ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪಂಜಾಬ್ ಮತ್ತು ಹರಿಯಾಣದ ರೈತರ ಆಂದೋಲನಕ್ಕೆ ಖಲಿಸ್ತಾನಿಗಳು ಸೇರಿದ್ದಾರೆ ಎಂಬುದು ಬೆಳಕಿಗೆ ಬರುತ್ತಿದೆ. ‘ಇಂದಿರಾ ಗಾಂಧಿಯನ್ನು ಕೊಂದಂತೆ ಮೋದಿಯನ್ನು ಕೊಲ್ಲುತ್ತೇವೆ’ ಎಂದು ಖಲಿಸ್ತಾನಿ ಕಾರ್ಯಕರ್ತನೊಬ್ಬ ಕ್ಯಾಮೆರಾ ಮುಂದೆ ಸುದ್ದಿ ವರದಿಗಾರನಿಗೆ ಹೇಳಿದ್ದರು. ಈಗ ಯೋಗರಾಜ ಸಿಂಗ್ ಅವರ ಹೇಳಿಕೆಯನ್ನು ನೋಡಿದರೆ, ಕೇಂದ್ರ ಸರಕಾರವು ಅಂತಹ ಜನರನ್ನು ಹುಡುಕಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ದೇಶದ್ರೋಹಿ ಖಲಿಸ್ತಾನಿ ಚಳವಳಿಯನ್ನು ಹತ್ತಿಕ್ಕಬೇಕು !
ನವ ದೆಹಲಿ – ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ) ಇಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಸೇರಿಕೊಂಡು ‘ಹಿಂದೂಗಳು ದ್ರೋಹಿಗಳಾಗಿದ್ದಾರೆ. ಅವರು ೧೦೦ ವರ್ಷಗಳ ಕಾಲ ಮೊಘಲರ ಗುಲಾಮರಾಗಿದ್ದರು’ ಎಂದು ಹೇಳಿದರು. ಅವರು ಮಹಿಳೆಯರ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ಸಹ ನೀಡಿದರು. ಇದರಿಂದ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಲಾಗುತ್ತಿದೆ. ಇದಕ್ಕಾಗಿ ಟ್ವಿಟರ್‌ನಲ್ಲಿಯೂ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಟ್ರೆಂಡ್ ಮಾಡಲಾಗಿದೆ. ರೈತರ ಆಂದೋಲನವನ್ನು ಬೆಂಬಲಿಸಲು ಯೋಗರಾಜ ಸಿಂಗ್ ಇಲ್ಲಿಗೆ ಹೋಗಿದ್ದರು.
Yograj singh abusing Hindus and calling all Hindu women prostitute is not at all acceptable. He deserves to be in jail.
Now you know this isn’t any farmers, these are Pakistani Backed Khalistanis dividing Hindus & Sikhs#ArrestYograjSingh @HMOIndia https://t.co/KKnuCQTmGe
— Arun Pudur ( अरूण् पुदुर् ) (@arunpudur) December 4, 2020