ಶಿವಮೊಗ್ಗದ ಬಜರಂಗ ದಳದ ಸಹಕಾರ್ಯದರ್ಶಿ ಶ್ರೀ. ನಾಗೇಶರವರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಿ ! – ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಗುರವಾರದಂದು ಶಿವಮೊಗ್ಗ ನಗರ ಬಜರಂಗದಳದ ಸಹ ಕಾರ್ಯದರ್ಶಿ ನಾಗೇಶರವರು ವಾಯು ವಿಹಾರಕ್ಕೆ ಹೋದಾಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಇಲ್ಲಿಯ ಬಜರಂಗ ದಳದ ಸಕ್ರಿಯ ಕಾರ್ಯಕರ್ತ ಶ್ರೀ. ನಾಗೇಶ ಇವರ ಮೇಲೆ ದೀಪಕ ಪೆಟ್ರೋಲ್‌ಪಂಪ್‌ನ ಪಕ್ಕದಲ್ಲಿರುವ ಉರ್ದೂ ಶಾಲೆಯ ಹತ್ತಿರ ೧೦ ರಿಂದ ೧೫ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಶ್ರೀ. ನಾಗೇಶ ಇವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚರ್ಚ್‌ನ ಪಾದ್ರಿಯಿಂದ ನಿಶ್ಚಯವಾದ ವಧುವನ್ನು ಲೈಂಗಿಕ ಕಿರುಕುಳ ನೀಡಿ ಮದುವೆಯಾಗಲು ನಿರಾಕರಣೆ

ಇಲ್ಲಿಯ ಪಾದ್ರಿ ಬಿನಿಲ್ ತನ್ನ ನಿಶ್ಚಿತ ವಧುವಿಗೆ ಲೈಂಗಿಕ ಕಿರುಕುಳ ಮತ್ತು ನಂತರ ಅವಳನ್ನು ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿದೆ. ಈ ಪಾದ್ರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಯುವತಿಗಾಗಿ ಪ್ರಾರ್ಥಿಸುವ ನೆಪದಲ್ಲಿ, ಪಾದ್ರಿ ಅವಳನ್ನು ತನ್ನ ಮನೆಗೆ ಕರೆದು ಅವಳೊಂದಿಗೆ ಲೈಂಗಿಕ ಸಂಪರ್ಕ ಪ್ರಸ್ತಾಪಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಕೋಲಕಾತಾ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸಿ.ಎಂ. ಕರ್ಣನ್ ಬಂಧನ

ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯದ ಕೆಲವು ನ್ಯಾಯಾಧೀಶರು ಮಹಿಳಾ ನ್ಯಾಯವಾದಿ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ, ಎಂದು ಆರೋಪಿಸಿದ ಪ್ರಕರಣದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸಿ.ಎಂ. ಕರ್ಣನ್ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಸರಕಾರ ‘ಲವ್ ಜಿಹಾದ್’ ತಡೆಗಟ್ಟಲು ಕಾನೂನು ರೂಪಿಸುತ್ತಿದೆ ! – ಹಣಕಾಸು ಸಚಿವ ಹಿಮಂತ ಬಿಸ್ವಾ ಸರಮಾ

ಅಸ್ಸಾಂನಲ್ಲಿಯೂ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಬರುತ್ತಿದೆ. ಇದರ ಅಡಿಯಲ್ಲಿ, ಮದುವೆಗೆ ೧ ತಿಂಗಳ ಮೊದಲು ಮದುವೆಯಾಗಲಿಚ್ಛಿಸುವ ದಂಪತಿಗಳು ತಮ್ಮ ಧರ್ಮ ಮತ್ತು ಆದಾಯದ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ನೇಪಾಳದಲ್ಲಿ ಅರಸೊತ್ತಿಗೆಯನ್ನು ಪುನಃ ಸ್ಥಾಪಿಸುವ ಮೂಲಕ ಹಿಂದೂ ರಾಷ್ಟ್ರವನ್ನು ಘೋಷಿಸಿ ! – ರಾಷ್ಟ್ರೀಯ ಶಕ್ತಿ ನೇಪಾಳ

ನೇಪಾಳ ಸರಕಾರದ ಚೀನಾ ಪರ ನೀತಿಗಳನ್ನು ನೋಡಿ ಅಲ್ಲಿನ ಹಿಂದೂ ಜನರು ದೇಶದಲ್ಲಿ ಅರಸೊತ್ತಿಗೆ ಪುನಃ ತರಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ದ್ವಿಚಕ್ರ ವಾಹನಗಳನ್ನು ಬೀದಿಗಿಳಿದು ಕಮ್ಯುನಿಸ್ಟ್ ಪಕ್ಷದ ಕೆ.ಪಿ. ಶರ್ಮಾ ಒಲಿ ಸರಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನೇಪಾಳದಲ್ಲಿ, ಮೇ ೨೮, ೨೦೦೮ ರಂದು ಅರಸೊತ್ತಿಗೆ ಕೊನೆಗೊಂಡಿತ್ತು. ಅಂದಿನಿಂದ, ದೇಶದಲ್ಲಿ ಕಮ್ಯುನಿಸ್ಟರು ಅಧಿಕಾರದಲ್ಲಿದ್ದಾರೆ.

