ಭೋಗಭೂಮಿ ಗೋವಾದಲ್ಲಿ ಇಂತಹ ಅದ್ಭುತ ಆಶ್ರಮವನ್ನು ನಿರ್ಮಿಸಿರುವ ಮಹಾಪುರುಷರಿಗೆ ನನ್ನ ನಮನಗಳು !

ಚಿತ್ರಕೂಟ (ಮಧ್ಯಪ್ರದೇಶ) ದಲ್ಲಿನ ಭಾಗವತ ಭಾಸ್ಕರ ಆಚಾರ್ಯ ವಿಪಿನ ಕೃಷ್ಣಜಿ ಮಹಾರಾಜರ ಸನಾತನದ ಗೋವಾದಲ್ಲಿನ ಆಶ್ರಮಕ್ಕೆ ಭೇಟಿ !

ಆಚಾರ್ಯ ವಿಪಿನ ಕೃಷ್ಣಜಿ ಮಹಾರಾಜರವರನ್ನು ಸತ್ಕರಿಸುತ್ತಿರುವ ಪೂ. ಪೃಥ್ವಿರಾಜ ಹಜಾರೆ

ರಾಮನಾಥಿ (ಗೋವಾ), ಅಕ್ಟೊಬರ್ ೩ (ವಾರ್ತೆ) – ಸನಾತನದ ಗೋವಾದಲ್ಲಿರುವ ಆಶ್ರಮವು ಸಾಕ್ಷಾತ ವೈಕುಂಠವೇ ಆಗಿದೆ. ಭೋಗಭೂಮಿ ಎಂದು ಕಳಂಕಿತವಾಗಿರುವ ಗೋವಾ ರಾಜ್ಯದಲ್ಲಿ ಇಷ್ಟೊಂದು ಸುಂದರವಾದ ಆಶ್ರಮವನ್ನು ನಿರ್ಮಿಸಿರುವ ಮಹಾಪುರುಷನಿಗೆ ನನ್ನ ನಮಸ್ಕಾರಗಳು. ಇಂತಹ ಮಹಾಪುರುಷನ ಪ್ರತಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅನೇಕ ಜನ್ಮಗಳನ್ನು ತಳೆಯಬೇಕಾದರೂ ಅದು ಕಡಿಮೆಯೇ ಆಗಿದೆ, ಎಂದು ಚಿತ್ರಕೂಟ (ಮಧ್ಯಪ್ರದೇಶ)ದಲ್ಲಿನ ಭಾಗವತ ಭಾಸ್ಕರ ಆಚಾರ್ಯ ಶ್ರೀ. ವಿಪಿನ ಕೃಷ್ಣಜೀ ಮಹಾರಾಜರು ಆಶೀರ್ವಚನ ನೀಡಿದರು. ಅಕ್ಟೊಬರ್ ೬ ರಂದು ಅವರು ಇಲ್ಲಿನ ಸನಾತನದ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರನ್ನು ಸನಾತನದ ಸಂತರಾದ ಪೂ. ಪೃಥ್ವಿರಾಜ ಹಜಾರೆಯವರು ಹಾರ ಹಾಕಿ ಶಾಲು, ಶ್ರೀಫಲ, ಉಡುಗೊರೆಯನ್ನು ನೀಡಿ ಸತ್ಕರಿಸಿದರು. ಈ ಸಮಯದಲ್ಲಿ `ಗೋವಾ ಮೆಡಿಕಲ್ ಕಾಲೇಜಿ’ನ ಕಿವಿ-ಮೂಗು-ಗಂಟಲು ತಜ್ಞರಾದ ಡಾ. ಮಾರ್ಕಂಡೇಯ ತಿವಾರಿ, `ಹೋಲಿ’ (ಹೆಲ್ಪಫುಲ್ ಆರ್ಗನೈಝಷನ್ ಫಾರ್ ಲೈಕ್ ಮೈಂಡೆಡ್ ಇಂಡಿಯನ್ಸ್) ಎಂಬ ಹಿಂದುತ್ವನಿಷ್ಠ ಸಂಘಟನೆಯ ಅಧ್ಯಕ್ಷರಾದ ಶ್ರೀ. ಕೆ. ಕೆ. ಚತುರ್ವೇದಿ, ವಿಶಾನ ಸಿಂಹ ರಾಜಪುರೋಹಿತ ಹಾಗೆಯೆ ಇತರ ಗಣ್ಯರು ಹಾಗೂ ಭಕ್ತವೃಂದವು ಉಪಸ್ಥಿತವಿತ್ತು.

ಈ ಸಮಯದಲ್ಲಿ ಮಹಾರಾಜರ ಆಶ್ರಮವನ್ನು ನಡೆಸುವ ರಾಷ್ಟ ಮತ್ತು ಹಿಂದೂ ಧರ್ಮದ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯದ ಮಾಹಿತಿಯನ್ನು ಪಡೆದರು. ಸನಾತನದ ಸಾಧಕರಾದ ಶ್ರೀ. ವಿಕ್ರಮ ಡೊಂಗರೆಯವರು ಆಶ್ರಮದಲ್ಲಿನ ಧರ್ಮಪ್ರಸಾರದ ಕಾರ್ಯದ ಮಾಹಿತಿಯನ್ನು ತಿಳಿಸಿಕೊಟ್ಟರು.

