ನನ್ನನ್ನು ಜೈಲಿಗಟ್ಟಿದರೂ ನಾನು ನಿಮಗೆ ಲಂಚ ಕೊಡುವುದಿಲ್ಲ ! – ಸರಕಾರಿ ಕಚೇರಿಯಲ್ಲಿ ಬಟ್ಟೆ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ ಉದ್ಯಮಿ

ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ‘ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಕಚೇರಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಒಬ್ಬ ಉದ್ಯಮಿಯು ತನ್ನ ಬಟ್ಟೆಗಳನ್ನು ಕಳಚಿ ಕಚೇರಿಯಲ್ಲಿ ಕುಳಿತಿರುವುದು ಕಾಣಿಸುತ್ತಿದೆ. ಅವನಿಗೆ ಲಂಚವನ್ನು ಕೇಳಿದ್ದರಿಂದ ಅವನು ಹತಾಶನಾಗಿ, ನನ್ನ ಬಳಿ ಹಣವಿಲ್ಲ. ನನ್ನನ್ನು ಜೈಲಿಗೆ ಅಟ್ಟಿರಿ. ಜಿ.ಎಸ್.ಟಿ. ಅಧಿಕಾರಿಯು ಅವನ ಬಳಿ 2 ಲಕ್ಷ ರೂಪಾಯಿ ಲಂಚವನ್ನು ಕೇಳಿದ್ದನು. ಆದರೆ ಅವನು ಅದನ್ನು ನೀಡಿರಲಿಲ್ಲ; ಇದರಿಂದ ಅಧಿಕಾರಿಯು ಅವನಿಗೆ ತೊಂದರೆ ಕೊಡುತ್ತಿದ್ದಾನೆಂದು ಉದ್ಯಮಿಯು ಆರೋಪಿಸಿದ್ದಾನೆ.

(ಸೌಜನ್ಯ – Adv. Manu Sharma)

1. ವೀಡಿಯೊದಲ್ಲಿ, ಅಕ್ಷಯ ಜೈನ್ ಹೆಸರಿನ ಉದ್ಯಮಿಯು ಕಾಣಿಸುತ್ತಿದ್ದು, ಅವನು ಮೊದಲು ತನ್ನ ಶರ್ಟ ಮತ್ತು ನಂತರ ಪ್ಯಾಂಟ ತೆಗೆಯುತ್ತಿರುವುದು ಕಾಣಿಸುತ್ತಿದೆ. ತದನಂತರ ಅವನು ಕೇವಲ ಒಳ ಉಡುಪಿನಲ್ಲಿ ಧ್ಯಾನಭಂಗಿಯಲ್ಲಿ ಕುಳಿತಿದ್ದಾನೆ.

2. ಜೈನ್ ಮಾತನಾಡಿ, `ಮೇರಠನಿಂದ ನನ್ನ ಸಂಸ್ಥೆಯು ಆಮದು ಮಾಡಿಕೊಂಡ ಕಬ್ಬಿಣವನ್ನು ತರುವ ರೈಲು ನಿಲ್ಲಿಸಲಾಗಿತ್ತು. ಮತ್ತು ನನ್ನ ಮೇಲೆ ತೆರಿಗೆ ವಂಚನೆಯ ಆರೋಪ ಮಾಡಲಾಗಿತ್ತು. ನಾನು ಯಾವುದೇ ತೆರಿಗೆಯನ್ನು ವಂಚಿಸಿಲ್ಲ ಆದರೆ ಅಧಿಕಾರಿಯು ನನ್ನ ಮೇಲೆ ದಂಡ ಹೇರಿದರು.’ ಎಂದು ಹೇಳಿದರು. ಈ ಕಾರಣದಿಂದ ಅವರು ಜಿ.ಎಸ್.ಟಿ. ಕಾರ್ಯಾಲಯಕ್ಕೆ ಬಂದು ಬಟ್ಟೆಯನ್ನು ತೆಗೆದು ಕೆಳಗೆ ಕುಳಿತರು.

3. ‘ಈ ಘಟನೆಯ ಬಳಿಕ ಜಿ.ಎಸ್.ಟಿ. ಇಲಾಖೆಯು ಈ ಪ್ರಕರಣದ ತನಿಖೆ ಪ್ರಾರಂಭಿಸಿದೆ.

4. ‘ಈ ಘಟನೆ ಕೇವಲ ವೈಯಕ್ತಿಕ ಘಟನೆಯನ್ನು ಪ್ರತಿಬಿಂಬಿಸುವುದಿಲ್ಲ, ಬದಲಾಗಿ ಭ್ರಷ್ಟ ಆಡಳಿತದ ಕಾರ್ಯವೈಖರಿಯ ಬಗ್ಗೆಯೂ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸಂಪಾದಕೀಯ ನಿಲುವು

ಭ್ರಷ್ಟಾಚಾರದಿಂದ ಪೊಳ್ಳಾಗಿರುವ ದೇಶದ ದುರ್ದೆಶೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಭ್ರಷ್ಟಾಚಾರವನ್ನು ಮುಗಿಸಲು ಗ್ರಾಮಮಟ್ಟದಿಂದ ನಗರದ ವರೆಗೆ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಆಡಳಿತಗಾರರು ಹಾಗೆಯೇ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆವಶ್ಯಕತೆಯಿದೆ. ಇದಕ್ಕಾಗಿ ನಮಗೆ ಹಿಂದೂ ರಾಷ್ಟ್ರವೇ ಬೇಕು !