ತುಳಸಿ ವಿವಾಹದ ನಿಮಿತ್ತ ಜಿಜ್ಞಾಸೂಗಳಿಗಾಗಿ ಸಾಮೂಹಿಕ ನಾಮಜಪದ ಆಯೋಜನೆ

ತುಳಸಿ ವಿವಾಹದ ನಿಮಿತ್ತ ನವೆಂಬರ್ ೨೬ ರ ಮಧ್ಯಾಹ್ನ ೨.೩೦ ಕ್ಕೆ ‘ಆನ್ಲೈನ್’ ಮೂಲಕ ಸಾಮೂಹಿಕ ನಾಮಜಪದ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಅಭೂತಪೂರ್ಣ ಜನಸ್ಪಂದನ ಸಿಕ್ಕಿತು. ಈ ಸಮಯದಲ್ಲಿ ‘ಓಂ ನಮೋ ಭಗವತೇ ವಾಸುದೇವಾಯ |’ ಈ ನಾಮಜಪವನ್ನು ಸಾಮೂಹಿಕವಾಗಿ ಮಾಡಲಾಯಿತು. ಇದರಲ್ಲಿ ೪೫೦ ಕ್ಕೂ ಅಧಿಕ ಜಿಜ್ಞಾಸುಗಳು ಜೊಡಣೆಯಾಗಿ ಚೈತನ್ಯಮಯ ಅನುಭೂತಿ ಪಡೆದರು.

ಹಾಸನದಲ್ಲಿ ಪೊಲೀಸರ ಮುಂದೆಯೇ ಪತ್ರಕರ್ತೆಯ ಮೇಲೆ ಮತಾಂಧ ಕಟುಕರಿಂದ ಹಲ್ಲೆ

ಅಕ್ರಮವಾಗಿ ಹಸುಗಳನ್ನು ಹತ್ಯೆಗೈದಿದ್ದನ್ನು ವಿರೋಧಿಸಿದ ಪತ್ರಕರ್ತೆಯೊಬ್ಬರ ಮೇಲೆ ಮತಾಂಧ ಕಟುಕರಿಂದ ಹಲ್ಲೆ ನಡೆದ ಘಟನೆ ಇಲ್ಲಿಯ ಪೆನ್ಶನ್ ಮೊಹಲ್ಲಾದಲ್ಲಿ ನಡೆದಿದೆ. ಪತ್ರಕರ್ತೆ, ಪ್ರಾಣಿ ಪ್ರಿಯರು ಮತ್ತು ಪೊಲೀಸರೊಂದಿಗೆ ೪ ಅಕ್ರಮ ಕಸಾಯಿಖಾನೆ ಮತ್ತು ದನಗಳನ್ನು ಇಟ್ಟಿರುವ ೫ ಸ್ಥಳಗಳಲ್ಲಿ ಭೇಟಿ ನೀಡಲು ಪ್ರಯತ್ನಿಸುತ್ತಿದ್ದರು.

ಬಿಜೆಪಿಯಿಂದ ೫೦೦ ಕ್ರೈಸ್ತರು ಮತ್ತು ೧೧೨ ಮುಸ್ಲಿಂ ಅಭ್ಯರ್ಥಿಗಳು

ಕೇರಳದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ೫೦೦ ಕ್ರೈಸ್ತರಿಗೆ ಮತ್ತು ೧೧೨ ಮುಸ್ಲಿಮರಿಗೆ ಟಿಕೇಟ್ ನೀಡಿದೆ. ಕೇರಳದಲ್ಲಿ ಡಿಸೆಂಬರ್ ೮, ೧೦ ಮತ್ತು ೧೪ ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಸಂಗಾತಿಯನ್ನು ಆರಿಸುವುದು ಯಾವುದೇ ಪ್ರಜ್ಞೆಯುಳ್ಳ ವ್ಯಕ್ತಿಯ ಮೂಲಭೂತ ಅಧಿಕಾರ ! – ಕರ್ನಾಟಕ ಉಚ್ಚ ನ್ಯಾಯಾಲಯ

ಸ್ವೇಚ್ಛೆಯಿಂದ ಸಂಗಾತಿಯನ್ನು ಆರಿಸುವುದು, ಯಾವುದೇ ಪ್ರಜ್ಞಾವಂತ ವ್ಯಕ್ತಿಯ ಮೂಲಭೂತ ಅಧಿಕಾರವಾಗಿದೆ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಈ ಅಧಿಕಾರವನ್ನು ನೀಡಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಒಂದು ಅರ್ಜಿಯನ್ನು ಆಲಿಸುವಾಗ ಹೇಳಿದೆ.