ಶ್ರೀ ಕ್ಷೇತ್ರ ಬೆಲಗೂರಿನ ಸ್ವಾಮಿ ಬಿಂದೂ ಮಾಧವ ಶರ್ಮಾ ಇವರ ದೇಹತ್ಯಾಗ

ಸ್ವಾಮೀಜಿಯವರು ಹನುಮಂತನ ಭಕ್ತರಾಗಿದ್ದು ಅವರಿಗೆ ಅಷ್ಟಸಿದ್ಧಿಗಳು ಪ್ರಾಪ್ತವಾಗಿವೆ. ಸ್ವಾಮೀಜಿಯವರಿಗೆ ನಾಥ ಸಂಪ್ರದಾಯದ ಮೂರು ಸಾವಿರ ವರ್ಷಗಳ ಪರಂಪರೆಯಿದೆ. ಸ್ವಾಮೀಜಿಯವರಿಗೆ ಸೂಕ್ಷ್ಮದ ವಿಷಯದಲ್ಲಿ ಬಹಳ ಜ್ಞಾನವಿದೆ. ಸಾಧಕರ ಭೇಟಿಯ ಸಮಯದಲ್ಲಿ ಅವರು ಸೂಕ್ಷ್ಮ ಜ್ಞಾನದ ಮೂಲಕ ಪರಾತ್ಪರ ಗುರು ಡಾ. ಆಠವಲೆ, ಹಿಂದೂ ರಾಷ್ಟ್ರ ಮತ್ತು ಸನಾತನ ಸಂಸ್ಥೆ ಇವುಗಳ ಬಗ್ಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಲು ಹೋದ ಹಿಂದೂ ಮಕ್ಕಲ್ ಕಚ್ಚಿಯ ಅರ್ಜುನ ಸಂಪತ್ ಅವರನ್ನು ದ್ರಮುಕ ಹಾಗೂ ವಿ.ಸಿ.ಕೆ. ಕಾರ್ಯಕರ್ತರಿಂದ ಮುತ್ತಿಗೆ !

ಹಿಂದೂ ಮಕ್ಕಲ್ ಕಚ್ಛಿಯ ಅಧ್ಯಕ್ಷ ಅರ್ಜುನ ಸಂಪತ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯ ರಾಜ ಅಣ್ಣಾಮಲೈ ಪುರಂನಲ್ಲಿರುವ ಸ್ಮಾರಕಕ್ಕೆ ಹೋಗಿದ್ದರು. ಆ ಸಮಯದಲ್ಲಿ ದ್ರಮುಕ ಹಾಗೂ ವಿದುಥಲಾಯಿ ಚಿರುಥೈಗಲ ಕತ್ಛಿ (ವಿ.ಸಿ.ಕೆ.) ಈ ಪಕ್ಷದ ಕಾರ್ಯಕರ್ತರು ಅವರನ್ನು ಒಳ ಪ್ರವೇಶಿಸದಂತೆ ತಡೆದರು.

ದೆಹಲಿಯ ಒಂದು ಕಾಲುವೆಯಲ್ಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರ ಪತ್ತೆ

ಸ್ಥಳೀಯ ದ್ವಾರಕಾ ಸೆಕ್ಟರ್ – ೨೩ ರ ಪೋಚನಪುರ ಗ್ರಾಮದ ಒಂದು ಕಾಲುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿಸಿದ್ದಕ್ಕಾಗಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ನಟ ಸೈಫ್ ಅಲಿ ಖಾನ್‌ನ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ನಟ ಸೈಫ್ ಅಲಿ ಖಾನ್ ‘ಆದಿಪುರುಷ’ ಚಲನಚಿತ್ರದ ರಾವಣನ ಪಾತ್ರದ ಬಗ್ಗೆ ನೀಡಿದ ಅಕ್ಷೆಪಾರ್ಹ ಹೇಳಿಕೆಯ ವಿರುದ್ಧ ಇಲ್ಲಿ ದೂರು ದಾಖಲಿಸಲಾಗಿದೆ. ವಿಶ್ವ ಹಿಂದೂ ಮಹಾಸಂಘದ ದೆಹಲಿ ಪ್ರದೇಶಾಧ್ಯಕ್ಷರಾದ ರಾಜೇಶ ತೋಮರ ಇವರು ನೀಡಿದ ದೂರಿನ ಮೇರೆಗೆ ಅಪರಾದ ದಾಖಲಾಗಿದೆ.

ಸಂಸತ್ತಿನ ಹೊಸ ಕಟ್ಟಡ ನಿರ್ಮಾಣವನ್ನು ಸರ್ವೋಚ್ಚ ನ್ಯಾಯಾಲಯವು ಮುಂದೂಡಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ೧೦ ರಂದು ಉದ್ಘಾಟಿಸಲಿರುವ ಹೊಸ ಸಂಸತ್ ಭವನದ ನಿರ್ಮಾಣವನ್ನು ಸರ್ವೋಚ್ಚ ನ್ಯಾಯಾಲಯವು ಮುಂದೂಡಿದೆ; ಆದರೆ ಭೂಮಿ ಪೂಜೆ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಯೋಜನೆಯನ್ನು ‘ಸೆಂಟ್ರಲ್ ವಿಸ್ತಾ’ ಎಂದು ಕರೆಯಲಾಗುತ್ತದೆ.

ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಅಪರಿಚಿತ ಕಾಯಿಲೆಯಿಂದ ಒಬ್ಬರು ಸಾವನ್ನಪ್ಪಿ, ೨೯೨ ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ

ಇಡೀ ಜಗತ್ತು ಕೊರೋನಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಅಪರಿಚಿತ ಕಾಯಿಲೆಯಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ೨೯೨ ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ೧೪೦ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಹೋಗಲು ಅವಕಾಶ ನೀಡಲಾಗಿದ್ದು, ಇತರರ ಸ್ಥಿತಿ ಸ್ಥಿರವಾಗಿದೆ.

ಕೇರಳದ ಜೈವಿಕ ತಂತ್ರಜ್ಞಾನ ಸಂಸ್ಥೆಯ ಪರಿಸರಕ್ಕೆ ಪೂ. ಗೋಳವಲಕರ ಗುರೂಜಿಯ ಹೆಸರಿಡುವ ನಿರ್ಧಾರ

ರಾಜ್ಯದ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಸ್ಟಿಟ್ಯೂಟ್‌ನ ಪರಿಸರಕ್ಕೆ ಎರಡನೇ ಸರಸಂಘಚಾಲಕ ಪೂ. ಗೋಳವಲಕರ ಗುರೂಜಿಯವರ ಹೆಸರಿಡಲು ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯದ ಕಮ್ಯುನಿಸ್ಟ್ ಸರಕಾರ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರೋಧಿಸಿವೆ.

ಕನ್ನಡ, ತೆಲುಗು, ಮರಾಠಿ, ಗುಜರಾತಿ ಹಾಗೂ ಆಂಗ್ಲ ಭಾಷೆಯಲ್ಲಿ ‘ಸನಾತನ ಪಂಚಾಂಗ 2021’ನ ಆಂಡ್ರಾಯ್ಡ್ ಆಪ್‌ನ ಉದ್ಘಾಟನೆ !

‘ಹಿಂದೂ ಪಂಚಾಂಗ’ ಇದು ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಅಡಿಪಾಯವಾಗಿದೆ. ನಾವು ಆಂಗ್ಲರನ್ನು ಹಾಗೂ ಮೊಘಲರನ್ನು ಈ ದೇಶದಿಂದ ಹೊರದಬ್ಬಿದೆವು; ಆದರೆ ತದನಂತರ ಬಂದ ರಾಜಕಾರಣಿಗಳು ಮಹಾನ ಹಿಂದೂ ಕಾಲಗಣನೆಯನ್ನು ನಿರ್ಲಕ್ಷಿಸಿ ಆಂಗ್ಲ ಕಾಲಗಣನೆಯನ್ನು ಸ್ವೀಕರಿಸಿದರು. ಇದರಿಂದ ಒಂದು ರೀತಿಯಲ್ಲಿ ಪಾಶ್ಚಾತ್ಯರ ಸಾಂಸ್ಕೃತಿಕ ಗುಲಾಮಗಿರಿಯನ್ನು ಸ್ವೀಕಾರ ಮಾಡಿ ದೇಶಕ್ಕೆ ದೊಡ್ಡ ಹಾನಿಯನ್ನುಂಟು ಮಾಡಿದರು.

ಬಿಹಾರದ ಅನೇಕ ಸ್ಥಳಗಳಲ್ಲಿ ‘ಬಾಬರಿಯನ್ನು ಮರೆಯಬೇಡಿ’ ಎಂದು ಪಿ.ಎಫ್.ಐ. ಭಿತ್ತಿಪತ್ರಗಳನ್ನು ಹಾಕಿದೆ !

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಬಿಹಾರದ ಕಟಹರಿ, ಪೂರ್ಣಿಯಾ ಮತ್ತು ದರಭಾಂಗಾದ ಕೆಲವು ಕಡೆಗಳಲ್ಲಿ ಬಾಬ್ರಿ ನೆಲಸಮಗೊಳಿಸಿದ ದಿನನಿಮಿತ್ತ ಅಕ್ಷೇಪಾರ್ಹ ಭಿತ್ತಿಪತ್ರಗಳನ್ನು ಹಾಕಿತ್ತು. ಅದರಲ್ಲಿ ‘ಡಿಸೆಂಬರ್ ೬ ಅನ್ನು ಮರೆಯಬೇಡಿ.’ ಇದರಲ್ಲಿ ಬಾಬ್ರಿಯ ಮೂರು ಗುಮ್ಮಟಗಳನ್ನು ತೋರಿಸಲಾಗಿತ್ತು. ಇದರ ನಂತರ ಬಿಹಾರ ಪೊಲೀಸರು ರಾಜ್ಯದಲ್ಲಿ ಎಚ್ಚರಿಕೆ ನೀಡಿದ್ದರು.

‘ಕಲ್ಪವೃಕ್ಷ’ ಸಂಸ್ಥೆಯು ಎಂ.ಎಫ್. ಹುಸೇನ್ ಚಿತ್ರಗಳ ಮಾರಾಟ ನಿಲ್ಲಿಸಿದೆ !

ಸ್ಥಳೀಯ ‘ಕಲ್ಪವೃಕ್ಷ’ ಸಂಸ್ಥೆಯು ತನ್ನ ಜಾಲತಾಣದಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಚಿತ್ರಗಳನ್ನು ಮಾರಾಟಕ್ಕೆ ಇಟ್ಟಿತ್ತು. ಧರ್ಮಪ್ರೇಮಿಗಳು ಇದರ ವಿರುದ್ಧ ಪ್ರತಿಭಟಿಸಿದ ನಂತರ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಪ್ರಬೋಧನೆ ಮಾಡುವ ಪತ್ರವನ್ನು ಕಳುಹಿಸಿದ ನಂತರವೂ ಈ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