ಬಂಗಾಳದ ಹಿಂದೂಗಳಿಂದ ಬಾಂಗ್ಲಾದೇಶಿ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಚಾಲನೆ !

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಳಿಂದಾಗಿ ಬಂಗಾಳದ ಹಿಂದೂಗಳಿಂದ ಸೇಡು

ಕೋಲಕಾತಾ (ಬಂಗಾಳ) – ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವಿಶೇಷವಾಗಿ ಹಿಂದೂಗಳ ಮೇಲೆ ಇಸ್ಲಾಮಿಕ್ ಕಟ್ಟರವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯ ಮತ್ತು ದಾಳಿಗಳ ವಿರುದ್ಧ ಬಂಗಾಳದ ಹಿಂದೂಗಳು ಒಗ್ಗೂಡುತ್ತಿದ್ದಾರೆ. ಬಂಗಾಳದ ಹಿಂದೂಗಳು ಸ್ಥಳೀಯ ಮಟ್ಟದಲ್ಲಿ ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರಿಗೆ ಪಾಠವನ್ನು ಕಲಿಸುತ್ತಿದ್ದಾರೆ; ಹಾಗೆಯೇ ಅಧಿಕೃತ ಮಾಧ್ಯಮಗಳ ಮೂಲಕ ಬಾಂಗ್ಲಾದೇಶದಿಂದ ಬರುವ ಸಾಮಗ್ರಿಗಳನ್ನು ಬಹಿಷ್ಕರಿಸಲಾಗುತ್ತಿದೆ. ಬಂಗಾಳದ ಹಿಂದೂಗಳಿಂದ #BoycottBangladesh ಎಂಬ ಅಭಿಯಾನ ಪ್ರಾರಂಭವಾಗಿದೆ.

1. ‘ಬಾಂಗ್ಲಾದೇಶ ಔಟ್’ ಅಭಿಯಾನದ ಉದಯ ಈ ವರ್ಷ ಆಗಸ್ಟ್ 5 ರಂದು ಪ್ರಾರಂಭವಾಯಿತು. ಬಾಂಗ್ಲಾದೇಶದಲ್ಲಿನ ಹಿಂದೂ ಸಮಾಜ, ಅವರ ದೇವಸ್ಥಾನಗಳು ಮತ್ತು ವ್ಯವಹಾರಗಳ ಮೇಲೆ ದಾಳಿಗಳು ಪ್ರಾರಂಭವಾದಾಗಿನಿಂದ, ಬಂಗಾಳದ ಹಿಂದೂಗಳು ನೆರೆಯ ದೇಶದಲ್ಲಿ ತಯಾರಾಗುವ ವಸ್ತುಗಳು ಮತ್ತು ಸೇವೆಗಳ ಮೇಲೆ ಆರ್ಥಿಕ ಬಹಿಷ್ಕಾರವನ್ನು ಹೇರಿದರು.

2. ಈ ಅಭಿಯಾನದ ಆಯೋಜಕರಾದ ಮಯುಖ ಪಾಲ ಇವರು ಮಾತನಾಡಿ, ಪ್ರಾರಂಭದಲ್ಲಿ ಈ ಅಭಿಯಾನ ಅನೌಪಚಾರಿಕವಾಗಿತ್ತು. ಜನರು ಸ್ವಯಂಪ್ರೇರಿತರಾಗಿ ಭಾಗವಹಿಸತೊಡಗಿದರು. ನಿಧಿಯನ್ನು ಸಂಗ್ರಹಿಸಿದರು ಮತ್ತು ಕೇವಲ ಒಂದು ತಿಂಗಳಿನಲ್ಲಿಯೇ ಈ ಅಭಿಯಾನ 12 ಜಿಲ್ಲೆಗಳಿಗೆ ಹರಡಿತು.

