಸನಾ ದೇವಸ್ಥಾನದ ಹೊರಗೆ ಜಮಾಯಿಸಿ ಗದ್ದಲ ಮಾಡಿದ್ದರು. ಈ ಪ್ರಕರಣದಲ್ಲಿ ಲೋಣಿಯ ಭಾಜಪ ಶಾಸಕ ನಂದ ಕಿಶೋರ ಗುರ್ಜರ್ ಅಕ್ಟೋಬರ್ 5 ರಂದು ದೇವಸ್ಥಾನವನ್ನು ತಲುಪಿದರು. `ದೇವಸ್ಥಾನದ ಮೇಲೆ ಯಾರು ದಾಳಿ ಮಾಡಿದ್ದಾರೆಯೋ, ಅವರನ್ನು ಹತ್ಯೆ ಮಾಡಬೇಕು’, ಎಂದು ಅವರು ಪೊಲೀಸರಿಗೆ ಕರೆ ನೀಡಿದ್ದರು.
ಶಾಸಕ ಗುರ್ಜರ ಮಾತನ್ನು ಮುಂದುವರಿಸಿ, ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಭಗವಾನ ಪರಶುರಾಮನು ಪೂಜೆ ಮಾಡಿದ್ದರು. ಮಹಾಭಾರತ ಕಾಲದಲ್ಲಿ ಪಾಂಡವರು ಈ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿದ್ದರು. ಬಾಂಗ್ಲಾದೇಶ ಸೇರಿದಂತೆ ಇತರೆ ಸ್ಥಳಗಳಲ್ಲಿ ನಡೆದಿರುವ ಹಿಂದೂಗಳ ಮೇಲಿನ ದಾಳಿಯ ಕಾರಣದಿಂದ ಸಿಟ್ಟಿನ ಭರದಲ್ಲಿ ಮಹಂತರು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರೆ, ಅವರ ವಿರುದ್ಧ ದೂರು ದಾಖಲಿಸಿರಿ, ಪೊಲೀಸರು ಕ್ರಮ ಜರುಗಿಸುತ್ತಾರೆ. ದೇಶವು ಕಾನೂನು ಮತ್ತು ಸಂವಿಧಾನದಂತೆ ನಡೆಯುತ್ತದೆ. ಅಕ್ಟೋಬರ 4ರ ರಾತ್ರಿ ಕೇವಲ ದೇವಸ್ಥಾನದ ಮೇಲೆ ಮಾತ್ರವಲ್ಲ, ಬದಲಾಗಿ ಸನಾತನ ಧರ್ಮದ ಮೇಲೆಯೂ ದಾಳಿ ನಡೆಸಲು ಪ್ರಯತ್ನಿಸಲಾಯಿತು. ಈ ರೀತಿ ಮಾಡುವವರನ್ನು ಪೊಲೀಸರು ಎದುರಿಸಬೇಕು. ದಾಳಿಕೋರರು ಹೊರಗಿನಿಂದ ಬಂದಿದ್ದರು. ಇದರಿಂದ ದೇವಸ್ಥಾನದಲ್ಲಿ ಪೂಜೆ ಮಾಡಲು ಬರುವ ಹಿಂದೂಗಳಲ್ಲಿ ಆಕ್ರೋಶದ ವಾತಾವರಣವಿದೆ. ಈ ಪ್ರಕರಣದಲ್ಲಿ ಹಿಂದೂ ಸಂಘಟನೆ ಯಾವ ನಿರ್ಣಯ ತೆಗೆದುಕೊಳ್ಳುವುದೋ, ನಾವು ಅವರೊಂದಿಗೆ ಇದ್ದೇವೆ ಎಂದು ಹೇಳಿದರು.