* ಈ ಸಮಯದಲ್ಲಿ ಮಹಾರಾಜರು ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತ ಹೀಗೆ ಹೇಳಿದರು,

ಆಚಾರ್ಯ ವಿಪಿನ ಕೃಷ್ಣಜಿ ಮಹಾರಾಜರು

೧. ಧರ್ಮರಕ್ಷಣೆ ಹಾಗೂ ಧರ್ಮಜಾಗೃತಿಯ ಕಾರ್ಯವನ್ನು ಮಾಡುವವರ ಮಾರ್ಗವು ಕಠಿಣವಿದೆ. ಅವರಿಗೆ ಹೆಜ್ಜೆಹೆಜ್ಜೆಗೂ ಸಂಘರ್ಷ ಮಾಡಬೇಕಾಗುತ್ತದೆ. ಹೀಗಿದ್ದರೂ ಇಂತಹವರ ಮೇಲೆಯೇ ಭಗವಂತನ ಕೃಪೆಯಾಗುತ್ತದೆ.

೨. ಆಶ್ರಮಕ್ಕೆ ಬಂದಿದ್ದುರಿಂದ ನನಗೆ ಬಹಳ ಪ್ರಸನ್ನತೆ ಅನಿಸಿತು ಹಾಗೂ ಶಾಂತಿಯ ಅನುಭವವಾಯಿತು.

೩. ಗೋವಾದಂತಹ ಭೂಮಿಯಲ್ಲಿ ಇಂತಹ ಅದ್ಭುತ ಆಶ್ರಮ ! ಇಲ್ಲಿ ಸ್ವಯಂಭೂ ‘ಓಂ’ ಚಿನ್ಹೆ ಮೂಡಿರುವುದು ಅಲೌಕಿಕವಾಗಿದೆ.

೪. ಈ ಆಶ್ರಮವು ಸಾಯುಜ್ಯ ಮುಕ್ತಿಯ ಕೇಂದ್ರವೇ ಆಗಿದೆ. (ಸಾಯುಜ್ಯ ಮುಕ್ತಿ ಅಂದರೆ ಭಗವಂತನೊಂದಿಗೆ ಏಕರೂಪವಾಗಿ ಮುಕ್ತಿ ಹೊಂದುವುದು ಅಥವಾ ಭಕ್ತನು ತಾನು ಉಪಾಸನೆ ಮಾಡುತ್ತಿರುವ ದೇವತೆಯಲ್ಲಿ ವಿಲೀನನಾಗುತ್ತಾನೆ.)

ಆಶ್ರಮಕ್ಕೆ ಭೇಟಿಯಿಂದ ನಾನು ಗೋವಾಗೆ ಬಂದಿದ್ದು ಸಾರ್ಥಕವಾಯಿತು !

ಆಶ್ರಮ ದರ್ಶನ : ಸನಾತನ ಪ್ರಭಾತದ ಕಾರ್ಯಾಲಯವನ್ನು ನೋಡುತ್ತಿರುವ ಶ್ರೀ. ಕೆ. ಕೆ. ಚತುರ್ವೇದಿ, ವಿಶಾನ ಸಿಂಹ ರಾಜಪುರೋಹಿತ, ಡಾ. ಮಾರ್ಕಂಡೇಯ ತಿವಾರಿ ಹಾಗೂ ಆಚಾರ್ಯ ವಿಪಿನ ಕೃಷ್ಣಜಿ ಮಹಾರಾಜ

ನಾನು ಗೋವಾಗೆ ಕಥಾವಾಚನದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾನು ನನ್ನನ್ನು ಸನಾತನದ ಆಶ್ರಮಕ್ಕೆ ಕರೆತಂದಿರುವುದಕ್ಕಾಗಿ ಶ್ರೀ. ಚತುರ್ವೇದಿಯವರಿಗೆ ಆಭಾರಿಯಾಗಿದ್ದೇನೆ. ಇಲ್ಲಿ ಬಂದಿರುವುದರಿಂದ ನಾನು ಗೋವಾಗೆ ಬಂದಿರುವುದು ಸಾರ್ಥಕವಾಯಿತು.

ಆಶ್ರಮದಲ್ಲಿರುವ ತಪ್ಪುಗಳ ಫಲಕವನ್ನು ಪ್ರಶಂಸಿಸಿದರು !

ಈ ಸಂದರ್ಭದಲ್ಲಿ ಮಹಾರಾಜರು ಮಾತನಾಡುತ್ತ, ಆಶ್ರಮದಲ್ಲಿ ಸಾಧಕರು ತಮ್ಮಿಂದ ಆಗಿರುವ ತಪ್ಪುಗಳನ್ನು ಫಲಕದ ಮೇಲೆ ಬರೆಯುತ್ತಾರೆ. ಇದು ಸನಾತನ ಧರ್ಮದ ವಿಶೇಷತ್ವವಾಗಿದೆ. ಇದರಿಂದಲೇ ಸನಾತನ ಧರ್ಮದ ಆರಂಭವಾಗುತ್ತದೆ ಹಾಗೂ ಇದರಿಂದಲೇ ಅದು ಪೂರ್ಣವಾಗುತ್ತದೆ. ತಮ್ಮಿಂದ ಆಗಿರುವ ಅಪರಾಧಗಳನ್ನು ಸ್ವೀಕರಿಸುವುದೇ ಸನಾತನ ಧರ್ಮವಾಗಿದೆ. ತನ್ನಿಂದ ಆಗಿರುವ ತಪ್ಪುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲದಿರುವವನು ಸನಾತನವನ್ನು (ಸನಾತನ ಧರ್ಮವನ್ನು) ಸ್ವೀಕರಿಸಲು ಸಾಧ್ಯವಿಲ್ಲ, ಎಂದು ಹೇಳಿದರು.