ಪ್ರಯಾಗರಾಜ್ – ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಕ್ಟೋಬರ್ 6 ರಂದು ಪ್ರಯಾಗರಾಜ್‌ನಲ್ಲಿ ‘ಮಹಾಕುಂಭ-2025’ ಲೋಗೋವನ್ನು ಅನಾವರಣಗೊಳಿಸಿದರು. ಮಹಾಕುಂಭದ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್ ಮತ್ತು ‘ಆ್ಯಪ್’ ಅನ್ನು ಸಹ ಅವರು ಅನಾವರಣಗೊಳಿಸಿದರು. ಲೋಗೋವು ಕುಂಭರಾಶಿಯ ಚಿಹ್ನೆ ‘ಕಲಶ’ವನ್ನು ಒಳಗೊಂಡಿದೆ, ಅದರ ಮೇಲೆ ‘ಓಂ’ ಬರೆಯಲಾಗಿದೆ. ಹಿಂದೆ ಸಂಗಮದ ನೋಟವಿದೆ. ಅಲ್ಲದೆ ನಗರದ ರಕ್ಷಕನಾದ ಭಗವಾನ್ ಶ್ರೀ ಹನುಮಂತನ ಚಿತ್ರ ಮತ್ತು ದೇವಾಲಯವಿದೆ.
1. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಮತ್ತು ಜಲವಿದ್ಯುತ್ ಸಚಿವ ಸ್ವತಂತ್ರದೇವ ಸಿಂಗ್ ಅವರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
2. ‘ಮಹಾಕುಂಭ 2025’ ಲೋಗೋ, ಮಹಾಕುಂಭ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಅನ್ನು ಇತರ ಪ್ರಚಾರ ಮಾಧ್ಯಮಗಳಲ್ಲಿ ಬಳಸಲಾಗುವುದು. ಈ ವೆಬ್‌ಸೈಟ್ ಭಕ್ತರು ಮತ್ತು ಪ್ರವಾಸಿಗರಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಮಹಾಕುಂಭವನ್ನು ತಲುಪಲು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.
3. ಪ್ರಯಾಗರಾಜ್‌ನಲ್ಲಿನ ವಸತಿ, ಸ್ಥಳೀಯ ಸಾರಿಗೆ, ಪಾರ್ಕಿಂಗ್, ಘಾಟ್‌ಗೆ ಹೋಗುವ ಮಾರ್ಗಗಳು ಇತ್ಯಾದಿಗಳ ಬಗ್ಗೆ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಮಾಹಿತಿ ಲಭ್ಯವಿರುತ್ತದೆ. ಇದರಲ್ಲಿ ‘ಮಹಾಕುಂಭ ಕ್ಷೇತ್ರಕ್ಕೆ ಹೋಗುವುದು ಹೇಗೆ? ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಹೇಗೆ?’ ಎಂಬ ವಿವರವಾದ ಮಾಹಿತಿ ನೀಡಲಾಗುವುದು. ಕುಂಭಮೇಳ ಕಾರ್ಯಕ್ರಮಗಳ ಎಲ್ಲಾ ವೇಳಾಪಟ್ಟಿ ಮತ್ತು ಇತರ ಪ್ರಮುಖ ಚಟುವಟಿಕೆಗಳ ಬಗ್ಗೆ ಮಾಹಿತಿಯೂ ಲಭ್ಯವಿರುತ್ತದೆ.