ಶೀಘ್ರದಲ್ಲೇ ರೈಲು ಹಳಿಗಳಿಂದ ವಿದ್ಯುತ್ ಸರಬರಾಜು !

ಭಯೋತ್ಪಾದಕರು ಮತ್ತು ಸಮಾಜಘಾತುಕರ ಕಾಟ ಕಡಿಮೆ ಆಗಲಿದೆ

ನವದೆಹಲಿ – ಪ್ರಸ್ತುತ ರೈಲುಗಳಿಗೆ ಟ್ರ್ಯಾಕ್ ಬದಿಯ ವಿದ್ಯುತ್ ಕಂಬಗಳಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಆದರೆ ಈಗ ‘ಲೈವ್ ರೈಲ್ವೇ’ ಅಥವಾ ‘ಕಂಡಕ್ಟರ್ ರೈಲ್ವೇ’ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುವುದು. ರಾಜಧಾನಿ, ಶತಾಬ್ದಿ ಮತ್ತು ಇತರ ರೈಲುಗಳ ಆಕಾರವನ್ನು ಬದಲಾಯಿಸುವುದರೊಂದಿಗೆ, ಈಗ ಎಂಜಿನ್ (ಲೋಕೋಮೋಟಿವ್), ವಿದ್ಯುತ್ ಕಂಬ ಮತ್ತು ‘ಮ್ಯಾನುಯಲ್ ಸಿಗ್ನಲಿಂಗ್’ ಇತ್ಯಾದಿ ತಂತ್ರಜ್ಞಾನಗಳನ್ನು ಆಮೂಲಾಗ್ರವಾಗಿ ಬದಲಾಯಿಸಲಾಗುತ್ತಿದೆ. ಇದು ಕಾಶ್ಮೀರ ಕಣಿವೆಯಲ್ಲಿ ಹಾಗೂ ಇತರೆಡೆಗಳಲ್ಲಿ ಭಯೋತ್ಪಾದನೆ ಮತ್ತು ಸಾಮಾಜಿಕ ಅಶಾಂತಿಯ ಉಪದ್ರವವನ್ನು ಕಡಿಮೆ ಮಾಡುತ್ತದೆ.

ರೈಲ್ವೇ ಸಚಿವಾಲಯದ ಮೂಲಗಳ ಪ್ರಕಾರ, ವಂದೇ ಭಾರತ್, ಅಮೃತ ಭಾರತ್, ನಮೋ ಭಾರತ ಮೆಟ್ರೋದಂತಹ ಹೊಸ ಸರಣಿ ರೈಲುಗಳ ಆಗಮನದ ನಂತರ, ‘ಟ್ರಾಕ್ಷನ್ ಸಿಸ್ಟಮ್’ ಅನ್ನು ಬದಲಾಯಿಸುವ ಪ್ರಾಯೋಗಿಕ ಪರೀಕ್ಷೆ, ಅಂದರೆ ವಿದ್ಯುತ್ ಸರಬರಾಜು ಪ್ರಾರಂಭವಾಗಿದೆ. ಪ್ರಸ್ತುತ ಹಳಿಗಳ ಬದಿಯಲ್ಲಿ ನಿರ್ಮಿಸಿರುವ ಕಂಬಗಳಿಂದ ರೈಲಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈಗ ರೈಲ್ವೆ ಹಳಿಗಳ ಪಕ್ಕದಲ್ಲಿ ಹೊಸ ‘ಲೈನ್’ ಹಾಕಲಾಗುವುದು. ಅದರಿಂದ ವಿದ್ಯುತ್ ಸರಬರಾಜು ಮಾಡಲಾಗುವುದು. ಇದಕ್ಕಾಗಿ ಹೊಸ ರೈಲುಗಳಲ್ಲಿ ‘ಇನ್ ಟ್ರೈನ್’ ಎಂಜಿನ್ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ಕಾರಣದಿಂದಾಗಿ, ಚಾಲನೆಯಲ್ಲಿರುವ ರೈಲುಗಳಿಗೆ ಹಳಿಗಳಿಂದಲೇ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.

ಸಂಪಾದಕೀಯ ನಿಲುವು

ಈ ಶ್ಲಾಘನೀಯ ಹೆಜ್ಜೆಗೆ ರೈಲ್ವೆ ಸಚಿವಾಲಯಕ್ಕೆ ಅಭಿನಂದನೆಗಳು! ಇದರೊಂದಿಗೆ ರೈಲ್ವೆ ಅಪಘಾತಗಳಿಗೆ ಕಾರಣವಾಗುವ ಸಮಾಜಘಾತುಕರು ಮತ್ತು ಅವರ ಸಿದ್ಧಾಂತಗಳನ್ನು ತೊಡೆದುಹಾಕಲು ಗೃಹ ಸಚಿವಾಲಯವು ನಿರ್ಣಾಯಕ ಪ್ರಯತ್ನಗಳನ್ನು ಮಾಡಬೇಕು !