3. ಮಯುಖ ಪಾಲ ಮತ್ತು ಅವರ ಸಹಕಾರಿಗಳು ಬಾಂಗ್ಲಾದೇಶ ವಸ್ತುಗಳನ್ನು ಬಹಿಷ್ಕರಿಸುವ ಬಗ್ಗೆ ಭಿತ್ತಿಪತ್ರಗಳನ್ನು ಮುದ್ರಿಸಿ ಸಂಪೂರ್ಣ ರಾಜ್ಯದ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾರುಕಟ್ಟೆ ಸ್ಥಳಗಳು ಹೀಗೆ ಜನನಿಬಿಡ ಪ್ರದೇಶಗಳನ್ನು ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಅವರು 2 ಸಾವಿರ 500ಕ್ಕಿಂತ ಹೆಚ್ಚು ಕರಪತ್ರಗಳನ್ನು ವಿತರಿಸಿದರು ಮತ್ತು 1 ಲಕ್ಷಕ್ಕೂ ಹೆಚ್ಚು ಹಿಂದೂಗಳಿಗೆ ಈ ವಿಷಯದ ಮಾಹಿತಿಯನ್ನು ನೀಡಿದರು. ಈ ಅಭಿಯಾನದಲ್ಲಿನ ಸ್ವಯಂಸೇವಕರು ಜನರೊಂದಿಗೆ ಸಂಪರ್ಕ ಸಾಧಿಸಿದರು, ಅವರಿಗೆ ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಮತ್ತು ಆ ದೇಶದ ಉತ್ಪಾದನೆಯ ಮೇಲೆ ಬಹಿಷ್ಕರಿಸುವಂತೆ ಪ್ರತಿಜ್ಞೆ ಮಾಡಲು ಪ್ರೇರೆಪಿಸಿದರು. `ಬಾಂಗ್ಲಾದೇಶಿ ಬಟ್ಟೆ ಮತ್ತು ಇತರ ವಸ್ತುಗಳನ್ನು ಬಳಸುವುದಿಲ್ಲ’ ಎಂದು ಅನೇಕರು ಪ್ರತಿಜ್ಞೆ ಮಾಡಿದರು.

4. ಬಾಂಗ್ಲಾದೇಶ ಸರಕಾರವು ದುರ್ಗಾ ಪೂಜೆಯ ಸಮಯದಲ್ಲಿ, ಭಾರತದಲ್ಲಿ ಅಲ್ಲಿನ ಪದ್ಮಾ ನದಿಯಲ್ಲಿನ ಹಿಲ್ಸಾ ಮೀನುಗಳನ್ನು ಕಳಿಸುವ ಸಂಪ್ರದಾಯವನ್ನು ನಿಲ್ಲಿಸುತ್ತಿರುವ ಸುದ್ದಿ ಹರಡಿತ್ತು; ಆದರೆ ತದನಂತರ ಈ ನಿರ್ಣಯವನ್ನು ಹಿಂದಕ್ಕೆ ಪಡೆಯಲಾಗಿತ್ತು. ಹೀಗಿರುವಾಗಲೂ ಬಂಗಾಳಿ ಹಿಂದೂಗಳು ಅವರಿಗೆ ಮೀನುಗಳಲ್ಲ, ಬದಲಾಗಿ ಹಿಂದೂಗಳ ಜೀವನ ಎಲ್ಲಕ್ಕಿಂತ ಹೆಚ್ಚು ಮಹತ್ವದ್ದಾಗಿದೆಯೆಂದು ಸ್ಪಷ್ಟಪಡಿಸಿದರು. ಬಂಗಾಳಿ ಹಿಂದೂಗಳು `ಬಾಂಗ್ಲಾದೇಶದ `ಹಿಲ್ಸಾ’ ಮೀನುಗಳನ್ನು ತಿನ್ನುವುದಿಲ್ಲ’ ಎನ್ನುವ ಪ್ರತಿಜ್ಞೆಯನ್ನೂ ಮಾಡಿದರು.

5. ಕೆಲವು ಕಿರಿಯ ವೈದ್ಯರು ಮತ್ತು ವಿದ್ಯಾರ್ಥಿಗಳು ಕೂಡ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ವೈದ್ಯರೊಬ್ಬರು ಮಾತನಾಡಿ, “ಬಾಂಗ್ಲಾದೇಶದಲ್ಲಿನ ಹಿಂದೂಗಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಇದರಿಂದ ನಾವು ಬಾಂಗ್ಲಾದೇಶದ ಮೇಲೆ ಬಹಿಷ್ಕಾರ ಹಾಕುತ್ತಿದ್ದೇವೆ’ ಎಂದು ಹೇಳಿದರು.

