ಬಾಂಗ್ಲಾದೇಶಿ ನುಸುಳುಕೋರರನ್ನು ಹೆಕ್ಕಿ ಹೆಕ್ಕಿ ಹೊರಗಟ್ಟಲಾಗುವುದು ! – ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಜಾರ್ಖಂಡ್‌ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸಲಾಗುವುದು !

ರಾಂಚಿ (ಜಾರ್ಖಂಡ್) – ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರಕಾರವು ನುಸುಳುಕೋರರ ಪರವಾಗಿದೆ. ಈ ಚುನಾವಣೆ ಕೇವಲ ಯಾರನ್ನಾದರೂ ಮುಖ್ಯಮಂತ್ರಿ ಮಾಡಲು ಅಥವಾ ಅಧಿಕಾರ ಹಿಡಿಯಲು ಅಲ್ಲ, ಬದಲಾಗಿ ಝಾರ್ಖಂಡ್ ಉಳಿಸುವುದಕ್ಕಾಗಿ ಇದೆ. ಬಾಂಗ್ಲಾದೇಶದ ನುಸುಳುಕೋರರಿಂದ ಈ ಪ್ರದೇಶದ ಜನಸಂಖ್ಯೆ(ಡೆಮೊಗ್ರಾಫಿ) ಶೀಘ್ರಗತಿಯಲ್ಲಿ ಬದಲಾಗುತ್ತಿದೆ. ಬಾಂಗ್ಲಾದೇಶಿ ನುಸುಳುಕೋರರನ್ನು ಹೆಕ್ಕಿ ಹೊರಗೆ ಅಟ್ಟಲಾಗುವುದು. ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೆ ತರಲು ಭಾಜಪ ಕಟಿಬದ್ಧವಾಗಿದೆ, ಎಂದು ಭಾಜಪ ಕೇಂದ್ರ ಸಚಿವ ಮತ್ತು ಜಾರ್ಖಂಡ್ ರಾಜ್ಯ ಉಸ್ತುವಾರಿ (ಮುಖಂಡ) ಶಿವರಾಜ್ ಸಿಂಗ್ ಚೌಹಾಣ್ ಅವರು ಅಕ್ಟೋಬರ್ 7 ರಂದು ಭರವಸೆ ನೀಡಿದರು.

ಕೇಂದ್ರ ಸಚಿವ ಚೌಹಾಣ್ ಮಾತು ಮುಂದುವರೆಸಿ,

1. ಸಂಥಾಲ್ ಪ್ರದೇಶದ ಬುಡಕಟ್ಟು ಜನಸಂಖ್ಯೆಯು ಈಗ ಶೇ.28 ಕ್ಕಿಂತ ಕಡಿಮೆಯಾಗಿದೆ.

2. ನಾವು ‘ರೊಟಿ, ಮಾಟಿ ಮತ್ತು ಬೇಟಿ’ (ರೊಟ್ಟಿ, ಮಣ್ಣು ಮತ್ತು ಹೆಣ್ಣುಮಗು) ರಕ್ಷಿಸಲು ಬದ್ಧರಾಗಿದ್ದಾರೆ.

3. ಮತದ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸರಕಾರ ನುಸುಳುಕೋರರನ್ನು ಬೆಂಬಲಿಸುತ್ತಿದ್ದಾರೆ.

4. ನಾವು ಜಾರ್ಖಂಡ್‌ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೆ ತರುತ್ತೇವೆ. ಇದರ ಅಡಿಯಲ್ಲಿ ಸ್ಥಳೀಯ ನಿವಾಸಿಗಳ ನೋಂದಣಿ ಮಾಡಲಾಗುವುದು ಮತ್ತು ನುಸುಳುಕೋರರನ್ನು ಹೆಕ್ಕಿ ಹೊರಗೆ ಅಟ್ಟಲಾಗುವುದು.

ಡಿಸೆಂಬರನಲ್ಲಿ ಚುನಾವಣೆ ನಡೆಯುವ ಸಾಧ್ಯತೆ!

ಜಾರ್ಖಂಡನಲ್ಲಿ ಡಿಸೆಂಬರ್ 2024 ರ ವರೆಗೆ ಅವರ 81 ಸದಸ್ಯರ ವಿಧಾನಸಭೆಯ ಚುನಾವಣೆ ನಡೆಸುವ ನಿರೀಕ್ಷೆಯಿದೆ; ಏಕೆಂದರೆ ಪ್ರಸ್ತುತ ಸರಕಾರದ ಅಧಿಕಾರಾವಧಿ ಜನವರಿ 2025ರಲ್ಲಿ ಕೊನೆಗೊಳ್ಳುತ್ತದೆ. ಚುನಾವಣಾ ಆಯೋಗವು ಇನ್ನೂ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. 2020 ರ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ 30 ಸ್ಥಾನಗಳನ್ನು, ಭಾರತೀಯ ಜನತಾ ಪಕ್ಷವು 25 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 16 ಸ್ಥಾನಗಳನ್ನು ಪಡೆದಿದ್ದವು.

ಸಂಪಾದಕೀಯ ನಿಲುವು

ಕೇವಲ ಜಾರ್ಖಂಡ್ ಮಾತ್ರವಲ್ಲ, ದೇಶಾದ್ಯಂತ 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟಲು ನಾವು ಟೊಂಕಕಟ್ಟಿ ನಿಲ್ಲುವುದು ಅಗತ್ಯವಾಗಿದೆ. ಇಲ್ಲವಾದರೆ, ‘ಕೇವಲ ಚುನಾವಣೆಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ಹೇಳಲು ಕಟ್ಟರ ಹಿಂದೂ ದ್ವೇಷಿಗಳು ಹಿಂದೆ ಮುಂದೆ ನೋಡಲಾರರು !