ಬೈರುತ್ (ಲೆಬನಾನ್) – ಪಶ್ಚಿಮ ಏಷ್ಯಾದಲ್ಲಿನ ಅಶಾಂತಿಯ ಹಿನ್ನೆಲೆಯಲ್ಲಿ, ಲೆಬನಾನ್ ನ ಭಾರತದಲ್ಲಿನ ರಾಯಭಾರಿ ಡಾ. ರಾಬೀ ನಾರ್ಶ್ ಅವರು, ‘ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಬಹುದು,’ ಎಂದು ಹೇಳಿದರು. ಈ ಮೊದಲು ಇರಾನ್ ನ ರಾಯಭಾರಿ ಕೂಡ ಗಾಜಾದಲ್ಲಿನ ದಾಳಿಯನ್ನು ನಿಲ್ಲಿಸುವುದಕ್ಕಾಗಿ ಭಾರತ ಇಸ್ರೇಲ್ ನ ಮನವೊಲಿಸಬಹುದು ಎಂದು ಹೇಳಿದ್ದರು.
ರಾಯಭಾರಿ ಡಾ. ರಾಬಿ ನಾರ್ಸ್ ಮಾತನಾಡಿ, ಇಸ್ರೇಲ್ ಸರಕಾರದ ಮೇಲೆ ಒತ್ತಡ ಹೇರುವಂತೆ ನಮ್ಮ ಸ್ನೇಹಿತರಿಗೆ ಮನವಿ ಮಾಡಿದ್ದೇವೆ, ಇದರಿಂದ ಸಂಘರ್ಷ ಕೊನೆಗೊಳ್ಳುತ್ತದೆ. ‘ನಮಗೆ ಇಸ್ರೇಲ್‌ನೊಂದಿಗೆ ಉತ್ತಮ ಸಂಬಂಧ ಬೇಕಾಗಿದೆ ಮತ್ತು ಈ ಸಂಘರ್ಷ ಕೊನೆಗೊಳಿಸಬೇಕಾಗಿದೆ ನಾವು ಅವರಿಗೆ ಹೇಳಿದ್ದೇವೆ. ಭಾರತವು ಲೆಬನಾನ್ ಗೆ ಅತಿ ಶೀಘ್ರದಲ್ಲಿ ವೈದ್ಯಕೀಯ ಮತ್ತು ಮಾನವೀಯ ನೆರವನ್ನು ಕಳುಹಿಸುತ್ತದೆ. ಲೆಬನಾನ್‌ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಮತ್ತು ನಮ್ಮ ಸರಕಾರವು 2006 ರಲ್ಲಿ ಅಂಗೀಕರಿಸಿದ ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನ ನಿರ್ಣಯವನ್ನು ಜಾರಿಗೆ ತರಲು ಬದ್ಧವಾಗಿದೆ. ಅದರಂತೆ, ಇಸ್ರೇಲ್ ಮತ್ತು ಹೆಜಬುಲ್ಲಾ ನಡುವಿನ ಹಗೆತನವು ಕೊನೆಗೊಳ್ಳಬಹುದು ಎಂದು ಹೇಳಿದರು.
ಸಂಪಾದಕೀಯ ನಿಲುವುಉಕ್ರೇನ್, ಗಾಜಾ ಮತ್ತು ಲೆಬನಾನ್ ಯುದ್ಧಗಳಲ್ಲಿ ಭಾರತದ ಸಹಾಯವನ್ನು ನಿರೀಕ್ಷಿಸಿರುವ ಏಷ್ಯಾದಲ್ಲಿನ ದೇಶಗಳು ಭಾರತದಲ್ಲಿ ಹಿಂದೂಗಳ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತಕ್ಕೆ ಎಂದಾದರೂ ಸಹಾಯ ಮಾಡಿದೆಯೇ ? |