ಮಹಾಕುಂಭದಲ್ಲಿ ‘ಶಾಹಿ’ ಬದಲಿಗೆ ‘ರಾಜಸೀ’ ಸ್ನಾನ’ ಎಂದು ಕರೆಯಲಾಗುವುದು
ಪ್ರಯಾಗರಾಜ್ (ಉತ್ತರ ಪ್ರದೇಶ) – ಇಲ್ಲಿನ ಮಹಾಕುಂಭದಲ್ಲಿ ‘ಶಾಹಿ ಸ್ನಾನ’ವನ್ನು ಈಗ ‘ರಾಜಸೀ ಸ್ನಾನ’ ಎಂದು ಕರೆಯಲಾಗುವುದು. ಮಹಾಕುಂಭದಲ್ಲಿ ಪಾಲ್ಗೊಳ್ಳುವ ಸಂತರಿಗೂ ಗುರುತಿನ ಚೀಟಿ ನೀಡಲಾಗುವುದು. ಯಾರು ದೇಶ-ವಿದೇಶಗಳಿಂದ ಕುಂಭಸ್ನಾನಕ್ಕೆ ಬರುವವರೂ, ಅವರೂ ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ ತರಬೇಕಾಗುವುದು, ಎಂದು 8 ಅಖಾಡಗಳ ಸಂತರು ಸೇರಿ ಸ್ನಾನ ಸುರಕ್ಷಿತವಾಗಿ ಮಾಡುವುದಕ್ಕಾಗಿ ನಿರ್ಣಯ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಆಖಾಡ ಪರಿಷತ್ ನ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಅವರ ಅಧ್ಯಕ್ಷತೆಯಲ್ಲಿ ಪ್ರಯಾಗರಾಜ್‌ನ ದಾರಾಗಂಜ್‌ನಲ್ಲಿರುವ ನಿರಂಜನಿ ಆಖಾಡದ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹರಿಗಿರಿಜಿ ಮಹಾರಾಜರೊಂದಿಗೆ 8 ಅಖಾಡಗಳ ಸಂತರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ‘ಲವ್ ಜಿಹಾದ್’, ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸುವುದು, ಹಾಗೆಯೇ ಉರ್ದು ಮತ್ತು ಪರ್ಷಿಯನ್ ಪದಗಳನ್ನು ತೆಗೆದು ಸನಾತನ ಸಂಸ್ಕೃತಿಯ ಆಧಾರದ ಮೇಲೆ ಹೆಸರಿಡುವ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಆಖಾಡ ಪರಿಷತ್ ನ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಮಾತನಾಡಿ, ಪ್ರಸ್ತುತ ಹಲವು ದೇಶಗಳಲ್ಲಿ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಪರೀಕ್ಷಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ಮತ್ತು ಇತರ ಗುರುತಿನ ಚೀಟಿ ಇರುವುದು ಅವಶ್ಯಕವಾಗಿದೆ. ಯಾರಾದರೂ ಅನುಮಾನಾಸ್ಪದವಾಗಿದ್ದರೆ ಅಥವಾ ಯಾರಾದರೂ ನಮ್ಮ ಧರ್ಮಕ್ಕೆ ವಿರುದ್ಧವಾಗಿ ವರ್ತಿಸಿದರೆ, ಅವರನ್ನು ಕುಂಭಮೇಳದಿಂದ ಹೊರಹಾಕಬೇಕು. ಮಹಾಕುಂಭ ಪ್ರದೇಶದಲ್ಲಿ ಮಾಂಸ ಮತ್ತು ಮದ್ಯ ಮಾರಾಟದ ಅಂಗಡಿಗಳನ್ನು ನಿಷೇಧಿಸಬೇಕು. ಮಠ ಮತ್ತು ಮಂದಿರಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಹೇಳಿದರು.