‘ರಾವಣ ಖಳನಾಯಕನಲ್ಲ, ಅವನಲ್ಲಿಯೂ ಮನುಷ್ಯತ್ವ ಇತ್ತು !’(ಅಂತೆ)

‘ಆದಿಪುರುಷ್’ ಚಲನಚಿತ್ರದಲ್ಲಿ ರಾವಣನ ಪಾತ್ರಕ್ಕೆ ನಟ ಸೈಫ್ ಅಲಿ ಖಾನ್ ಆಯ್ಕೆ !

  • ರಾವಣ ಖಳನಾಯಕನಾಗಿ ಮತ್ತು ರಾಕ್ಷಸನಾಗಿದ್ದ ಎಂದು ಜಗತ್ತಿಗೆ ತಿಳಿದಿರುವಾಗ ಅವನನ್ನು ಈ ರೀತಿ ಹಾಡಿಹೋಗಳಲು ಪ್ರಯತ್ನಿಸುತ್ತಿದ್ದರೆ, ಹಿಂದೂಗಳು ಇದರ ವಿರುದ್ಧ ಕಾನೂನುಬದ್ಧ ರೀತಿಯಲ್ಲಿ ಧ್ವನಿ ಎತ್ತಬೇಕು ಮತ್ತು ನಿರ್ಮಾಪಕರನ್ನು ಅದನ್ನು ರದ್ದುಗೊಳಿಸುವಂತೆ ಒತ್ತಾಯಿಸಬೇಕು !

  • ನಾಳೆ ಸೈಫ್ ಅಲಿ ಖಾನ್ ಘಜ್ನಿ, ಮೊಹಮ್ಮದ್ ಘೋರಿ, ಅಕ್ಬರ್, ಔರಂಗಜೇಬ್, ತೈಮುರಲಂಗ್, ಚೆಂಗಿಝ ಖಾನ್ ಮುಂತಾದವರ ಖಳನಾಯಕರಲ್ಲ, ಅವರು ಒಳ್ಳೆಯ ಮನುಷ್ಯರಾಗಿದ್ದರು ಎಂದು ನಿರ್ಧರಿಸಲು ಪ್ರಯತ್ನಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಮುಂಬಯಿ – ಇಲ್ಲಿಯವರೆಗೆ ನಾವು ರಾವಣನನ್ನು ಖಳನಾಯಕನ ಪಾತ್ರದಲ್ಲಿ ಮಾತ್ರ ನೋಡಿದ್ದೇವೆ; ಆದರೆ ಅವನು ಖಳನಾಯಕನಾಗಿರಲಿಲ್ಲ. ಅವನಲ್ಲಿಯೂ ಮನುಷ್ಯತ್ವ ಇತ್ತು. ರಾವಣನ ಮಾನವೀಯತೆ ಹೇಗಿತ್ತು ? ‘ಆದಿಪುರುಷ್’ ಚಿತ್ರದಲ್ಲಿ ಇದನ್ನು ತೋರಿಸಲಾಗುವುದು ಎಂದು ನಟ ಸೈಫ್ ಅಲಿ ಖಾನ್ ಆಂಗ್ಲ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸೈಫ್ ಅಲಿ ಖಾನ್ ರಾವಣನನ್ನು ಒಳ್ಳೆಯವನ್ನಾಗಿ ತೋರಿಸುವ ಪ್ರಯತ್ನದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ. ‘ಆದಿಪುರುಷ್’ ಚಲನಚಿತ್ರ ೨೦೨೨ ರಲ್ಲಿ ಬಿಡುಗಡೆಯಾಗಲಿದೆ. ಇದು ರಾಮಾಯಣವನ್ನು ಆಧರಿಸಿದೆ. ಇದರಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ.

ಸೈಫ್ ಅಲಿ ಖಾನ್ ತಮ್ಮ ಮಾತನ್ನು ಮುಂದುವರೆಸಿದ್ದು, ರಾವಣನು ರಾಮನೊಂದಿಗೆ ಹೋರಾಡಿದನೆಂಬುದು ಎಲ್ಲರಿಗೂ ತಿಳಿದಿದೆ; ಆದರೆ ಅವನಿಗೂ ಒಂದು ಹಿನ್ನೆಲೆ ಇತ್ತು. ಶ್ರೀರಾಮನ ಸಹೋದರ ಲಕ್ಷ್ಮಣನು ಶೂರ್ಪನಖಿಯ ಮೂಗು ಕತ್ತರಿಸಿದ್ದ. ಅದರ ನಂತರ, ಈ ಯುದ್ಧವು ಆಗುವುದೇ ಇತ್ತು. ಈ ಚಲನಚಿತ್ರದಲ್ಲಿ ರಾವಣನ ಆಲೋಚನೆ ಹೇಗಿತ್ತು, ಎಂಬುದನ್ನು ತೋರಿಸಲಾಗುವುದು.