ಬಂಗಾಳದ ಹಿಂದೂಗಳ 4 ಬೇಡಿಕೆಗಳು

ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರಾದ ಆರ್. ಬಂಗೋಪಾಧ್ಯಾಯ ಇವರು ಬಂಗಾಲಿ ಹಿಂದೂಗಳ 4 ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದಾರೆ. ಇದರಲ್ಲಿ ಬಾಂಗ್ಲಾದೇಶಿ ನಾಗರಿಕರಿಗೆ ವೀಸಾ ತಕ್ಷಣವೇ ಸ್ಥಗಿತಗೊಳಿಸಬೇಕು, ಭಾರತದಲ್ಲಿದ್ದು ಭಾರತವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಬಾಂಗ್ಲಾದೇಶದ ನಾಗರಿಕರನ್ನು ದೇಶದಿಂದ ಹೊರಹಾಕುವುದು, ಹಿಂದೂಗಳ ವಿರುದ್ಧ ದ್ವೇಷವನ್ನು ಹರಡುವ ಕಟ್ಟರವಾದಿ ಇಸ್ಲಾಮಿಕ್ ಸಂಘಟನೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದು ಮತ್ತು ಬಾಂಗ್ಲಾದೇಶದಲ್ಲಿ ಉತ್ಪಾದಿಸುವ ಉತ್ಪಾದನೆಗಳನ್ನು ಬಹಿಷ್ಕರಿಸುವುದು, ಇವು ಪ್ರಮುಖ ಬೇಡಿಕೆಗಳಾಗಿವೆ.
ಬಂಗೋಪಾಧ್ಯಾಯ ಮಾತನಾಡಿ, ಮೊದಲ ಮೂರು ಬೇಡಿಕೆಗಳು ಭಾರತ ಸರಕಾರಕ್ಕೆ ಮತ್ತು ನಾಲ್ಕನೆಯ ಬೇಡಿಕೆ ಹಿಂದೂ ಸಮಾಜಕ್ಕೆ ಆಗಿದೆ ಎಂದು ಹೇಳಿದರು.

ಭಿತ್ತಿಪತ್ರದಲ್ಲಿ ಏನು ಬರೆಯಲಾಗಿದೆ ?

ಈ ಭಿತ್ತಿಪತ್ರದಲ್ಲಿ ‘ಹಿಂದೂಗಳ ರಕ್ತ ಮೆತ್ತಿರುವ ಬಾಂಗ್ಲಾದೇಶಿ ಬಟ್ಟೆಗಳನ್ನು ಬಹಿಷ್ಕರಿಸಿರಿ’ ಎಂದು ಕರೆ ನೀಡಲಾಗಿದೆ. ಇದರಲ್ಲಿ ಝಾರಾ, ಎಚ್.ಅಂಡ್ ಎಂ. ಜಿ.ಎ.ಪಿ. ಗಳಂತಹ ಬಾಂಗ್ಲಾದೇಶಿ ಕಂಪನಿಗಳು ಉತ್ಪಾದಿಸುತ್ತಿದ್ದ ಸಾಮಗ್ರಿಗಳು ಸೇರಿವೆ. ಬಾಂಗ್ಲಾದೇಶದಿಂದ ಭಾರತದಲ್ಲಿ ಆಮದು ಮಾಡಲಾಗುವ ಬಟ್ಟೆಗಳ ಪಟ್ಟಿಯೂ ಇದೆ. ಅದರಲ್ಲಿ ಸೀರೆ, ಚೂಡಿದಾರ, ಟೀ-ಶರ್ಟ, ಶರ್ಟ, ಜೀನ್ಸ, ಸ್ವೆಟರ ಮತ್ತು ಲುಂಗಿಗಳು ಒಳಗೊಂಡಿದೆ.

ಈ ಅಭಿಯಾನದ ಮೂಲಕ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಹತ್ತಿಕ್ಕುವ ಮತ್ತು ಮರೆಮಾಚುವ ಪ್ರಯತ್ನಗಳು ಸಾಮಾಜಿಕ ಮಾಧ್ಯಮದಿಂದ ಹರಡುವ ಭ್ರಮೆಗೊಳಿಸುವ ಪ್ರಚಾರದ ಮೂಲಕ ನಡೆಯುತ್ತಿವೆ. ಇದರಿಂದ ಬಂಗಾಳಿ ಹಿಂದೂ ಸಮಾಜ ಜಾಗರೂಕವಾಗಿರುವಂತೆ ಕರೆ ನೀಡಲಾಗುತ್ತಿದೆ.

ಅನೇಕ ವಿಡಿಯೊಗಳಲ್ಲಿ, ಬಂಗಾಳದ ಹಿಂದೂಗಳು ಬಾಂಗ್ಲಾದೇಶದ ಬಟ್ಟೆಗಳನ್ನು ಬಹಿಷ್ಕರಿಸುತ್ತಿರುವುದು ಕಂಡು ಬರುತ್ತಿದೆ. ಜನರು ಸ್ವಯಂಸ್ಫೂರ್ತಿಯಿಂದ ಇದಕ್ಕೆ ಪ್ರತಿಸ್ಪಂದಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶಾದ್ಯಂತವಿರುವ ಹಿಂದೂಗಳು ಬಂಗಾಳದ ಹಿಂದೂಗಳಿಂದ ಕಲಿಯಬೇಕು !